ಹೊಸದಿಲ್ಲಿ : 17ನೇ ಲೋಕಸಭಾ ಆಯ್ಕೆಗಿರುವ 7 ನೇ ಮತ್ತು ಕೊನೆಯ ಹಂತದ ಲೋಕಸಭಾ ಚುನಾವಣಾ ಮತದಾನದ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಎಸೆಯಲಾಗಿದ್ದು, ಹಲವೆಡೆ ಅಭ್ಯರ್ಥಿಗಳನ್ನು ಗುರಿಯಾಗಿರಿಸಿ???ಂಡು ದಾಳಿ ನಡೆಸಲಾಗಿದೆ. ಪಂಜಾಬ್‍ನ ಮತಗಟ್ಟೆಯೊಂದರಲ್ಲಿ ಗುಂಡಿನದಾಳಿ ನಡೆಸಲಾಗಿದೆ.
ಪಂಜಾಬ್‍ನ ಬಠಿಂಡಾ ದಲ್ಲಿ ಎರಡು ಪಕ್ಷಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಗುಂಡಿ ನ ದಾಳಿ ನಡೆಸಲಾಗಿದ್ದು, ಓರ್ವ ಗಾಯಗೊಂಡಿದ್ದಾನೆ. ಪಶ್ಚಿಮ ಬಂಗಾಳದ ಜಾದವ್‍ಪುರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಕಾರಿನ ಗಾಜುಗಳನ್ನು ಜಖಂಗೊಳಿಸಲಾಗಿದೆ.
ಪಂಜಾಬ್,ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ ಹಲವೆಡೆ ರಾಜಕೀಯ ಘರ್ಷಣೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿರುವ ಕೇಂದ್ರಿಯ ಪಡೆಗಳನ್ನು ಫಲಿತಾಂಶ ಪ್ರಕಟವಾಗುವವರೆಗೆ ಹಿಂಪಡೆಯಬಾರದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.