ಮುಳ್ಳೇರಿಯ: ದೇಲಂಪಾಡಿ ಸಮೀಪದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವ ಇಂದು(ಮೇ 4) ವಿವಿಧ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಬನಾರಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಕೀರಿಕ್ಕಾಡು ಪ್ರಶಸ್ತಿ ಪ್ರದಾನ, ಯಕ್ಷಗಾನ ಪತ್ರಿಕೋದ್ಯಮ ವಿಚಾರಗೋಷ್ಠಿ, ಕೃತಿ ಬಿಡುಗಡೆ, ಯಕ್ಷ ಗಾಯನ, ತಾಳಮದ್ದಳೆ, ಯಕ್ಷಗಾನ ಬಯಲಾಟ ಜರಗಲಿದೆ.
ಪೂರ್ವಾಹ್ನ 10 ಕ್ಕೆ ಗಣಹೋಮ, 11.30 ಕ್ಕೆ ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಅಪರಾಹ್ನ 2 ಕ್ಕೆ ಯಕ್ಷ ಗಾಯನ, ಚೆಂಡೆ ಮದ್ದಳೆ ಝೇಂಕಾರ, 2.45 ಕ್ಕೆ ಯಕ್ಷಗಾನ ಪತ್ರಿಕೋದ್ಯಮ ವಿಚಾರಗೋಷ್ಠಿ, ಅನುಭವ ಕಥನ ಮತ್ತು ಪತ್ರಿಕೆಗಳ ಪ್ರದರ್ಶನ ನಡೆಯಲಿದ್ದು ಮುರಳಿ ಕಡೆಕಾರ್ ಉಡುಪಿ ಅಧ್ಯಕ್ಷತೆ ವಹಿಸುವರು. ತಾರಾನಾಥ ವರ್ಕಾಡಿ, ಎಂ.ನಾ.ಚಂಬಲ್ತಿಮಾರ್ ವಿಚಾರ ಮಂಡಿಸುವರು. ಪತ್ರಕರ್ತರಾದ ಪುರುಷೋತ್ತಮ ಭಟ್ ಕೆ. ಮತ್ತು ಗಂಗಾಧರ ಕಲ್ಲಪ್ಪಳ್ಳಿ ಸಂವಾದ ನಡೆಸುವರು. ವೆಂಕಟರಾಮ ಭಟ್ ಸುಳ್ಯ ಕಾರ್ಯಕ್ರಮ ನಿರ್ವಹಿಸುವರು.
ಸಂಜೆ 4.15 ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಉದ್ಘಾಟಿಸಿ, ಕೃತಿ ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ಪೆÇ್ರ.ವಿ.ಬಿ.ಅರ್ತಿಕಜೆ ಅಧ್ಯಕ್ಷತೆ ವಹಿಸುವರು. ಡಾ.ರಮಾನಂದ ಬನಾರಿ ಮಂಜೇಶ್ವರ ಅವರ `ಹಾರಿ ಹೋದ ಹಕ್ಕಿಗಳು' ಕೃತಿ ಬಿಡುಗಡೆಗೊಳ್ಳಲಿದ್ದು, ಡಾ|ಬಿ.ಪ್ರಭಾಕರ ಶಿಶಿಲ ಕೃತಿಯ ಕುರಿತು ಅವಲೋಕನ ನಡೆಸುವರು.
ಗುರು ಬಿ.ಗೋಪಾಲಕೃಷ್ಣ ಕುರುಪ್ ಶಿಶಿಲ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ನಡೆಯಲಿದೆ. ಉಜಿರೆ ಅಶೋಕ್ ಭಟ್ ಅಭಿನಂದಿಸುವರು. ಎ.ನಾರಾಯಣ ನಾೈಕ್ ಊಜಂಪಾಡಿ ಉಪಸ್ಥಿತರಿರುವರು. ನಾರಾಯಣ ದೇಲಂಪಾಡಿ, ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರ್ವಹಿಸುವರು.
ಸಂಜೆ 6.15 ರಿಂದ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ `ಸೀತಾಪಹಾರ' ನಡೆಯಲಿದೆ. ರಾತ್ರಿ 9.30 ರಿಂದ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ `ಶ್ರೀ ಕೃಷ್ಣ ವಿಜಯ' ಯಕ್ಷಗಾನ ಬಯಲಾಟ ಜರಗಲಿದೆ.