ಗ್ರಾಮೀಣ ಗಡಿ ಪ್ರದೇಶದ ವಾಣೀನಗರ ಸರಕಾರಿ ಶಾಲೆ ಸಾಧನೆ; ಸತತ ನಾಲ್ಕನೇ ಬಾರಿ ಶೇ.100 ಫಲಿತಾಂಶ
ಪೆರ್ಲ:ಕೇರಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಪಲಿತಾಂಶ ಸೋಮವಾರ ಮಧ್ಯಾಹ್ನ ಪ್ರಕಟವಾಗಿದ್ದು ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ಗಡಿ ಗ್ರಾಮ ಪ್ರದೇಶದ ಪಡ್ರೆ ವಾಣೀನಗರ ಸರಕಾರಿ ಶಾಲೆಗೆ ಶೇ.100 ಪಲಿತಾಂಶ ಲಭಿಸಿದೆ.
ಪರೀಕ್ಷೆ ಬರೆದ ಎಲ್ಲಾ 33 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಶಾಲಾ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಮಂಡಳಿ ಅಧ್ಯಕ್ಷರು, ಸದಸ್ಯರು, ಸಂಘ ಸಂಸ್ಥೆಗಳು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.
ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿ ಪಡೆದ ಸುಮನಾ:
ವಾಣೀನಗರ ಸರಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ, ಕಜಂಪಾಡಿ ಪೆರಿಯಾಲಿನ ಆದರ್ಶ ಕೃಷಿಕ ದಂಪತಿಗಳಾದ ಗೋಪಾಲಕೃಷ್ಣ ರಾವ್, ಗೀತಾ ಕುಮಾರಿ ಪುತ್ರಿ ಸುಮನಾ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿ ಪಡೆದಿದ್ದಾಳೆ.ಮುಂದೆ ವಿಜ್ಞಾನ ವಿಷಯದಲ್ಲಿ ಪ್ಲಸ್ ಟು ಮಾಡಿ ಎಂ.ಎಸ್ಸಿ ಪೂರೈಸುವ ಗುರಿ ಹೊಂದಿದ್ದಾನೆ.
...........................................................................................................................................................................
ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಶೇ.98.85 ಫಲಿತಾಂಶ:
ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 87 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು 86ಮಂದಿ ಉತ್ತೀರ್ಣರಾಗಿದ್ದಾರೆ.ಶಾಲೆಗೆ ಶೇ.98.85 ಫಲಿತಾಂಶ ಲಭಿಸಿದೆ.ಇಬ್ಬರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿ ಪಡೆದಿದ್ದಾರೆ.
..........,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಶೇ.100 ಫಲಿತಾಂಶ
ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದೆ.
62 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಎ ಪ್ಲಸ್ ಪಡೆಯುವಲ್ಲಿ ವಿಫಲ:
ಇಂಗ್ಲೀಷ್ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿಗಳು ಎ ಪ್ಲಸ್ ಶೇಣಿ ಪಡೆಯಲು ವಿಫಲರಾಗಿದ್ದು ಉಳಿದಂತೆ ಅವರು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿ ಪಡೆದಿದ್ದಾರೆ.
............................................................................
ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆ 99 ಶೇ
ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ 210 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು 207 ಮಂದಿ ಉತ್ತೀರ್ಣರಾಗಿದ್ದಾರೆ.ಶಾಲೆಗೆ 99 ಫಲಿತಾಂಶ ಲಭಿಸಿದೆ.8 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
.......................................................................................................................
ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಶೇ 100 ಫಲಿತಾಂಶ
ಕುಂಬಳೆ:ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಲಭಿಸಿದೆ.
ಆಯಿಷತ್ ಝುಬೈರಿಯಾ ಎ. ಮತ್ತು ಕೃತಿ ರೈ ಡಿ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಶೇಣಿ ಪಡೆದಿದ್ದಾರೆ.