HEALTH TIPS

ಮಳೆಗಾಲದ ಅಂಟುರೋಗಗಳ ಪ್ರತಿರೋಧ ಚಟುವಟಿಕೆಯಲ್ಲಿ ಚುರುಕಾದ ಚೆರುವತ್ತೂರು ಪಂಚಾಯತಿ


      ಕಾಸರಗೋಡು:   ಮಳೆಗಾಲದಲ್ಲಿ ಹರಡುವ ಭೀತಿಯಿರುವ ರೋಗಗಳ ನಿಯಂತ್ರಣಕ್ಕೆ ಚೆರುವತ್ತೂರು ಗ್ರಾಮಪಂಚಾಯತ್ ನಲ್ಲಿ ಚುರುಕಿನಿಂದ ನಡೆಯುತ್ತಿರುವ ಶುಚೀಕರಣ ಚಟುವಟಿಕೆಗಳು ಮುಂದುವರಿಯುತ್ತಿವೆ.
     ಪಂಚಾಯತಿಯ ಎಲ್ಲ ವಾರ್ಡ್ ಗಳಲ್ಲೂ ತ್ಯಾಜ್ಯನಿವಾರಣೆ ಸಹಿತ ಶುಚೀಕರಣ ನಡೆಸಲಾಗುತ್ತಿದೆ. ಡೆಂಗೆ ಜ್ವರದ ಪ್ರತಿರೋಧ ಪ್ರಧಾನವಾಗಿರಿಸಿ ಇಲ್ಲಿ ಕಾಯಕ ನಡೆಸಲಾಗುತ್ತಿದೆ.
  ಸೊಳ್ಳೆಗಳ ಹಾವಳಿ ಅಧಿಕವಾಗಿರುವ ಪ್ರದೇಶಗಳಲ್ಲಿ ಸೊಳ್ಳೆ ನಿವಾರಣೆಗೆ ಆದ್ಯತೆ ನೀಡಲಾಗುತ್ತಿದ್ದು, ಕೀಟನಾಶಕ ಔಷಧ ಸಿಂಪಡಣೆ ವ್ಯಾಪಕವಾಗಿ ನಡೆಸಲಾಗುತ್ತಿದೆ. ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತರು ಮೊದಲಾದವರಿಗೆ ಶುಚಿತ್ವ ಕುರಿತಾದ ಜಾಗೃತಿ ನೀಡಲಾಗಿದೆ. ಅವರು ವಾರ್ಡ್ ಗಳ ಪ್ರತಿ ಮನೆ ಮನೆಗೆ ಸಂದರ್ಶನ ನಡೆಸಿ ಶುಚಿತ್ವ ಕುರಿತು ಮನೆಮಂದಿಗೆ ಜಾಗೃತಿ ಮೂಡಿಸುವ ಕಾಯಕ ನಡೆಸುತ್ತಿದ್ದಾರೆ.
    ರಾಜ್ಯ ಸರಕಾರದ ತೀವ್ರ ಶುಚೀಕರಣ ಯಜ್ಞ ಯೋಜನೆ ಅಂಗವಾಗಿ ಎರಡು ದಿನಗಳ ಕಾಲ ನಡೆದ ಶುಚಿತ್ವ ಕಾಯಕದಲ್ಲೂ ಪಂಚಾಯತ್ ನ ಸಹಭಾಗಿತ್ವದ ಗಣನೀಯವಾಗಿತ್ತು. ಪಂಚಾಯತ್ ಮಟ್ಟದ ಸಾರ್ವಜನಿಕ ಬಾವಿಗಳ ಸಹಿತ ಎಲ್ಲ ಜಲಾಶಯಗಳನ್ನೂ, ಚರಂಡಿಗಳನ್ನೂ ಶನಿರ್ಮಲಗೊಳಿಸಲಾಗಿದೆ. ಹೋಟೆಲ್ ಗಳಲ್ಲಿ ಹಳಸಿದ ಆಹಾರ ನೀಡದಂತೆ ಬೇಕಾದ ಕಠಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಗೂಡಂಗಡಿಗಳಲ್ಲಿ ಪಾಲಿಸಬೇಕಾದ ಶುಚಿತ್ವದ ಕುರಿತು ಆದೇಶ ನೀಡಲಾಗಿದೆ. ಈಡಿಸ್ ಸೊಳ್ಳೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂದೇಹವಿರುವ ಪ್ರದೇಶಗಳ ನೀರಿನಂಶವನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ತಪಾಸಣೆಗೆ ಕಳುಹಿಸಲಾಗಿದೆ. ಮಳೆಗಾಲದಲ್ಲಿ ತಲೆದೋರಬಹುದಾದ ರೋಗಗಳಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಜನತೆಗೆ ಜಾಗೃತಿಮೂಡಿಸುವ ಕಾಯಕ ವ್ಯಾಪಕವಾಗಿ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries