ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಶೀಘ್ರ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳು ಚುರುಕಾಗುತ್ತಿದ್ದು ಸ್ಥಾನಾರ್ಥಿಗಳ ಆಯ್ಕೆಯ ಕಸರತ್ತು ನಡೆಯುತ್ತಿದೆ.
ಈ ಮಧ್ಯೆ ಕಣ್ಣೂರು ಪರಿಸರದ ಕಾಂಗ್ರೆಸ್ಸ್‍ನ ಮಾಜಿ ಶಾಸಕ, ಬಿಜೆಪಿ ಪರ ಒಲವುಳ್ಳ ಎ.ವಿ.ಅಬ್ದುಲ್ಲ ಕುಟ್ಟಿಯನ್ನು ಬಿಜೆಪಿ ಅಭ್ಯರ್ಥಿಯಾಗಿ ಸ್ಪಾರ್ಧಾ ಕಣಕ್ಕಿಳಿಸುವ ಬಗ್ಗೆ ಕೆಲವು ಸಂದೇಶಗಳು ರವಾನೆಯಾಗುತ್ತಿರುವ ಬೆನ್ನಿಗೆ ಬಿಜೆಪಿ ಉನ್ನತ ಮೂಲಗಳು ಇದನ್ನು ನಿರಾಕರಿಸಿದೆ.
ತೀವ್ರ ಕುತೂಹಲಕರವಾಗಿ ಈ ಉಪ ಚುನಾವಣೆಯಲ್ಲಿ ಜಿಲ್ಲೆಯೊಳಗಿನ ನೇತಾರನೋರ್ವನನ್ನು ಮಾತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದೆಂದು ತಿಳಿಸಿರುವ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪೈವಳಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್ ಕುಂಬಳೆ ಎಂಬವರ ಹೆಸರುಗಳು ಇದೀಗ ಕೇಳಿ ಬರುತ್ತಿದ್ದು , ಈ ಪೈಕಿ ಓರ್ವನಿಗೆ ಸ್ಥಾನಾರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಒದಗಲಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಲೋಕಸಭಾ ಚುನಾಣೆಗೆ ಸ್ಪರ್ಧಿಸಿದ್ದ ಕುಂಟಾರು ರವೀಶ ತಂತ್ರಿ ಅವರಿಗೂ ಅವಕಾಶ ನೀಡಲು ಪಕ್ಷ ಚಿಂತಿಸಿದ್ದರೂ ಅವರು ಸ್ಪರ್ಧಿಸಲು ಆಸಕ್ತಿ ವಹಿಸಿಲ್ಲವೆಂದು ತಿಳಿದುಬಂದಿದೆ.