ಮಧೂರು: ಬಂಟರ ಸಂಘದ ಮಧೂರು ಪಂಚಾಯತಿ ಘಟಕದ ಸಭೆಯು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ಜರಗಿತು. ಘಟಕದ ಅಧ್ಯಕ್ಷ ಕುತ್ತಾರುಗುತ್ತು ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮಧೂರು ಪಂಚಾಯತಿ ವ್ಯಾಪ್ತಿಯಲ್ಲಿ ಬಂಟ ಸಮಾಜದವರ ಸಮಸ್ಯೆಗಳ ಕುರಿತು ಸಮೀಕ್ಷೆಯೊಂದನ್ನು ನಡೆಸಲು ಹಾಗು ಸಿರಿಬಾಗಿಲು, ಮಾಯಿಪ್ಪಾಡಿ ಮತ್ತು ಮಧೂರು ಗ್ರಾಮ ಘಟಕಗಳನ್ನು ರೂಪೀಕರಿಸಲು ತೀರ್ಮಾನಿಸಲಾಯಿತು.
ನೂತನವಾಗಿ ರೂಪೀಕರಿಸಲಾದ ಸಿರಿಬಾಗಿಲು ಗ್ರಾಮ ಬಂಟರ ಸಂಘದ ಅಧ್ಯಕ್ಷರಾಗಿ ಕಣ್ಣೂರುಗುತ್ತು ನಾರಾಯಣ ಶೆಟ್ಟಿ ಕಜೆ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಪಕಳ, ಉಪಾಧ್ಯಕ್ಷರಾಗಿ ಶೀನ ಶೆಟ್ಟಿ ಕಜೆ ಹಾಗು ಮತ್ತಿತರರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಮಧೂರು ಪಂಚಾಯತಿ ಘಟಕವನ್ನು ನವೀಕರಿಸಲಾಯಿತು. ಅದರಂತೆ ಕುತ್ತಾರುಗುತ್ತು ರಾಮಕೃಷ್ಣ ಆಳ್ವ ಕೂಡ್ಲು ಅವರನ್ನು ಅಧ್ಯಕ್ಷರನ್ನಾಗಿಯೂ, ಬಾಲಕೃಷ್ಣ ಶೆಟ್ಟಿ ಉಡುವ, ಬಾಲಕೃಷ್ಣ ಶೆಟ್ಟಿ ಮಧೂರು, ಪುರಂದರ ಶೆಟ್ಟಿ ಮಾಯಿಪ್ಪಾಡಿ ಅವರನ್ನು ಉಪಾಧ್ಯಕ್ಷರುಗಳನ್ನಾಗಿಯೂ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಕುಮಾರ್ ಶೆಟ್ಟಿ ಅಡ್ಕ, ಕಾರ್ಯದರ್ಶಿಗಳಾಗಿ ಗಣೇಶ್ ರೈ ನಾಯಕ್ಕೋಡು, ಅನಿಲ್ ಪಕಳ ಅಡ್ಕ, ಗಣೇಶ್ ಭಂಡಾರಿ ಮಾಯಿಪ್ಪಾಡಿ, ಕೃಷ್ಣ ಪ್ರಸಾದ್ ಶೆಟ್ಟಿ ಮಧೂರು ಹಾಗು ಕೋಶಾಧಿಕಾರಿಯಾಗಿ ರಾಮ ಶೆಟ್ಟಿ ಮಾಸ್ತರ್ ಅವರನ್ನು ಆರಿಸಲಾಯಿತು.
ಸಭೆಯಲ್ಲಿ ವಲಯ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು. ಬಾಲಕೃಷ್ಣ ಶೆಟ್ಟಿ ಉಡುವ, ರಾಮ ಶೆಟ್ಟಿ ಮಾಸ್ತರ್, ಗಣೇಶ್ ರೈ, ರಜನಿ, ಸುಜಾತ, ಶುಭಾ ಆರ್.ಶೆಟ್ಟಿ, ಸುನೀತಾ ಆರ್.ಶೆಟ್ಟಿ, ದಿವ್ಯಾ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಲಯ ಸಂಘದ ಜೊತೆ ಕಾರ್ಯದರ್ಶಿ ಬಾಬು ರೈ ಗಂಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಂಟರ ಸಂಘದ ಕೂಡ್ಲು ಘಟಕ ಸಭೆಯು ಮೇ 5 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಗಂಗೆ ಬಾಲಕೃಷ್ಣ ರೈಗಳ ನಿವಾಸದಲ್ಲಿ ಹಾಗು ಸಿರಿಬಾಗಿಲು ಗ್ರಾಮ ಘಟಕದ ಸಭೆಯು ಕಜೆ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಮೇ ತಿಂಗಳ 7 ರಂದು ಮಂಗಳವಾರ ಸಂಜೆ 4 ಗಂಟೆಗೆ ಜರಗಲಿರುವುದೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.