ನವದೆಹಲಿ: ದೇಶಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಅಡುಗೆ ಅನಿಲದ ದರವನ್ನು ಹೆಚ್ಚಳ ಮಾಡಲಾಗಿದೆ.
ಭಾರತೀಯ ತೈಲ ನಿಗಮದ ಪ್ರಕಾರ, ಸಬ್ಸಿಡಿ ಹೊಂದಿದ ಅಡುಗೆ ಅನಿಲದ ಸಿಲಿಂಡರ್ ಗೆ ದೆಹಲಿಯಲ್ಲಿ 0.28 ರು. ಹಾಗೂ ಮುಂಬೈನಲ್ಲಿ 0.29ರಷ್ಟು ರು.ಗಳಷ್ಟು ಹೆಚ್ಚಳ ಮಾಡಲಾಗಿದೆ.
ಸಬ್ಸಿಡಿ ರಹಿತ ಸಿಲಿಂಡರ್ ಗೆ ದೆಹಲಿ ಹಾಗೂ ಮುಂಬೈ ಎರಡಕ್ಕೂ ಅನ್ವಯವಾಗುವಂತೆ 6 ರುಪಾಯಿ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಮೇ 1ರಿಂದಲೇ ಜಾರಿಗೆ ಬಂದಿದೆ.