HEALTH TIPS

ಶುಚೀಕರಣ ಯಜ್ಞ : ಮಾದರಿಯಾದ ಸ್ಥಳೀಯಾಡಳಿತ ಸಂಸ್ಥೆಗಳು


     ಕಾಸರಗೋಡು:  ರಾಜ್ಯ ಸರಕಾರದ ಶುಚಿತ್ವ ಯಜ್ಞವನ್ನು ಅನುಷ್ಠಾನಗೊಳಿಸುವಲ್ಲಿ ಮಾದರಿ ರೂಪದಲ್ಲಿ ಚಟುವಟಿಕೆ ನಡೆಸಿದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆಲವು ಗರಿಷ್ಠ ಮಟ್ಟದಲ್ಲಿ ಸಾಧನೆ ನಡೆಸಿ ಗಮನಸೆಳೆದಿದೆ.
      ಈ ಸಾಲಿನಲ್ಲಿ ಮಡಿಕೈ ಗ್ರಾಮಪಂಚಾಯತ್ ನ ಸಾಧನೆ ಗಮನಾರ್ಹವಾಗಿದೆ. ಏಕಕಾಲಕ್ಕೆ 15 ವಾರ್ಡ್ ಗಳನ್ನು ಶುಚಿಗೊಳಿಸುವ ಮೂಲಕ ಈ ಪಂಚಾಯತ್ ತನ್ನ ಜನ ಬೆಂಬಲ ಸಾಬೀತುಪಡಿಸಿದೆ. ಚಾಳಕ್ಕಡವು ಪ್ರದೇಶದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಉದ್ಘಾಟಿಸಿರು. ಕುಟುಂಬಶ್ರೀ ಕಾರ್ಯಕರ್ತರು, ವಿವಿಧ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಆಟೋರಿಕ್ಷಾ ಕಾರ್ಮಿಕರು, ವಿವಿಧ ಕ್ಲಬ್ ಗಳ ಕಾರ್ಯಕರ್ತರು ಶುಚೀಕರಣಕ್ಕೆ ಹೆಗಲು ನೀಡಿದರು. 
       ಅಜಾನೂರು ಗ್ರಾಮಪಂಚಾಯತ್ ನ 23 ವಾರ್ಡ್ ಗಳ ಶುಚೀಕರಣ ಏಕಕಾಲಕ್ಕೆ ನಡೆಸಲಾಗಿದೆ. ಗ್ರಾಮಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್ ಉದ್ಘಾಟಿಸಿದರು. ವಾರ್ಡ್ ಗಳ ಶುಚೀಕರಣಕ್ಕೆ ಆಯಾ ವಾರ್ಡ್ ಸದಸ್ಯರು ನೇತೃತ್ವ ವಹಿಸಿದರು.
     ಪಳ್ಳಿಕ್ಕರೆ ಗ್ರಾಮಪಂಚಾಯತ್ ನ ಶುಚೀಕರಣ ಸಂಬಂಧ ಆಲಕ್ಕೋಡ್ ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ಪಿ.ಇಂದಿರಾ ಶುಚಿತ್ವಕ್ಕೆ ಚಾಲನೆ ನೀಡಿದರು. ಪಾಕಂ-ಪೆರಿಯ ರಸ್ತೆ ಬದಿಗಳ ಶುಚೀಕರನಕ್ಕೆ ಅವರು ನೇತೃತ್ವ ವಹಿಸಿದ್ದರು. ಎರಡೂ ದಿನಗಳಲ್ಲಿ 16 ವಾರ್ಡ್ ಗಳ ಶುಚೀಕರಣ ನಡೆದಿದೆ.
     ಬಳಾಲ್ ಗ್ರಾಮಪಂಚಾಯತ್ ವ್ಯಾಪ್ತಿಯ ಶುಚೀಕರಣಕ್ಕೆ ಎಡತ್ತೋಡ್ ವಾರ್ಡ್ ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಚಾಲನೆ ನೀಡಿದರು. ವೆಸ್ಟ್ ಏಳೇರಿಯಲ್ಲಿ ಅಧ್ಯಕ್ಷೆ ಪ್ರಸೀತಾ ರಾಜನ್ ಅವರ ನೇತೃತ್ವದಲ್ಲಿ, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಲ್ಲಿ ಆಯಾ ಜನಪ್ರತಿನಿಧಿಗಳ ನೇತೃತ್ವದಲ್ಲಿ ಶುಚೀಕರಣ ನಡೆದುವು. 
     ಕಾಞÂಂಗಾಡ್ ನಗರಸಭೆ ವ್ಯಾಪ್ತಿಯ ಶುಚೀಕರಣಕ್ಕೆ ಅಧ್ಯಕ್ಷ ವಿ.ವಿ.ರಮೇಶನ್ ಚಾಲನೆ ನೀಡಿದರು.ಮನೆ ಮನೆ ಸಂದರ್ಶನ ನಡೆಸಿ ಶುಚೀಕರಣ ಜಾಗೃತಿ ಸಂದೇಶ ನೀಡಲಾಯಿತು.
    ಭಾನುವಾರ ಸಂಜೆ ಶುಚೀಕರಣ ಯಜ್ಞ ಸಮಾರೋಪಗೊಂಡಿದೆ. ಮೇ 9 ರಂದು ಜಿಲ್ಲಾಡಳಿತೆ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ನಡೆಸಲಾದ ಶುಚೀಕರಣ ಕಾಯಕವೂ ಯಶಸ್ವಿಯಾಗಿತ್ತು. 4 ಸಾವಿರಕ್ಕೂ ಅಧಿಕ ಮಂದಿ ಸೇರಿ ನಡೆಸಿದ್ದ ಆ ಕಾಯಕದಲ್ಲಿ 15 ಟನ್ ಗೂ ಅಧಿಕ ತ್ಯಾಜ್ಯ ಸಂಗ್ರಹಿಸಲಾಗಿತ್ತು.
     ಡೆಂಗೆ ಜ್ವರದ ಭೀತಿಯ ಹಿನ್ನೆಲೆಯಲ್ಲಿ ಚೆಂಗಳ ಗ್ರಾಮಪಂಚಾಯತ್ ನಲ್ಲಿ ನಡೆದ ಶುಚೀಕರಣ:
   ಡೆಂಗೆ ಜ್ವರ ಭೀತಿಯ ಹಿನ್ನೆಲೆಯಲ್ಲಿ ಸಮಗ್ರ ಪ್ರತಿರೋಧ ಚಟುವಟಿಕೆ ನಡೆಸುವ ಮೂಲಕ ಚೆಂಗಳ ಗ್ರಾಮಪಂಚಾಯತ್ ಮಾದರಿ ಕಾಯಕ ನಡೆಸಿದೆ. 
      ರಾಜ್ಯ ಸರಕಾರದ ತೀವ್ರ ಶುಚಿತ್ವ ಯಜ್ಞದ ಅಂಗವಾಗಿ ಎರಡು ದಿನ (ಶನಿವಾರ,ಭಾನುವಾರ)ಗಳ ಕಾಲ ನಡೆಸಿದ ಶುಚಿತ್ವ ಚಟುವಟಿಕೆಗಳು ಪರಿಣಾಮಕಾರಿಯಾಗಿವೆ. ಕಳೆದ ವರ್ಷ ಈ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಭೀತಿ ಹುಟ್ಟಿಸಿದ್ದ ಡೆಂಗೆಜ್ವರದ ಹಿನ್ನೆಲೆಯಲ್ಲಿ ಈ ಚಟುವಟಿಕೆ ಆರೋಗ್ಯಪೂರ್ಣ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿದೆ.
    ತ್ಯಾಜ್ಯ ನಿವಾರಣೆ ಮತ್ತು ಆರೋಗ್ಯ ಜಾಗೃತಿ ಚಟುವಟಿಕೆಗಳು ಈ ಸಂದರ್ಭ ನಡೆದುವು. ಈ ಪ್ರದೇಶದ ತೋಟಗಳಲ್ಲಿ, ಅಡಕೆಯ ಹಾಲೆಗಳಲ್ಲಿ ನೀರು ಕಟ್ಟಿನಿಲ್ಲದಂತೆ ನೋಡಿಕೊಳ್ಳಲು ಜನಜಾಗೃತಿ ಮೂಡಿಸಲಾಗಿದೆ. ಕಳೆದ ವರ್ಷ ಜ್ವರ ಹರಡುವಿಕೆಗೆ ಇವು ಪ್ರಧಾನ ಕಾರಣವಾಗಿದ್ದುವು. ಚೆರ್ಕಳ ಪೇಟೆ, ಪಾಡಿ ಶಾಲೆ, ಪಿಲಾಂಕಟ್ಟೆ ಶಾಲೆ ಆವರಣ, ಆರ್ಲಡ್ಕ ಕಾಲನಿ ಸಹಿತ ಪ್ರದೇಶಗಳಲ್ಲಿ ಶುಚೀಕರಣ ನಡೆಯಿತು.
      ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ ಚಟುವಟಿಕೆಗಳನ್ನು ಉದ್ಘಾಟಿಸಿದರು. ಆರೋಗ್ಯ ಪರಿವೀಕ್ಷಕರಾದ ರಾಜೇಶ್, ಭಾಸ್ಕರನ್, ವಿನಿರಾಜ್ ಮೊದಲಾದವರು ಉಪಸ್ಥಿತರಿದ್ದರು. ವಾರ್ಡ್ ಸದಸ್ಯರು, ಕುಟುಂಬಶ್ರೀ, ಆರೋಗ್ಯ ವಿಭಾಗ, ಆಶಾ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಆಟೋ ಚಾಲಕರು, ವಿವಿಧ ಕ್ಲಬ್ ಗಳ ಪ್ರತಿನಿಧಿಗಳು ಶುಚೀಕರಣದಲ್ಲಿ ಭಾಗವಹಿಸಿದರು.
       ಮೊಗ್ರಾಲ್ ಪುತ್ತೂರು ಗ್ರಾ.ಪಂ.ನಲ್ಲಿನಡೆದ ಶುಚೀಕರಣ:
    ರಾಜ್ಯ ಸರಕಾರ ಜಾರಿಗೊಳಿಸಿದ ತೀವ್ರ ಶುಚೀಕರಣ ಯಜ್ಞ ಅಂಗವಾಗಿ ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಶುಚೀಕರಣ ನಡೆಯಿತು.
        ಮಳೆಗಾಲಕ್ಕೆ ಮುನ್ನನಡೆಸುವ ಶುಚೀಕರಣ ಮತ್ತು ಅಂಟುರೋಗ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಈ ಕಾಯಕ ನಡೆದುವು.  ರಾಜ್ಯ ಸರಕಾರದ ರಚಿಸಿದ ರೂಪುರೇಷೆಗೆ ಅನುಗುಣವಾಗಿ ಇಲ್ಲಿ ಶುಚಿತ್ವ ಕಾಯಕಗಳು ನಡೆದಿವೆ. ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಶುಚೀಕರಣ ಕಾಯಕಕ್ಕೆ ಚಾಲನೆ ನೀಡಿದರು. ಆರೋಗ್ಯ ಇನ್ಸ್ ಪೆಕ್ಟರರಾದ ಸುಂದರ, ರಶೀದ್, ಜ್ಯೂನಿಯರ್ ಸಾರ್ವಜನಿಕ ಆರೋಗ್ಯ ದಾದಿಯರಾದ ಶೈಲಜಾ, ರಾಜಿ ಮೊದಲಾದವರು ಉಪಸ್ಥಿತರಿದ್ದರು.
    ಮೊಗ್ರಾಲ್ ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣವನ್ನು ನಸಿರ್ಂಗ್ ವಿದ್ಯಾರ್ಥಿಗಳು ಶುಚಿಗೊಳಿಸಿದರು. ಪಂಚಾಯತ್ ವ್ಯಾಪ್ತಿಯ ತೋಡುಗಳು, ಕಾಲುವೆಗಳು, ಚರಂಡಿಗಳು ಇತ್ಯಾದಿಗಳ ಶುಚೀಕರಣನಡೆದುವು. ವಾರ್ಡ್ ಸದಸ್ಯರು, ಕುಟುಂಬಶ್ರೀ , ಆಶಾ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ವಿವಿಧ ಕ್ಲಬ್ ಗಳ ಪ್ರತಿನಿಧಿಗಳು ಮೊದಲಾದವರು ಶುಚೀಕರಣ ನಡೆಸಿದರು. 
      ಪೈವಳಿಕೆ ಗ್ರಾ.ಪಂ.ನಲ್ಲಿ ನಡೆದ ಶುಚೀಕರಣ
           ರಾಜ್ಯ ಸರಕಾರದ ಯೋಜನೆ ತೀವ್ರ ಶುಚೀಕರಣ ಯಜ್ಞದ ಪರಿಣಾಮ ಪೈವಳಿಕೆಯ ಹಾದಿಬದಿಗಳು ಈಗ ತ್ಯಾಜ್ಯಯುಕ್ತವಾಗಿ ಸುಂದರವಾಗಿವೆ. 
     ಮಳೆಗಾಲಕ್ಕೆ ಮುನ್ನನಡೆಸುವ ಶುಚೀಕರಣ ಮತ್ತು ಅಂಟುರೋಗ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯಾದ್ಯಂತ ನಡೆಸಲಾದ ಶುಚೀಕರಣ ಅಂಗವಗಿ ಇಲ್ಲೂ ಕಾಯಕ ನಡೆದಿವೆ.
   ಈ ಚಟುವಟಿಕೆಗಳ ಉದ್ಘಾಟನೆಯನ್ನು 13ನೇ ವಾರ್ಡ್ ನಲ್ಲಿ ನಡೆದ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷ ಭಾರತಿ ಜೆ.ಶೆಟ್ಟಿ ನಡೆಸಿದರು. ಈ ಪ್ರದೇಶದ ತೋಟಗಳಲ್ಲಿ, ಅಡಿಕೆ ಹಾಳೆ ಇತ್ಯಾದಿಗಳಲ್ಲಿ ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸುವ ಕಾಯಕವೂ ನಡೆಯಿತು.
    ವಾರ್ಡ್ ಸದಸ್ಯರು, ಆರೋಗ್ಯ, ಆಶಾ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಆಟೋ ಚಾಲಕರು, ವಿವಿಧ ಕ್ಲಬ್ ಗಳ ಪ್ರತಿನಿಧಿಗಳು ಮೊದಲಾದವರು ಶುಚೀಕರಣನಡೆಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries