ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ವರ್ಕಾಡಿ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಭಾನುವಾರ ದೈಗೋಳಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಬೆಳಿಗ್ಗೆ ಸತ್ಯನಾರಾಯಣ ಪೂಜೆಯ ಬಳಿಕ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್ ನೂಜಿ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಕುಲಾಲ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಮಾಜಿ ಸೈನಿಕ ಯು.ಎಂ.ಮೂಲ್ಯ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಕುಲಾಲ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಮಡ್ವ, ವರ್ಕಾಡಿ ಶಾಖಾ ಮಹಿಳಾ ಘಟಕದ ಅಧ್ಯಕ್ಷೆ ಸರೋಜ ನೂಜಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚರಣ್ ರಾಜ್ ವರದಿ ವಾಚಿಸಿದರು. ಕೋಶಾಧಿಕಾರಿ ವಸಂತ ಆವ&ವ್ಯಯ ಮಂಡಿಸಿದರು. 2019=20ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಈ ಸಂದರ್ಭ ನಡೆಯಿತು. ಅಧ್ಯಕ್ಷರಾಗಿ ನಾರಾಯಣ ಸಾಲಿಯಾನ್ ನೂಜಿ, ಉಪಾಧ್ಯಕ್ಷರಾಗಿ ಸತೀಶ ಮಡ್ವ, ಕಾರ್ಯದರ್ಶಿಯಾಗಿ ಚರಣ್ ರಾಜ್ ದೈಗೋಳಿ, ಜೊತೆ ಕಾರ್ಯದರ್ಶಿಯಾಗಿ ಭಾಸ್ಕರ ಮಡ್ವ, ಸಂಚಾಲಕರಾಗಿ ಬಾಬು ಮೂಲ್ಯ ದೈಗೋಳಿ ಹಾಗೂ ಇತರ ಹತ್ತು ಮಂದಿ ಸದಸ್ಯರು ಮತ್ತು ಮಹಿಳಾ ಸಂಘದ ಅಧ್ಯಕ್ಷರಾಗಿ ಸರೋಜ ನೂಜಿ, ಕಾರ್ಯದರ್ಶಿಯಾಗಿ ಶಶಿಕಲಾ ದೈಗೋಳಿ ಆಯ್ಕೆಯಾದರು. ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಭಾಸ್ಕರ ಮಡ್ವ ವಂದಿಸಿದರು. ಕೇಶವ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.