ಕುಂಬಳೆ: ಮೆಡಿಸಿಟಿ ಹೆಲ್ತ್ ಕೇರ್ ಕುಂಬಳೆ ಮತ್ತು ಕುಂಬಳೆ ಪ್ರೆಸ್ ಪೋರಂ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಇಂದು(ಶನಿವಾರ) ಬೆಳಿಗ್ಗೆ 9 ರಿಂದ ಕುಂಬಳೆ ಮೆಡಿಸಿಟಿ ಹೆಲ್ತ್ ಕೇರ್ ಪರಿಸರದಲ್ಲಿ ನಡೆಯಲಿದೆ.
ಕುಂಬಳೆ ಪ್ರೆಸ್ ಪೋರಂ ಅಧ್ಯಕ್ಷ ಸುರೇಂದ್ರನ್ ಚೀಮೇನಿ ವೈದ್ಯಕೀಯ ಶಿಬಿರ ಉದ್ಘಾಟಿಸುವರು. ಶಿಬಿರದಲ್ಲಿ ಮಂಗಳೂರು ಏನಪೋಯ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಮುಹಮ್ಮದ್ ಸಾದಿಕ್, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ಲಿಯೋ ಮೊದಲಾದವರು ಪಾಲ್ಗೊಂಡು ಪರಿಶೀಲನೆ ನಡೆಸುವರು. ಸಂಪೂರ್ಣ ಉಚಿತವಾಗಿ ನಡೆಯುವ ಶಿಬಿರದಲ್ಲಿ ಉಚಿತ ಮದ್ದುಗಳನ್ನೂ ವಿತರಿಸಲಾಗುವುದು. ಸಿಬಿಸಿ, ಸಿಎಫ್‍ಟಿ, ಟಿಎಫ್‍ಟಿ ಹಾಗೂ ಆರ್‍ಏಪ್‍ಟಿ ಪರಿಶೀಲನೆಗಳನ್ನು ಶೇ.20ರ ರೀಯಾಯಿತಿಯಲ್ಲಿ ನೀಡಲಾಗುತ್ತದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.