HEALTH TIPS

ನದಿ ಜನ ಸಂಗ್ರಹ: ನೀರಿನ ಬರಕ್ಕೆ ಶಾಶ್ವತ ಪರಿಹಾರಕ್ಕೆ ಯತ್ನ


         ಕಾಸರಗೋಡು:  ನದಿ ಜಲವನ್ನು ನೈಸರ್ಗಿಕವಾಗಿ ಸಂಗ್ರಹಿಸಿ ಜಿಲ್ಲೆಯ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸಲು ಶಾಸ್ತ್ರೀಯ ಯೋಜನೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಮಂಜೇಶ್ವರ ತಾಲೂಕಿನಲ್ಲಿ 418 ಕಿರು ಕೆರೆಗಳನ್ನು ನಿರ್ಮಿಸಲಾಗುವುದು. 
     ಜಿಲ್ಲಾಡಳಿತದ ನೇತೃತ್ವದಲ್ಲಿ ಜಾರಿಗೊಳಿಸುವ ನದಿತಟ ಅಭಿವೃದ್ಧಿ ಯೋಜನೆ ಅಂಗವಾಗಿ ಈ ಚಟುವಟಿಕೆ ತ್ವರಿತಗತಿಯಲ್ಲಿ ಸಾಗುತ್ತಿದೆ.ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ 5 ನದಿ ತಟಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ನದಿಗಳ ಬದಿಯ ವಿವಿಧ ಪ್ರದೇಶಗಳಲ್ಲಿ ಕಿರು ಕೆರೆಗಳ ಸಹಿತ ಜಲಾಶಯಗಳ ನಿರ್ಮಾಣ ನಡೆಯಲಿದೆ. ಖಾಸಗಿ, ಸರಕಾರಿ ಜಾಗಗಳ ಸಹಿತ 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಪತ್ತೆಮಾಡಲಾಗಿದೆ. ಮೇ 15ರ ಮುಂಚಿತವಾಗಿ ನಿರ್ಮಾಣ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ.
   ನದಿಗಳಲ್ಲಿ ಸಹಜವಾಗ ಹರಿದು ಹೋಗುವ ನಿರನ್ನು ಬಳಸಿ, ನದಿಗಳ ಬದಿಯಲ್ಲಿ ನಿರ್ಮಿಸಲಾಗುವ ಜಲಶಯಗಳಲ್ಲಿ ಸಂಗ್ರಹಿಸಿ ಬಳಸುವ ಮಹತ್ವದ ಯೋಜನೆ ಇದಗಿದೆ. ಹತ್ತರಿಂದ ಹದಿನೈದು ಡಿಗ್ರಿ ವರೆಗಿನ ವ್ಯತ್ಯಾಸದಲ್ಲಿ ನೂತನ ಕಾಲುವೆಗಳನ್ನು ನಿರ್ಮಿಸಿ ಜಲಾಶಯಗಳಿಗೆ ನದಿ ನೀರು ತಲಪುವಂತೆ ಮಡಲಾಗುವುದು. ಕನಿಷ್ಠ 7:9:3 ಮೀಟರ್ ಆಳದಲ್ಲಿರುವ ಕೆರೆಗಳನ್ನು ನಿರ್ಮಿಸಲಶಾಗುವುದು. ಜಾಲ ಲಭ್ಯತೆಗೆ ಅನುಸರಿಸಿ ಆಳ-ಅಗಲದಲ್ಲಿ ವ್ಯತ್ಯಾಸಗಳಿರುವುವು. ಶಿರಿಯದಲ್ಲಿ 179, ಉಪ್ಪಳದಲ್ಲಿ 150, ಮೊಗ್ರಾಲ್ ನಲ್ಲಿ 74, ಮಂಜೇಶ್ವರದಲ್ಲಿ 4, ಕುಂಬಳೆಯಲ್ಲಿ 4 ಜಲಶಯಗಳ ನಿರ್ಮಾಣ ವಾಗಲಿವೆ. ಈ ಮೂಲಕ ಸಮೀಪ ಪ್ರದೇಶಗಳ ನಿರಿನ ಮಟ್ಟ ಹೆಚ್ಚಳಕ್ಕೆ ಪೂರಕ ವತಾವರಣ ಸೃಷ್ಟಿಯಾಗಲಿದೆ. ಅಧಿಕ ಜಲ ಲಭಿಸುವಲ್ಲಿ ಹೆಚ್ಚುವರಿ ಜಲಾಶಯಗಳ ನಿರಾಣ ನಡೆಯಲಿದೆ.
    ಲ್ಯಾರೈಟ್ ಮಣ್ಣಿರುವ ಪ್ರದೇಶವಾಗಿರುವ ಮಂಜೇಶ್ವರ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಪ್ರತ್ಯೇಕ ಆಸಕ್ತಿ ಪ್ರಕಾರ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳ್ಳಲಿದೆ. ಮುಂದನವರ್ಷಗಳಲ್ಲಿ ಕಾಸರಗೋಡು, ಮಂಜೆಶ್ವರತಾಲೂಕುಗಳಲ್ಲಿ ಈ ನಿಟ್ಟಿನಲ್ಲಿ 5ಸಾವಿರ ಕೆರೆಗಳನ್ನು ನಿರ್ಮಿಸುವ ಉದ್ದೇಶಗಳಿವೆ. ಯೋಜನೆಗೆ ಅಗತ್ಯವಿರುವ ನಿಧಿ ಕಾಸರಗೋಫಡು ಅಭಿವೃದ್ಧಿ ಪ್ಯಾಕೆಜ್ನಿಂದ ಬಳಸಲಾಗುವುದು.
     ಈ ಕುರಿತು ಮಾತುಕತೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ವಿಶೇಷ ಸಭೆ ಜರುಗಿತು.ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು, ಮಂಜೇಶ್ವರಗಳ, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್, ಕಾಸರಗೋಡು ಭಿವೃದ್ಧಿ ಪೆಕೆಜ್ ಸ್ಪಷ್ಯಲ್ ಆಫೀಸರ್ ಇ.ಪಿ.ರಾಜ್ ಮೋಹನ್, ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ವಿವಿಧ ಗ್ರಾಮಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries