HEALTH TIPS

ನಿತ್ಯಕರ್ಮಗಳಿಂದ ಬೌದ್ಧಿಕ, ಮಾನಸಿಕ ವಿಕಾಸ : ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ- ಪೆರಡಾಲ ಶ್ರೀ ಉದನೇಶ್ವರ ವಸಂತವೇದ ಪಾಠ ಶಿಬಿರ ಸಂಪನ್ನ

         
    ಬದಿಯಡ್ಕ: ಶ್ರದ್ಧಾ ಭಕ್ತಿಯಿಂದ ನಿತ್ಯಕರ್ಮಗಳನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬಂದರೆ ಜೀವನದಲ್ಲಿ ಯಶಸ್ಸನ್ನು ಗಳಿಸುವುದಲ್ಲದೆ ಬೌದ್ಧಿಕವಾಗಿಯೂ, ಮಾನಸಿಕವಾಗಿಯೂ ವಿಕಾಸವಾಗಲು ಸಾಧ್ಯವಿದೆ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅಭಿಪ್ರಾಯಪಟ್ಟರು.
     ಕುಂಬಳೆ ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ಬೇಸಿಗೆ ರಜೆಯಲ್ಲಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ವಸಂತ ವೇದಪಾಠ ಶಿಬಿರದ ಶನಿವಾರ ನಡೆದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
    ಇಲ್ಲಿನ ವೇದಪಾಠ ಶಾಲೆಗೆ ಪರಂಪರೆಯಿದೆ. ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಲ್ಲಿ ವೇದಾಧ್ಯಯನವನ್ನು ಕೈಗೊಂಡು ಉನ್ನತ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ನಾವು ಎಲ್ಲೇ ಇರಲಿ ಹೇಗೇ ಇರಲಿ ಸಂಧ್ಯಾವಂದನೆಗೆ ಚ್ಯುತಿಬಾರದಂತೆ ನೋಡಿಕೊಳ್ಳಬೇಕಾಗಿದೆ. ಗುರುಹಿರಿಯರಿಗೆ, ಮಾತಾಪಿತೃಗಳಿಗೆ ಗೌರವವನ್ನು ನೀಡಬೇಕು. ಹಿರಿಯರಿಂದ ಬಂದಂತಹ ಧಾರ್ಮಿಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರವಾದ ಹೊಣೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ವಸಂತವೇದ ಶಿಬಿರವು ಅನೇಕ ವರ್ಷಗಳಿಂದ ಇಲ್ಲಿ ನಡೆದುಬರುತ್ತಿದೆ. ಪಾಲಕರ ಸಹಕಾರದಿಂದ ಮಾತ್ರ ಇಂತಹ ಶಿಬಿರಗಳು ಮುಂದುವರಿಯಲು ಸಾಧ್ಯ ಎಂದು ಅವರು ತಿಳಿಸಿದರು.
     ಕುಂಬಳೆ ಹೊಸದುರ್ಗ ಹೆ`ವ ಬ್ರಾಹ್ಮಣ ಸಭಾದ ಅಧ್ಯಕ್ಷ ಶಂಕರನಾರಾಯಣ ಭಟ್ ಕುಳಮರ್ವ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಸಂತ ವೇದಪಾಠಶಾಲೆಯ ಹಳೆವಿದ್ಯಾರ್ಥಿ, ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಶ್ರೀಕೃಷ್ಣ ಶರ್ಮ ಕಡಪ್ಪು ಅವರನ್ನು ಸನ್ಮಾನಿಸಲಾಯಿತು. ವೇದ ಅಧ್ಯಾಪಕ ಮಹಾಗಣಪತಿ ಶರ್ಮ ಅಳಕ್ಕೆ ವರದಿ ಮಂಡಿಸಿದರು. ಸಂಸ್ಕøತ ಅಧ್ಯಾಪಕ ಗೋವಿಂದ ಭಟ್ ಎಡನೀರು, ವೈ.ಕೆ.ಗೋವಿಂದ ಭಟ್, ಶ್ಯಾಮಪ್ರಸಾದ ಕಬೆಕ್ಕೋಡು, ವೇದ ಅಧ್ಯಾಪಕ ಮುರಲೀಧರ ಶರ್ಮ ಅಳಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಧ್ಯಾಪಕರುಗಳಾದ ವೇದಮೂರ್ತಿ ಶಿವರಾಮ ಭಟ್ ಸ್ವಾಗತಿಸಿ, ವೇದಮೂರ್ತಿ ಮಧುಶಂಕರ ಭಟ್ ವಂದಿಸಿದರು. ಪಾಕತಜ್ಞ ಉದಯಶಂಕರ ಪೆರಡಾಲ, ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಸಂಪೂರ್ಣ ಸಹಕಾರ ನೀಡಿದ್ದರು.
      ಒಟ್ಟು ಮೂರು ತರಗತಿಗಳಲ್ಲಾಗಿ 48ಮಂದಿ ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಉಚಿತ ವೇದಾಧ್ಯಯನ ಮಾಡಿದರು.
 ವೇದಪಾಠದೊಂದಿಗೆ ಸಂಸ್ಕøತ ಶ್ಲೋಕಗಳು, ಭಗವದ್ಗೀತೆ, ವಿಷ್ಣು ಸಹಸ್ರನಾಮ ಸ್ತೋತ್ರಗಳನ್ನು ಮಕ್ಕಳಿಗೆ ಮಾರ್ಗದರ್ಶನ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries