ಕಾಸರಗೋಡು: ತಾಳಿಪಡ್ಪಿನ ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ಅನಾಥ ಮತ್ತು ನಿರ್ಗತಿಕ ಗಂಡು ಮಕ್ಕಳಿಗಾಗಿ ನಡೆಸಲ್ಪಡುತ್ತಿರುವ ಬಾಲಮಂದಿರಕ್ಕೆ ಆಸಕ್ತಿಯುಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ.
1 ರಿಂದ 8 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಸೇರಿಸಿಕೊಳ್ಳಲಾಗುವುದು. ಮಕ್ಕಳು ಆರೋಗ್ಯವಂತರೂ, ಉತ್ತಮ ಗುಣನಡತೆಯವರೂ ಆಗಿದ್ದು ವಿದ್ಯೆಯಲ್ಲಿ ಆಸಕ್ತಿ ಹೊಂದಿರಬೇಕು. ಹೆತ್ತವರು ಯಾ ರಕ್ಷಕರ ವಾರ್ಷಿಕ ಆದಾಯವು ರೂ.1 ಲಕ್ಷಕ್ಕೆ ಮೀರಬಾರದು.
ಬಾಲಮಂದಿರಕ್ಕೆ ಸೇರಿಸಿಕೊಳ್ಳುವ ಮಕ್ಕಳಿಗೆ ವಿದ್ಯೆ, ಬಟ್ಟೆಬರೆ, ಆಹಾರ, ವಸತಿ, ವೈದ್ಯಕೀಯ ನೆರವು ಇತ್ಯಾದಿಗಳನ್ನು ನೀಡಲಾಗುವುದು. ಪ್ರತಿಭಾವಂತ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೂ ಅವಕಾಶ ಕಲ್ಪಿಸಲಾಗುವುದು. ಬಾಲಮಂದಿರದಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛಿಸುವ ರಕ್ಷಕರು ಯಾ ಹೆತ್ತವರು ಸಂಸ್ಥೆಯ ಕಾರ್ಯದರ್ಶಿ(04994-230767, 09496358590) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ.