ಉಪ್ಪಳ: ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ ಕಾಸರಗೋಡು ಮಧ್ಯೆ ಉಪ್ಪಳ ಗೇಟ್ ಬಳಿ ಬೃಹತ್ ಮರವೊಮದು ಹಠಾತ್ ಉರುಳಿಬಿದ್ದು, ಎರಡು ಕಾರುಗಳು ಜಖಂಗೊಂಡು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮಂಗಳೂರು ಕಡೆಯಿಂದ ಕಾಸರಗೋಡಿನತ್ತ ಆಗಮಿಸುತ್ತಿ ಮಾರುತಿ ಸ್ವಿಪ್ಟ್ ಕಾರು ಹಾಗೂ ಇಂಡೀಸ್ ಕಾರುಗಳು ಉಪ್ಪಳ ಗೇಟ್ ಬಳಿ ಸಂಚರಿಸುತ್ತಿರುವಂತೆ ಬೃಹತ್ ಮರ ಉರುಳಿಬಿದ್ದಿದ್ದು, ಸ್ವಿಪ್ಟ್ ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಇಮಡೀಸ್ ಕಾರಲ್ಲಿದ್ದ ಇಬ್ಬರು ಅಲ್ಪಸ್ವಲ್ಪ ಗಾಯಗೊಂಡಿದ್ದು, ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚಿನ ಮಾಹಿತಿಗಳು ತಿಳಿದುಬಂದಿಲ್ಲ. ಕಾಂಞÂಂಗಾಡ್ ಹಾಗೂ ಕಾಸರಗೋಡಿನ ಪ್ರಯಾಣಿಕರು ಕಾರಲ್ಲಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ.
ಅಪಘಡದ ಬಳಿಕ ಒಂದು ಗಂಟೆಗಳಿಗಿಂತಲೂ ಹೆಚಚು ಕಾಲ ಹೆದ್ದಾರಿ ಸಂಚಾರ ಮೊಟಕುಗೊಂಡು ತೀವ್ರ ದಟ್ಟಣೆ ತಲಪಾಡಿಯಿಂದಲೂ ಕುಂಬಳೆಯಿಂದಲೂ ಕಂಡುಬಂತು. ಉಪ್ಪಳದಿಂದ ಆಗಮಿಸಿದ ಅಗ್ನಿ ಶಾಮಕದಳ ಮತ್ತು ಹೈವೇ ಪೋಲೀಸರು ಮರ ತೆರವುಗೊಳಿಸಿ ಬಳಿಕ ಸಂಚಾರ ಸುಗಮಗೊಳಿಸಿದರು.