ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರಡ್ಕ ವಲಯ ವ್ಯಾಪ್ತಿಯ ಮವ್ವಾರು ಒಕ್ಕೂಟದ ತ್ರೈಮಾಸಿಕ ಸಭೆ ಇತ್ತೀಚೆಗೆ ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಡೆಯಿತು.
ಯೋಜನೆಯ ವಲಯ ಮೇಲ್ವಿಚಾರಕ ಉದಯ, ಸೇವಾ ಪ್ರತಿನಿಧಿ ಚಂದ್ರಕಲಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಮವ್ವಾರು ಒಕ್ಕೂಟದ ಅಧ್ಯಕ್ಷರೂ, ಪ್ರಸ್ತುತ ಮವ್ವಾರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಕೊರಗಪ್ಪ ಬೆಳ್ಳಿಗೆ ಅವರನ್ನು ಒಕ್ಕೂಟದ ವತಿಯಿಂದ ಸಾಧನಾ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಹರಿ ತಂಡದ ಸದಸ್ಯ ಎಂ.ರಾಜಶೇಖರ ಸ್ವಾಗತಿಸಿ, ಎಂ.ಗಂಗಾಧರ ವಂದಿಸಿದರು. ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.