ಮಂಜೇಶ್ವರ: ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಪ್ರಸಾದ ರೂಪವಾಗಿ ಕೊಡಮಾಡಿದ ಧನ ಸಹಾಯವನ್ನು ಇತ್ತೀಚೆಗೆ ಬುಡ್ರಿಯ ಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ ಹಸ್ತಾಂತರಿಸಿದರು. ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬುಡ್ರಿಯ ಮಲರಾಯ ಬಂಟ ದೈವಸ್ಥಾನಕ್ಕೆ ಧರ್ಮಸ್ಥಳದಿಂದ ಸಹಾಯಧನ
0
ಮೇ 29, 2019