HEALTH TIPS

ಆಲಯಗಳಂತೆ ಮನಸ್ಸಿನ ನವೀಕರಣ ಪ್ರಕ್ರಿಯೆ ನಿರಂತರ ನಡೆಯುತ್ತಿರಬೇಕು=ಒಡಿಯೂರು ಶ್ರೀಗಳು= ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಭಜನ ಮಂದಿರ ಉದ್ಘಾಟನಾ ಕಾರ್ಯಕ್ರಮ

 

    ಉಪ್ಪಳ: ಜೀವ ಮತ್ತು ದೇವನ ಸಂಬಂಧ ಭಾವದಲ್ಲಿ ಅಡಗಿದೆ, ಭಾವ ಶುದ್ಧಿಯ ಮೂಲಕ ಆತ್ಮ ಸಾಕ್ಷಾತ್ಕಾತ ಸಾಧ್ಯವಿದ್ದು, ಭಜನೆಯ ಮೂಲಕವೇ ಭಾವ ಶುದ್ಧಿಯ ಕಾರ್ಯ ನಡೆಯಬೇಕಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
    ಬಾಯಾರುಪದವು ಸಮೀಪದ ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಭಜನ ಮಂದಿರ ಉದ್ಘಾಟನಾ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವದ ಎರಡನೇ ದಿನವಾದ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಪ್ರದಾಯಿಕವಾಗಿ ತೆಂಗಿನ ಪಿಂಗಾರವನ್ನು ಅರಳಿಸುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
   ಭೌತಿಕ ಆಲಯ ಮಂದಿರಗಳ ನವೀಕರಣವಾದಂತೆ ಮನಸಿನ ನವೀಕರಣ ಪ್ರಕ್ರಿಯೆಯು ನಿರಂತರವಾಗಿ ನಡೆಯಬೇಕು. ಭಜನೆಯ ಮೂಲಕ ಮನಸಿನ ಶುದ್ಧತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ಬದುಕಿಗೆ ಆಧಾರಸ್ತಂಭವಾದ ಉತ್ತಮ ಶಿಕ್ಷಣ, ಸಂಸ್ಕಾರ, ಒಳ್ಳೆಯ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಮಂದಿರಗಳು ಪೂರಕವಾಗಿವೆ ಎಂದರು.  ಸಮಾಜದ ಪರಿವರ್ತನೆಗೆ ಕಾರಣೀಭೂತರಾಗುವವರು ಒಂದು ಯುವ ಸಮುದಾಯ ಮತ್ತು ಮಹಿಳಾ ಸಮುದಾಯ, ಮಹಿಳೆಯರು ಮನೆ-ಮನವನ್ನು ಬೆಳಗಿದರೆ, ಯುವ ಸಮುದಾಯವು ತನ್ನ ಅಂತಃಶಕ್ತಿಯ ಮೂಲಕ ಸಮಾಜವನ್ನು ಬೆಳಗುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದು ತಿಳಿಸಿದರು.
    ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ನವೀಕರಣ ಸಮಿತಿ ಅಧ್ಯಕ್ಷ ರಮೇಶ.ಎಂ ಬಾಯಾರು ಮಾತನಾಡಿ ಭಜನ ಮಂದಿರಗಳು ಭಕ್ತಿಯ ಪ್ರತೀಕವಾಗಿದ್ದು, ಭಕ್ತಿ ಮಾರ್ಗವು ಸಮಾಜವನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡುವಲ್ಲಿ ಸಫಲವಾಗಿದೆ ಎಂದರು. ಭಜನ ಮಂದಿರದ ನವೀಕರಣ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಐಶ್ವರ್ಯ ಕೋ-ಅಪರೇಟಿವ್ ಬ್ಯಾಂಕ್ ಬೆಂಗಳೂರು ಸಿ.ಇ.ಒ ಗಣೇಶ್ ಎನ್.ಭಟ್ ಮಾತನಾಡಿ ಹಲವು ಸಂಸ್ಕøತಿ, ಆಚಾರ ವಿಚಾರಗಳ ಕೇಂದ್ರವಾದ ಭಾರತವು ಇಂಡಿಯಾ ಆಗುವುದು ಬೇಡ. ಪ್ರಸ್ತುತ ಪ್ರತಿಯೊಂದು ಮನೆ ಮನಗಳಲ್ಲೂ ಭಜನ ಸಂಸ್ಕøತಿ ನವಿರೇಳುವಂತಾಗಬೇಕು. ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿರುವ ಭಜನೆಯು ಜ್ಞಾನ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್, ನವೀಕರಣ ಸಮಿತಿ ಗೌರವಾಧ್ಯಕ್ಷ ಗಣಪತಿ ಭಟ್ ಆವಳಮಠ, ಗೌರವ ಸಲಹೆಗಾರರಾದ ಯಂ.ವಿಶ್ವನಾಥ ಭಟ್ ಮೇಲಿನ ಪಂಜ ಶುಭಾಶಂಸನೆಗೈದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಕುಶಲಕರ್ಮಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಭಜನಾ ಮಂಡಳಿಯ ಅಧ್ಯಕ್ಷರಾಗಿರುವ ಕೆ.ವಾಸುದೇವ ಭಟ್ ಇವರಿಗೆ ಶಾಲು ಹೊದಿಸಿ, ಸ್ಮರಣಿಕೆ ಮತ್ತು ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು. ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಸಾಧನೆಗೈದ ಸಜಂಕಿಲ ಶಾಲೆಯ ಹಳೆ ವಿದ್ಯಾರ್ಥಿನಿ ಕಾಯರಕಟ್ಟೆ ಜಿ.ಎಚ್.ಎಸ್.ಎಸ್‍ನ ಜಯಶ್ರೀ.ಡಿ ಅವರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಹರಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು  ನವೀಕೃತ ಭಜನ ಮಂದಿರದ ಉದ್ಘಾಟನಾ ಕಾರ್ಯಕ್ರಮವು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಹಸ್ತದಿಂದ ದೀಪ ಬೆಳಗಿಸುವ ಮೂಲಕ ನೆರವೇರಿತು. ಮಂದಿರ ನವೀಕರಣ ಸಮಿತಿಯ ಸದಾನಂದ.ಎಂ ಸ್ವಾಗತಿಸಿ, ಶ್ರೀಕಾಂತ್ ಮಾಸ್ತರ್ ವಾಟೆತ್ತಿಲ ವಂದಿಸಿದರು.  ಶ್ರೀರಾಮ ಮಾಸ್ತರ್ ಆವಳ ಕೆದುಕೋಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಿಗ್ಗೆ ಮಹಾಗಣಪತಿ ಹವನ ಮತ್ತು ಭಜನ ಮಂದಿರ ಉದ್ಘಾಟನೆಯ ಬಾಪ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries