ಕುಂಬಳೆ: ಜಿ ಯಸ್ ಬಿ ಮಹಿಳಾ ಮಂಡಳಿ ಹಾಗು ಜಿ ಯಸ್ ಬಿ ಯುವಕ್ ಸಂಘ ಇವರ ಆಶ್ರಯದಲ್ಲಿ ಮೂರು ದಿನಗಳ ವರೆಗೆ ಸಮಾಜದ 3 ವರ್ಷದಿಂದ 16 ವರ್ಷದ ವರೆಗಿನ ಮಕ್ಕಳಿಗೆ ಆಯೋಜಿಸಲಾಗಿರುವ 2 ನೇ ವರ್ಷದ ವಸಂತ ಶಿಬಿರವು ಇಂದಿನಿಂದ(ಶುಕ್ರವಾರ) ಭಾನುವಾರದ ವರೆಗೆ ಕುಂಬಳೆ ಶ್ರೀವೀರ ವಿಠ್ಠಲ ದೇವಸ್ಥಾನದ ಸುಧೀಂದ್ರ ತೀರ್ಥ ಕಲಾ ಮಂದಿರದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ನಾರಾಯಣ ಪ್ರಭು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಮೊಗೆರ್ನಾಡು ದೇವಸ್ಥಾನದ ಮುಖ್ಯ ಅರ್ಚಕ ವೇದಮೂರ್ತಿ ಜನಾರ್ಧನ ಭಟ್ ಅವರು ನಿರ್ವಹಿಸಿ ಆಶೀರ್ವಚನ ನೀಡುವರು. ಕಾರ್ಯಕ್ರಮದಲ್ಲಿ ದೇವಳದ ಅರ್ಚಕ ಕೆ.ಪುಂಡಲೀಕ ಭಟ್,ಕೆ.ವಿಷ್ಣು ಭಟ್,ಜಿ ಯಸ್ ಬಿ ಯುವಕ್ ಸಂಘದ ಪ್ರದಾನ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಉಪಸ್ಥಿತರಿರುವರು.