ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನಲ್ಲಿ 459/16 ರ ಎಲ್.ಡಿ.ಕ್ಲರ್ಕ್ ಕನ್ನಡ ಬಲ್ಲ ಹುದ್ದೆಗೆ ಕೂಡಲೇ ಪಿ.ಎಸ್.ಸಿ. ಪರೀಕ್ಷೆ ನಡೆಸಿ ರ್ಯಾಂಕ್ ಲಿಸ್ಟ್ ಮೂಲಕ ನೇಮಕಾತಿ ನಡೆಸಿ ಈ ಪ್ರದೇಶದ ಇಲಾಖೆಗಳ ಉದ್ಯೋಗ ಸಮಸ್ಯೆಗಳನ್ನು ಬಗೆ ಹರಿಸಲು ಪಿ.ಎಸ್.ಸಿ. ಅಧ್ಯಕ್ಷರನ್ನು ಭೇಟಿಯಾಗಿ ಒತ್ತಾಯಿಸಲಾಯಿತು.
ಈ ಕುರಿತು ಶೀಘ್ರದಲ್ಲೇ ಆನ್‍ಲೈನ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆಯೆಂದು ಚೆಯರ್‍ಮೇನ್ ಕನ್ನಡ ಹೋರಾಟ ಸಮಿತಿಯ ನಿಯೋಗಕ್ಕೆ ತಿಳಿಸಿದ್ದಾರೆ.
ಆನ್‍ಲೈನ್ ಪರೀಕ್ಷೆ ನಡೆಸುವ ಕುರಿತು ಕನ್ನಡ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಗಾವಹಿಸಿ ಪರೀಕ್ಷೆಯಲ್ಲಿ ಹಾಜರಾಗಿ ಉದ್ಯೋಗ ಗಿಟ್ಟಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪದಾ„ಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಮೊದಲಾದವರು ತಿರುವನಂತಪುರಕ್ಕೆ ಹೋದ ನಿಯೋಗದಲ್ಲಿದ್ದರು.