HEALTH TIPS

ಮಲೆನಾಡ ಹಸಿರಿನ ಹಿಂದೆ ಹವ್ಯಕರ ದುಡಿಮೆಯಿದೆ, ಪರಿಸರಪ್ರೀತಿಯಿದೆ : ಚಿಂತಕ ಪೂರ್ಣಾತ್ಮರಾಮ

         
       ಪುತ್ತೂರು:  ಖಾಲಿ ಸಭಾಂಗಣದಲ್ಲಾದರೂ ವೇದಿಕೆಯಲ್ಲಿ ನಿಂತು ಮಾತನಾಡಿ ಸಭಾಕಂಪನವನ್ನು ದೂರಮಾಡಿಕೊಳ್ಳಿ. ಸಾಹಿತ್ಯಕ್ಕೆ ಕಾಣದ್ದನ್ನು ತೋರಿಸುವ ಸಾಮಥ್ರ್ಯವಿದೆ. ಅಂತಹ ಸಾಹಿತ್ಯದ ಬೆಳವಣಿಗೆಯಲ್ಲಿ ಒಪ್ಪಣ್ಣ ಪ್ರತಿಷ್ಠಾನ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಹವ್ಯಕ ಭಾಷೆಯಲ್ಲಿರುವ ವೈವಿಧ್ಯತೆ ಭಾಷೆಯನ್ನು ಬೆಳೆಸಿದೆ. ಲೋಕಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುವ ಕಡೆಗೆ ಈಗಿನ ವಿದ್ಯಾರ್ಥಿಗಳು ಗಮನ ಹರಿಸಬೇಕು. ಐ.ಎ.ಎಸ್ ಅಥವಾ ಐ.ಪಿ.ಎಸ್ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಮೂಲಕ ರಾಷ್ಟನಿರ್ಮಾಣದಲ್ಲಿ ಕೈಜೋಡಿಸಬೇಕು. ದೇಹ ಮತ್ತು ಮನಸ್ಸಿನ ಸಮತೋಲನವು ಕರ್ಮಯೋಗಿಗಳಿಗೆ ಅಗತ್ಯ. ಮಲೆನಾಡ ಹಸಿರಿನ ಹಿಂದೆ ಹವ್ಯಕರ ದುಡಿಮೆಯಿದೆ, ಪರಿಸರಪ್ರೀತಿಯಿದೆ. ನೂಲಿಗೆ ಸೂಜಿಯ ನೇತೃತ್ವ ಬೇಕು. ಸೂಜಿ ತನ್ನ ಕೈಂಕರ್ಯವನ್ನು ಪೂರೈಸಿ ಮುಂದೆ ಸಾಗುವಂತೆ ನಾಯಕನಾದವನು ಮುಂದಿನ ಕೆಲಸ ಕಾರ್ಯವನ್ನು ಪೂರೈಸುವತ್ತ ಗಮನಹರಿಸಬೇಕು ಎಂದು ಚಿಂತಕ ಪೂರ್ಣಾತ್ಮರಾಮ ಅಭಿಪ್ರಾಯಪಟ್ಟರು.
      ಅವರು ಭಾನುವಾರ ಪುತ್ತೂರಿಗೆ ಸಮೀಪದ ಕಾವು ಜನಮಂಗಲದಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಸಹಕಾರದಲ್ಲಿ ಆಯೋಜಿಸಿದ `ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು `ಬಾಳಿಲ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದ ದಿಕ್ಸೂಚಿ ಭಾಷಣಗೈದು ಮಾತನಾಡುತ್ತಿದ್ದರು.
      ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಮನಮೋಹನ ಬನಾರಿ ಅಧ್ಯಕ್ಷತೆ ವಹಿಸಿದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಸಂಚಾಲಕ ಚಂದ್ರಶೇಖರ ದಾಮ್ಲೆ, ಈಶ್ವರಮಂಗಲ ಪ್ರಾಂತ ಹವ್ಯಕ ಮಹಾಸಭಾದ ಅಧ್ಯಕ್ಷ ಶಿವಪ್ರಸಾದ್ ಪಟ್ಟೆ ಉಪಸ್ಥಿತರಿದ್ದರು.
      ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರಿಗೆ ಪ್ರದಾನ ಮಾಡಲಾಯಿತು. ಕುಮಾರಸ್ವಾಮಿ ತೆಕ್ಕುಂಜ ಬರೆದ ಲಲಿತ ಪ್ರಬಂಧಗಳ ಸಂಕಲನ `ಪಾರುಪತಿಯ ಪಾರುಪತ್ಯ', ರಘುರಾಮ ಮುಳಿಯ ಅವರು ಭಾಮಿನಿ ಷಟ್ಪದಿಯಲ್ಲಿ ಬರೆದ `ಪೆರ್ಲಲ್ಲೊಂದು ಪಿಕ್ಲಾಟ' ಮತ್ತು ಶೀಲಾ ಲಕ್ಷ್ಮಿ ವರ್ಮುಡಿ ರಛಿಸಿದ `ಅಬ್ಬೇ! ಎನಗೆ ಅರುಂಧತಿಯ ಕಂಡಿದಿಲ್ಲೆ!!'ಹವ್ಯಕ ಕಾದಂಬರಿಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
      ಪ್ರತಿಷ್ಠಾನದ ವತಿಯಿಂದ ನೀಡಲಾಗುವ `ವೇದ ವಿದ್ಯಾನಿಧಿ'ಯನ್ನು ಚೂಂತಾರು ದಿ. ಕೃಷ್ಣ ಭಟ್ ಪ್ರತಿಷ್ಠಾನ ಇವರಿಗೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಒಪ್ಪಣ್ಣ ಪ್ರತಿಷ್ಠಾನದ ವೇದ ವಿದ್ಯಾ ವಿಭಾಗದ ಸಂಚಾಲಕ ಗಣೇಶ ಮಾಡಾವು ನಿರ್ವಹಿಸಿದರು. ಶಿಕ್ಷಣ ವಿಭಾಗದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಪೆರ್ನಾಜೆ ಕೆ. ಶಾಮಣ್ಣ, ಯಕ್ಷಗಾನ ಕಲಾವಿದ ರಾಮ ಜೋಯಿಸ ಬೆಳ್ಳಾರೆ, ಪಾಕಶಾಸ್ತ್ರ ಪರಿಣಿತರಾದ ಮರಿಮನೆ ಹೆಚ್.ನಾರಾಯಣ ಭಟ್ ಮಳಿ, ದ್ವಿತೀಯ ಪಿಯುಸಿ ರ್ಯಾಂಕ್ ವಿಜೇತರಾದ ಶ್ರೀಕೃಷ್ಣ ಶರ್ಮ ಕಡಪ್ಪು, ಸ್ವಸ್ತಿಕ್ ಮಾಡಾವು, ಸಾತ್ವಿಕಾ ಮಾಡಾವು, ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿಂಚನಲಕ್ಷ್ಮಿ ಬಂಗಾರಡ್ಕ ಇವರನ್ನು ಗೌರವಿಸಲಾಯಿತು.
     ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಳ್ಯಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಶ್ರೀಕೃಷ್ಣ ಶರ್ಮ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಹೇಶ ಎಳ್ಯಡ್ಕ ಧನ್ಯವಾದ ಸಮರ್ಪಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಕಾರ್ಯಕ್ರಮ ನಿರೂಪಿಸಿದರು. ವಿಷು ವಿಶೇಷ ಸ್ಪರ್ಧಾ ಕಾರ್ಯಕ್ರಮದ ಅಂಗವಾಗಿ ಆಶುಭಾಷಣ ಸ್ಪರ್ಧೆ ಜರಗಿತು. ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ರಘುರಾಮ ಮುಳಿಯ ನಿರ್ವಹಿಸಿದರು.
     ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಜರಗಿದ ಯಕ್ಷಗಾನಾಮೃತ ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರೀ ಕುಕ್ಕಿಲ ಮತ್ತು ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಭಾಗವಹಿಸಿದರು. ಹಿಮ್ಮೇಳದಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಮತ್ತು ವರ್ಷಿತ್ ಕಿಜೆಕ್ಕಾರು ಸಹಕರಿಸಿದರು. ಸಭಾ ಕಾರ್ಯಕ್ರಮದ ನಂತರ ಸಬ್ಬಣಕೋಡಿ ರಾಮ ಭಟ್ ಶಿಷ್ಯವೃಂದದ ಪಡ್ರೆ ಛಂದು ಯಕ್ಷಗಾನ ಕೇಂದ್ರ ಪೆರ್ಲ ಇವರಿಂದ `ರಾಜಾ ದಿಲೀಪ' ಯಕ್ಷಗಾನ ಬಯಲಾಟ ಜರಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries