HEALTH TIPS

ಶಬರಿಮಲೆ ಹೋರಾಟ ನಿಲ್ಲದು : ಕೆ.ಪಿ.ಶಶಿಕಲಾ ಟೀಚರ್


       ಕಾಸರಗೋಡು: ಗುರಿ ತಲುಪುವ ತನಕ ಶಬರಿಮಲೆ ಆಂದೋಲನದಿಂದ ಹಿಂದೂ ಐಕ್ಯ ವೇದಿಕೆಯಾಗಲಿ, ಶಬರಿಮಲೆ ಕ್ರಿಯಾ ಸಮಿತಿಯಾಗಲೀ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹಿಂದೂ ಐಕ್ಯವೇದಿಕೆಯ ರಾಜ್ಯ ಅಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ಸ್ಪಷ್ಟಪಡಿಸಿದ್ದಾರೆ.
    ಆರನ್ಮುಳದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು ಶಬರಿಮಲೆ ಹೋರಾಟ ಈತನಕ ಫಲಪ್ರಾಪ್ತಿ ಕಂಡಿಲ್ಲ. ಸುಪ್ರೀಂಕೋರ್ಟ್‍ನ ಪರಿಶೀಲನೆಯಲ್ಲಿರುವ ಮರುಪರಿಶೀಲನಾ ಅರ್ಜಿಯಲ್ಲಿ ಭಕ್ತರ ಪರ ಅನುಕೂಲಕರ ತೀರ್ಪು ನೀಡಬೇಕು. ಇಲ್ಲವಾದಲ್ಲಿ ರಾಜ್ಯ ಸರಕಾರ ತನ್ನ ಹಠಮಾರಿತನ ನಿಲುವನ್ನು ಕೈಬಿಟ್ಟು ಶಬರಿಮಲೆಯಲ್ಲಿ ಪರಂಪರಾಗತ ಆಚಾರ ಸಂರಕ್ಷಿಸಲು ಅನುಕೂಲಕರ ರೀತಿಯಲ್ಲಿ ವಿಶೇಷ ಕಾನೂನಿಗೆ ರೂಪು ನೀಡಬೇಕು. ಅಲ್ಲಿಯವರೆಗೆ ಶಬರಿಮಲೆ ಹೋರಾಟವನ್ನು ಮುಂದುವರಿಸಲಾಗುವುದು. ಶಬರಿಮಲೆ ಕ್ರಿಯಾ ಸಮಿತಿ ಕೈಗೊಳ್ಳುವ ತೀರ್ಮಾನದ ಜೊತೆ ಹಿಂದೂ ಐಕ್ಯವೇದಿ ಕೈಜೋಡಿಸಲಿದೆ ಎಂದು ತಿಳಿಸಿದರು.
     ಶಬರಿಮಲೆ ಕ್ರಿಯಾ ಸಮಿತಿ ಮತ್ತು ಹಿಂದೂ ಐಕ್ಯವೇದಿಕೆ ನಡುವೆ ಈವರೆಗೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿಲ್ಲ. ಆಚಾರಗಳನ್ನು ಪಾಲಿಸುತ್ತಾ ಬಂದಿರುವವರಿಗೆ ಅದನ್ನು  ಪಾಲಿಸಲು ವಿಘ್ನಗಳು ಉಂಟಾದಾಗ ಅಂತಹ ವಿಘ್ನಗಳ ಅನುಭವವಾಗುವುದು. ಹಿಂದೂ ಸಂತರು ಮತ್ತು ಧಾರ್ಮಿಕ ನೇತಾರರ ಸಮೂಹದೊಂದಿಗೆ ಚರ್ಚಿಸಿ ಅಭಿಪ್ರಾಯ ಸಮನ್ವಯದೊಂದಿಗೆ ಮಾತ್ರವೇ ಯಾವುದೇ ಬದಲಾವಣೆ ತರಬಹುದು. ಅದನ್ನು ಬಿಟ್ಟು ಅವಸರದಿಂದ ಕ್ರಮ ತೆಗೆದುಕೊಳ್ಳುವ  ನಿಲುವನ್ನು ಸರಕಾರ ಕೊನೆಗೊಳಿಸಬೇಕು. ಶಬರಿಮಲೆಗೆ ಯುವತಿಯರ ಪ್ರವೇಶವನ್ನು ತಡೆಯುವುದು ಅನಾಚಾರವಲ್ಲ ಅದು ಆಚಾರ ವೈಫಲ್ಯವಾಗಿದೆ. ಆದ್ದರಿಂದ ಅದನ್ನು ಆಚರಿಸುವ ಯಾರಿಗೂ ಅನಾಚಾರವೆಂದು ತೋರದೆಂದೂ ಶಶಿಕಲಾ ಟೀಚರ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries