ಉಪ್ಪಳ/ಪೆರ್ಲ: ಹುಡಿಗಿಯೊಬ್ಬಳು ಪ್ರೇಮಿಸಿದ ಹುಡುಗನ ಜೊತೆಗೆ ಪರಾರಿಯಾಗಲೆತ್ನಿಸಿದ ಘಟನೆ ಸಿನಿಮೀಯ ಶೈಲಿಯಿಂದ ಕೂಡಿ ಕೇರಳ ಹಾಗೂ ಕರ್ನಾಟಕಗಳ ಗಡಿ ಪ್ರದೇಶಗಳಲ್ಲಿ ಗೊಂದಲಮಯ ಪರಿಸ್ಥಿತಿಗೆ ಎಡೆಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಘಟನೆಯ ವಿವರ:
ಕಳತ್ತೂರು ಪ್ರದೇಶದ ವಿದ್ಯಾರ್ಥಿಯೋರ್ವೆ ಪ್ರೀತಿಸಿದ ಹುಡುಗನೋರ್ವನೊಂದಿಗೆ ಮನೆಯವರ ಕಣ್ಣುತಪ್ಪಿಸಿ ಪರಾರಿಯಾಗಲು ಸೋಮವಾರ ಯತ್ನಿಸಿದ್ದು, ಈ ವೇಳೆ ವಿದ್ಯಾರ್ಥಿನಿಯನ್ನು ಪಟಾಯಿಸಿದ ಹುಡುಗ ಹಾಗೂ ಆತನ ತಂಡದವರು ಪಲಾಯನ ಯತ್ನವನ್ನು ತಡೆಹಿಡಿಯಲು ವಿದ್ಯಾರ್ಥಿನಿಯ ಕಡೆಯವರು ಪ್ರಯತ್ನಿಸಿದ ಬಳಿಕ ಈ ಸಿನಿಮೀಯ ಘಟನೆಗಳು ಜನಸಾಮಾನ್ಯರನ್ನು ಗಾಬರಿಗೊಳಪಡಿಸಿತು.
ಉಪ್ಪಳ ಸಮೀಪದ ಪರಿಸರದಿಂದ ಅತಿಯಾದ ವೇಗದಲ್ಲಿ ಪೆರ್ಲ ದಾರಿಯಾಗಿ ಬರುತ್ತಿದ್ದ ವಾಹನವೊಂದನ್ನು ಸಾರಡ್ಕ ಚೆಕ್ ಪೆÇೀಸ್ಟ್ ನಲ್ಲಿ ನಿಲ್ಲಿಸಿದ ವೇಳೆ ಹಿಂದಿನಿಂದ ಅಟ್ಟಾಡಿಸಿಕೊಂಡು ಬಂದ ವಾಹನದವರು ಗಲಾಟೆಗೆ ಮುಂದಾಗಿದ್ದು ಗಲಭೆಗೆ ಕಾರಣವಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ವಿಟ್ಲ ಪೆÇಲೀಸರು ಲಘು ಲಾಠೀ ಪ್ರಹಾರ ನಡೆಸಿದ ಘಟನೆ ಗಡಿ ಪ್ರದೇಶ ಸಾರಡ್ಕದಲ್ಲಿ ನಡೆದಿದೆ.
ಕುಂಬಳೆ ಸಮೀಪದ ಕಳತ್ತೂರು ಪರಿಸರದ ಹುಡುಗಿಯೊಬ್ಬಳನ್ನು ಅಪಹರಣ ಮಾಡಿದ ಬಗ್ಗೆ ಬೆಳಗ್ಗಿನಿಂದಲೇ ಸುದ್ದಿ ಹರಡಿ ಗಡಿ ಭಾಗದಲ್ಲಿ ಹಲವು ಮಂದಿ ಪಹರೆ ಕಾಯುತ್ತಿದ್ದರು. ಮುಸ್ಸಂಜೆ ಸಮಯದಲ್ಲಿ ಪೆರ್ಲದಿಂದ ಬೊಲೆರೋ ಒಂದು ಅತಿಯಾದ ವೇಗದಲ್ಲಿ ವಿಟ್ಲ ಕಡೆಗೆ ಹೋಗುವುದನ್ನು ಹಲವರು ಗಮನಿಸಿ ಅಪಹರಣಕಾರರ ವಾಹನ ಇರಬಹುದೆಂದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆನ್ನಲಾಗಿದೆ.
ಆದರೆ ಬೊಲೆರೋ ಚಾಲಕ ಯಾರ ಸೂಚನೆಗೂ ಬೆಲೆ ಕೊಡದೆ ಹಲವು ವಾಹನಗಳಿಗೆ ಉಜ್ಜಿಕೊಂಡು ಬರುವ ಯತ್ನ ಮಾಡಿದ್ದಾನೆನ್ನಲಾಗಿದೆ. ಇದರಿಂದ ಆ ಭಾಗದ ಒಂದಷ್ಟು ಜನರು ವಾಹನಗಳನ್ನು ಹಿಡಿದುಕೊಂಡು ಬೊಲೆರೋವನ್ನು ಅಟ್ಟಾಡಿಸಿಕೊಂಡು ಬಂದರು. ಜೊತೆಗೆ ಅಡ್ಯನಡ್ಕ ಭಾಗದ ಕೆಲವು ಹುಡುಗರಿಗೂ ವಾಹನವನ್ನು ತಡೆಯುವಂತೆ ಮಾಹಿತಿ ರವಾನಿಸಿದ್ದಾರೆನ್ನಲಾಗಿದೆ.
ಸಾರಡ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದಂತೆ, ಮಾತುಕತೆಗೆ ಮುಂದಾಗುವ ಬದಲಾಗಿ ನೇರ ಬೊಲೆರೊದಲ್ಲಿದ್ದವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಬೊಲೆರೋವನ್ನು ಮಗುಚಿ ಹಾಕುವ ಹಂತದವರೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಪೆÇಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಲಘು ಲಾಠೀ ಪ್ರಹಾರ ನಡೆಸುವ ಅನಿವಾರ್ಯತೆ ಉಂಟಾಯಿತು.
ಲಾಠೀ ಪ್ರಹಾರ ಆರಂಭವಾಗುತ್ತಿದ್ದಂತೆ ವಾಹನಗಳನ್ನು ಸ್ಥಳದಲ್ಲಿ ಬಿಟ್ಟು, ಹಲವು ಮಂದಿ ಪರಾರಿಯಾಗಿದ್ದಾರೆ. ಹಲವರ ಪಾದರಕ್ಷೆಗಳೂ ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾಗಿಬಿದ್ದಿತ್ತು. ಕೆಲವು ದ್ವಿಚಕ್ರ ವಾಹನಗಳು ಚರಂಡಿಗೆ ತಳ್ಳಲ್ಪಟ್ಟಿತ್ತು. ಸುಮಾರು 5 ದ್ವಿಚಕ್ರ ವಾಹನಗಳನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಮಾಲಕರನ್ನು ಪ್ರಕರಣದ ಸ್ಪಷ್ಟತೆ ತೆಗೆದುಕೊಳ್ಳುವ ದೃಷ್ಠಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ ಗೌಡ ನೇತೃತ್ವದ ವಿಟ್ಲ ಪೆÇ್ರಬೆಷನರಿ ಉಪನಿರೀಕ್ಷಕರಾದ ಕೀರ್ತಿ ಕುಮಾರ್ ಹಾಗೂ ರಾಜೇಶ್ ಅವರನ್ನೊಳೊಂಡ ವಿಟ್ಲ ಪೆÇಲೀಸರ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಪರಿಸ್ಥಿಯನ್ನು ತಿಳಿಗೊಳಿಸಿದ್ದಾರೆ. ಬದಿಯಡ್ಕ ಪೆÇಲೀಸರ ತಂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು.
ಲಾಠೀ ಪ್ರಹಾರದ ಸಮಯ ಗಾಯ:
ಸಾರಡ್ಕ ಚೆಕ್ ಪೆÇೀಸ್ಟ್ ಆಸುಪಾಸಿನಲ್ಲಿ ಸಾಕಷ್ಟು ಬೆಳಕಿನ ಲಭ್ಯತೆ ಇಲ್ಲದ ಹಿನ್ನಲೆಯಲ್ಲಿ ಲಾಠೀ ಪ್ರಹಾರದ ಸಮಯದಲ್ಲಿ ಪೆÇ್ರಬೆಷನರಿ ಉಪನಿರೀಕ್ಷಕರೊಬ್ಬರ ಕೈಗೆ ಗಾಯವಾದ ಘಟನೆಯೂ ನಡೆಯಿತು.
ಕೋಮು ಬಣ್ಣ ಹಚ್ಚುವ ಪ್ರಯತ್ನ:
ಕಳತ್ತೂರು ಭಾಗದ ಹುಡುಗಿಗೂ, ಮಾಡ ಮೂಲದ ಹುಡುಗನಿಗೂ ಪ್ರೀತಿ ಹುಟ್ಟಿದ್ದು, ಹುಡುಗಿಯನ್ನು ಹುಡುಗ ಸಿನಿಮೀಯ ಶೈಲಿಯಲ್ಲಿ ಕರೆದುಕೊಂಡು ಹೋಗಲು ಮುಂದಾಗಿದ್ದೇ ಈ ಪ್ರಕರಣಕ್ಕೆ ಕಾರಣವಾಗಿದೆ. ಇಬ್ಬರೂ ಒಂದೇ ಕೋಮಿನವರದರೂ, ಹುಡುಗಿಯನ್ನು ಇನ್ನೊಂದು ಕೋಮಿನ ಯುವಕ ಅಪಹರಣ ಮಾಡಿದ್ದಾನೆ ಎಂದು ಸುದ್ದಿಯಾಗಿದ್ದು, ಸಾರಡ್ಕ ಘಟನೆಗೆ ಕಾರಣವಾಗಿದೆ.
ಉಪ್ಪಳದಲ್ಲಿ ಗಲಭೆ:
ಸುಮಾರು ಮೂರಕ್ಕೂ ಅಧಿಕ ವಾಹನಗಳಲ್ಲಿ ಹುಡುಗಿಯನ್ನು ಕರೆದುಕೊಂಡು ಹೋಗಲು ಕಳತ್ತೂರಿಗೆ ಹುಡುಗನ ಕಡೆಯವರು ಹೋಗಿದ್ದಾರೆನ್ನಲಾಗಿದೆ. ಹುಡುಗಿ ಇದ್ದ ವಾಹನ ಪೆರ್ಮುದೆ - ಬಂದ್ಯೋಡು ರಸ್ತೆಯ ಮೂಲಕ ಉಪ್ಪಳಕ್ಕೆ ತೆರಳಿದ್ದು, ಹಲವು ವಾಹನಗಳಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಅವರ ವಾಹನವನ್ನೂ ಅಟ್ಟಾಡಿಸಿದ ಕೆಲವರು ಐಲ ದೇವಸ್ಥಾನ ತಲುಪಿದ್ದಾರೆ. ಅಲ್ಲಿ ಎರಡು ಸಮುದಾಯದರು ಜಮಾಯಿಸಿ ಗಲಭೆ ಉಂಟಾಗಿದೆ. ಪೆÇಲೀಸರು ಲಾಠೀ ಪ್ರಹಾರವನ್ನೂ ನಡೆಸಿದ್ದಾರೆ. ಗಲಭೆಯ ಕಾರಣ ಮಂಗಳೂರು * ಕಾಸರಗೋಡು ಹೆದ್ದಾರಿ ಕೆಲವು ಕಾಲ ಸಂಚಾರ ಸ್ಥಗಿತವಾಗಿತ್ತು.
ಸಾರಡ್ಕ ಬೊಲೆರೋದಲ್ಲಿ ನಾಲ್ಕು ಜನ!
ಪೆರ್ಮುದೆಯಲ್ಲಿ ಹಾದಿ ತಪ್ಪಿದ ಒಂದು ಬೊಲೆರೋ ಪೆರ್ಲ ತಲುಪಿದ್ದು, ಈ ಮೂಲಕ ಕರ್ನಾಟಕ ಬರಲು ಮುಂದಾಗಿದ್ದಾರೆ. ಸಾರಡ್ಕ ತಲುಪಿದ ಬೊಲೆರೋದಲ್ಲಿ ನಾಲ್ಕು ಯುವಕರಿದ್ದರೆನ್ನಲಾಗಿದೆ. ಇವರಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿ ಮೂವರನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.