ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಕಟ್ಟಡದ ಶೇ.95 ಕಾಮಗಾರಿ ಪೂರ್ಣಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್‍ನಲ್ಲಿ ಅಳವಡಿಸಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ ಎಂದು ಅವಲೋಕನ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಅವರ ಛೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ನಬಾರ್ಡ್ ನ ಸಹಾಯದೊಂದಿಗೆ ನಿರ್ಮಿಸಲಾಗುತ್ತಿರುವ ಹಾಸ್ಪಿಟಲ್ ಬ್ಲಾಕ್‍ನ ಎರಡನೇ ಹಂತದ ಕಾಂಕ್ರೀಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಕಿಟ್‍ಕೋದ ಪ್ರತಿನಿ„ ಸಭೆಯಲ್ಲಿ ತಿಳಿಸಿದರು. ಈ ಕಟ್ಟಡದ ಸೌಲಭ್ಯ ಬಳಸಿ ಸ್ಪೆಷ್ಯಲೈಸ್ಡ್ ವಿಭಾಗ ಆರಂಭಿಸಲು ಸರಕಾರಕ್ಕೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿದೆ.
ಮಳೆ ನೀರು ಸಂಗ್ರಹಿಸಿ ಭೂಗರ್ಭ ಜಲ ಹೆಚ್ಚಳಗೊಳಿಸುವ ಯೋಜನೆ ಜಾರಿಗೊಳಿಸಲು ಗ್ರೌಂಡ್ ವಾಟರ್ ಡಿಪಾರ್ಟ್‍ಮೆಂಟ್ ಜಿಲ್ಲಾ ಅಧಿಕಾರಿಗೆ ಆದೇಶ ನೀಡಲಾಗಿದೆ. ವಿದ್ಯುತ್ ಸಂಪರ್ಕ ಸಂಬಂಧ ಕೆ.ಎಸ್.ಇ.ಬಿ. ಡೆಪ್ಯೂಟಿ ಪ್ರಧಾನ ಎಂಜಿನಿಯರ್‍ಗೆ ಮತ್ತು ಕಿಟ್‍ಕೋ ಗೆ ಪ್ರಾಜೆಕ್ಟ್ ಸಿದ್ಧಪಡಿಸಲು ಆದೇಶ ನೀಡಲಾಗಿದೆ.
ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ಕ್ವಾಟರ್ಸ್ ನಿರ್ಮಾಣ, ಹುಡುಗಿಯರ ಹಾಸ್ಟೆಲ್ ನಿರ್ಮಾಣ ಇತ್ಯಾದಿಗಳಿಗೆ ಬೇಕಾದ ನಿಧಿ ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್‍ನಲ್ಲಿ ಮಂಜೂರು ಮಾಡಿರುವ ಮೊಬಲಗಿನಿಂದ ಪಡೆಯುವಂತೆ ತಿಳಿಸಲಾಯಿತು. ಮೆಡಿಕಲ್ ಕಾಲೇಜು ಆರಂಭಕ್ಕೆ ಇನ್ನು ಯಾವೆಲ್ಲ ಕಾಮಗಾರಿಗಳು ಬಾಕಿಯಿವೆ ಎಂಬ ಬಗ್ಗೆ ಪ್ರಾಜೆಕ್ಟ್ ತಯಾರಿಸುವಂತೆ ಪ್ರಾಜೆಕ್ಟ್ ಕನ್ಸಲ್ಟೆಂಟ್‍ಗಿರುವ ಕಿಟ್‍ಕೊ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದರು.
ಸಭೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೆಜ್ ಸ್ಪೆಷ್ಯಲ್ ಆಫೀಸರ್ ಇ.ಪಿ.ರಾಜ್ ಮೋಹನ್, ಕೆ.ಎಸ್.ಇ.ಬಿ. ಕಾರ್ಯನಿರ್ವಹಣ ಎಂಜಿನಿಯರ್ ಪಿ.ಜಯಕೃಷ್ಣನ್, ಕಿಟ್ಕೋ ಕನ್ಸಲ್ಟೆಂಟ್ ಟಾಂ ಜೋಸ್, ನೀರಾವರಿ ವಿಭಾಗ ಸಹಾಯಕ ಕಾರ್ಯನಿರ್ವಹಣ ಇಂಜಿನಿಯರ್ ಎನ್.ಟಿ.ಗಂಗಧರನ್, ಕೆ.ಎಸ್.ಇ.ಬಿ. ಸಹಾಯಕ ಎಂಜಿನಿಯರ್ ಕೆ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.