ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಪುಸ್ತಕ ವಿತರಣೆ ಹಾಗೂ ಸಾಂಸ್ಕøತಿಕ ವೈವಿಧ್ಯಗಳು ಭಾನುವಾರ ಹೊಸಬೆಟ್ಟಿನ ಕುಲಾಲ ಸಮಾಜ ಮಂದಿರದಲ್ಲಿ ನಡೆಯಿತು.
ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮನ್ನಿಪ್ಪಾಡಿ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಡಾ.ಸದಾನಂದಕುಮಾರ್, ಉದ್ಯಮಿ ಲಿಂಗಪ್ಪ ಎಂ.ಡಿ, ಉದಯ ಕುಳಾಯಿ, ಪ್ರವೀಣ್ ಕಡಂಬಾರ್, ವಸಂತಕುಮಾರ್ ಚಿದಂಬರ ಬೈಕಂಪಾಡಿ, ಕವಿತ, ಗಿರಿಜಾ ಎಸ್ ಬಂಗೇರ ಉಪಸ್ಥಿತರಿದ್ದರು. ವರ್ಕಾಡಿ, ಮೀಂಜ, ಮಂಜೇಶ್ವರ, ಬದಿಯಡ್ಕ, ಕುಂಬ್ಡಾಜೆ, ಪೈವಳಿಕೆ ಕುಲಾಲ ಶಾಖೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೀರ್ತನಾ ಸಿ.ಎ.ಕೋರಿಕ್ಕಾರ್, ಕೇಶವ ಮಾಸ್ತರ್ ನೂಜಿ, ಶಂಕರ ಕುಂಜತ್ತೂರು, ಬಾಬು ಮೂಲ್ಯ ದೈಗೋಳಿ, ಶಿವಾನಂದ ಹೊಸಬೆಟ್ಟು ಹಾಗೂ ಪೈವಳಿಕೆ ಕುಲಾಲ ಸಂಘಕ್ಕೆ ಗೌರವಾರ್ಪಣೆ ನಡೆಯಿತು. ಜಿಲ್ಲಾ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ತರಗತಿಗಳಲ್ಲಿ ಅತ್ಯುತ್ತಮ ಗಣಾಂಕಗಳಿಂದ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.