ಬದಿಯಡ್ಕ: ಕುಂಬಳೆ ಫಿರ್ಕಾ ಬಂಟರ ಸಂಘದ ಮಹಾಸಭೆ ಫಿರ್ಕಾ ಸಭಾಂಗಣ ಬದಿಯಡ್ಕದಲ್ಲಿ ಇತ್ತೀಚೆಗೆ ನಡೆಯಿತು.
ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ವಳಮಲೆ ಪದ್ಮನಾಭ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು, ವಿವಿಧ ಪಂಚಾಯತಿ ಘಟಕಗಳ ಪದಾಧಿಕಾರಿಗಳಾದ ನಾರಾಯಣ ಆಳ್ವ ಎಣ್ಮಕಜೆ, ಹರ್ಷಕುಮಾರ್ ರೈ ಬೆಳಿಂಜ, ನಿರಂಜನ ರೈ ಪೆರಡಾಲ, ಚಿದಾನಂದ ಆಳ್ವ, ಮೋಹನದಾಸ ರೈ, ಕೃಷ್ಣಪ್ರಸಾದ ರೈ, ಶಂಕರ ಆಳ್ವ ಕುಂಬಳೆ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಫಿರ್ಕಾ ಕಾರ್ಯದರ್ಶಿ ಅಶೋಕ ರೈ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಬಿ.ಎಸ್.ಗಾಂಭೀರ್ ಲೆಕ್ಕಪತ್ರ ಮಂಡಿಸಿದರು. ಫಿರ್ಕಾದ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಸಮಿತಿ ರೂಪೀಕರಿಸಲಾಯಿತು. ನೂತನ ಸಮಿತಿ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ವಳಮಲೆ(ಅಧ್ಯಕ್ಷ), ಸಂತೋಷ್ ಕುಮಾರ್ ಶೆಟ್ಟಿ ಬಜದಗುತ್ತು, ಕೊರಗಪ್ಪ ರೈ ಅಮೆಕ್ಕಾರ್, ಪುಷ್ಪಲತಾ ರೈ ಕಾಜೂರು(ಉಪಾಧ್ಯಕ್ಷರು), ಅಶೋಕ ರೈ ಕೊರೆಕ್ಕಾನ(ಪ್ರಧಾನ ಕಾರ್ಯದರ್ಶಿ), ಶ್ಯಾಮ ಆಳ್ವ ಕಡಾರು, ಸೀತಾರಾಮ ರೈ(ಜೊತೆ ಕಾರ್ಯದರ್ಶಿಗಳು), ಹರಿಪ್ರಸಾದ್ ರೈ ಮಾಯಿಲೆಂಗಿ(ಕೋಶಾಧಿಕಾರಿ) ಅವರುಗಳನ್ನು ಆರಿಸಲಾಯಿತು. ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು ನೂತನ ಸಮಿತಿ ರೂಪೀಕರಣ ನಿರ್ವಹಿಸಿದರು.