ಕಾಸರಗೋಡು: ಲೋಕಸಭೆ ಚುನಾವಣೆಯ ಮತಗಣನೆ ಕರ್ತವ್ಯದ 465 ಸಿಬ್ಬಂದಿಗಾಗಿ ರಾಂಡಮೈಸೇಷನ್ ಪ್ರಕ್ರಿಯೆ ನಡೆಸಲಾಗಿದೆ.
ಮತಗಣನೆಗಾಗಿ ತಲಾ 155 ಮಂದಿ ಮತ ಎಣಿಕಾ ಮೇಲ್ವಿಚಾರಕರು, ಸಹಾಯಕ ಮೇಲ್ವಿಚಾರಕರು, ಸಹಾಯಕರು, ಮೈಕ್ರೋ ಒಬ್ಸರ್‍ವರ್ ಮೊದಲಾದವರಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಂಡಮೈಸೇಷನ್ ನಡೆದಿದೆ.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್ ಅವರ ಸಮಕ್ಷಮದಲ್ಲಿ ಪ್ರಕ್ರಿಯೆ ನಡೆಸಲಾಗಿದ್ದು, ಮತಗಣನೆ ಸಿಬ್ಬಂದಿಗೆ ನೇಮಕ ಆದೇಶ ಪ್ರಕಟಿಸಲಾಯಿತು. ಎರಡನೇ ಹಂತದ ರಾಂಡಮೈಸೇಷನ್ ಕೌಂಟಿಂಗ್ ಸಿಬ್ಬಂದಿ ಹೊಣೆ ವಹಿಸಿಕೊಳ್ಳುವ ವಿಧಾನಸಭೆ ಕ್ಷೇತ್ರ ಮತ್ತು ಮೂರನೇ ಹಂತದ ರಾಂಡಮೈಸೇಷನ್ ಕೌಂಟಿಂಗ್ ಟೇಬಲ್ ನಿಗದಿಪಡಿಸಲಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರಕ್ಕಾಗಿ 14 ಕೌಂಟಿಂಗ್ ಟೇಬಲ್, ಕಾಸರಗೋಡಿಗಾಗಿ 14, ಉದುಮಕ್ಕಾಗಿ 12, ಕಾಂಞಂಗಾಡಿಗಾಗಿ 14, ತ್ರಿಕರಿಪುರಕ್ಕಾಗಿ 13, ಕಲ್ಯಾಶೇರಿಗಾಗಿ 12, ಪಯ್ಯನ್ನೂರಿಗಾಗಿ 12 ಹೀಗೆ ಒಟ್ಟು 91 ಮತ ಎಣಿಕಾ ಟೇಬ್ ಸಜ್ಜುಗೊಳಿಸಲಾಗುವುದು.
ಆಯಾ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿಗಳಿಗೆ, ಎಣಿಕಾ ಟೇಬಲ್‍ಗಳ ಉಸ್ತುವಾರಿ ವಹಿಸಲಾಗುವುದು. ಅಂಚೆ ಮತಗಳ ಎಣಿಕೆ ಚುನಾವಣೆ ಅಧಿಕಾರಿಯ ನೇರ ನಿಯಂತ್ರಣದಲ್ಲಿ ನಡೆಯಲಿದೆ. ನೇಮಕಾತಿ ಲಭಿಸಿದ ಮತ ಎಣಿಕಾ ಮೇಲ್ವಿಚಾರಕರು, ಸಹಾಯಕರಿಗಾಗಿ ಮೇ 17ರಂದು ಬೆಳಿಗ್ಗೆ 9.30ರಿಂದ ಮೂರು ತಂಡಗಳ ರೂಪದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ತರಬೇತಿ ನೀಡಲಾಗುವುದು. ಮೈಕ್ರೋ ಒಬ್ಸರ್‍ವರ್‍ಗಳ ತರಬೇತಿ ಕಾರ್ಯಕ್ರಮ ಮೇ 21ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.