HEALTH TIPS

ನೇರಪ್ರಸಾರದಲ್ಲಿ ಕಣ್ಣೀರಿಟ್ಟ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ: ಕಾರಣ ಏನು ಗೊತ್ತೇ!

     
       ನವದೆಹಲಿ: ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಚುನಾವಣಾ ಸಮೀಕ್ಷೆ ಸಂಸ್ಥೆಯ ಮುಖ್ಯಸ್ಥ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಆಕ್ಸಿಸ್ ಮೈ ಇಂಡಿಯಾದ ಮುಖ್ಯಸ್ಥ ಪ್ರದೀಪ್ ಗುಪ್ತಾ ಸುದ್ದಿವಾಹಿನಿಯ ನೇರಪ್ರಸಾರ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದಾರೆ.
     ಪ್ರದೀಪ್ ಗುಪ್ತಾ ಅವರ ನೇತೃತ್ವದ ಸಂಸ್ಥೆ ಈ ಹಿಂದೆ ನೀಡಿದ್ದ ಸಮೀಕ್ಷೆ ಶೇ.95 ರಷ್ಟು ನಿಖರವಾಗಿತ್ತು. 2019 ರ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಅದು ಮುಂದುವರೆದಿದೆ. 
     ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಗೆ 339-365 ಸ್ಥಾನಗಳು ಸಿಗಲಿದೆ ಎಂದು ಆಕ್ಸಿಸ್ ಇಂಡಿಯಾ ಸಮೀಕ್ಷೆಯ ಅಂದಾಜಾಗಿತ್ತು. 8 ಲಕ್ಷ ಮತದಾರರನ್ನು ಸಮೀಕ್ಷೆಗೊಳಪಡಿಸಿದ್ದ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಯುಪಿಎಗೆ 77-108 ಸ್ಥಾನಗಳನ್ನು ಅಂದಾಜಿಸಲಾಗಿತ್ತು.
     ಚುನಾವಣಾ ಫಲಿತಾಂಶದ ಟ್ರೆಂಡಿಂಗ್ ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಗೆ ಹತ್ತಿರವಾಗಿದ್ದು, ತಮ್ಮ ಸಂಸ್ಥೆಯ ನಿಖರತೆಯಿಂದ ಸಂತೋಷಗೊಂಡು ಭಾವುಕರಾದ ಪ್ರದೀಪ್ ಗುಪ್ತ ಸುದ್ದಿ ವಾಹಿನಿಯ ನೇರಪ್ರಸಾರದಲ್ಲಿ ಕಣ್ಣೀರಿಟ್ಟಿದ್ದಾರೆ.
    ಆಕ್ಸಿಸ್ ಮೈ ಇಂಡಿಯಾದ ಸಮೀಕ್ಷೆಗೆ ಹಲವಾರು ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರದೀಪ್ ಗುಪ್ತ, ತನ್ನ ತಂಡದ ಮೇಲೆ ತನಗೆ ಸಂಪೂರ್ಣ ವಿಶ್ವಾಸವಿತ್ತು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries