ಕಾಸರಗೋಡು: ಜಿಲ್ಲೆಯ ಹೆದ್ದಾರಿಗಳ ಬದಿ ತ್ಯಾಜ್ಯ ರಾಶಿಬಿದ್ದಿರುವ ಪರಿಣಾಮ ಪ್ರಯಾಣಿಕರು ಮತ್ತು ಸ್ಥಳೀಯರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಮುಂದೆ ಪರಿಹಾರದೊರೆಯಲಿದೆ. ಜಿಲ್ಲಾಡಳಿತೆ ನೇತೃತ್ವದಲ್ಲಿ ಜಿಲ್ಲೆಯ ಹೆದ್ದಾರಿಗಳ ಬದಿ ತಂದು ಸುರಿಯಲಾಗುತ್ತಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕ್ರಮ ತ್ವರಿತಗೊಳಿಸಲಾಗಿದೆ. ವಿದ್ಯಾರ್ಥಿ ಪೊಲೀಸ್, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರು, ಕುಟುಂಬಶ್ರೀ ಕಾರ್ಯಕರ್ತರು, ರೆಸಿಡೆನ್ಸ್ ಅಸೋಸಿಯೇಶನ್ ಪ್ರತಿನಿಧಿಗಳು, ಇನ್ನಿತರ ಸಂಘಟನೆಗಳು ಮೊದಲಾವರ ಸಹಭಾಗಿತ್ವದೊಂದಿಗೆ ಆಯಾ ಸ್ಥಳೀಯಾಡಳಿತೆ ಸಂಸ್ಥೆಗಳ ನೇತೃತ್ವದಲ್ಲಿ ತ್ಯಾಜ್ಯ ತೆರವು ಕಾರ್ಯ ನಡೆಯಲಿದೆ.
ಇದರ ಅಂಗವಾಗಿ ಮೇ 9 ರಂದು ಬೆಳಗ್ಗೆ 7ರಿಂದ 9.30ರ ವರೆಗೆ ತ್ಯಾಜ್ಯ ತೆರವು ಚಟುವಟಿಕೆ ನಡೆಯಲಿದೆ. ಸಂಗ್ರಹಿಸಲಾದ ತ್ಯಾಜ್ಯವನ್ನು ಚೀಮೇನಿಯ ತೋಟಗಾರಿಕೆ ನಿಗಮ, ಪಿಲಿಕೋಡ್ ವಲಯ ಕೃಷಿ ಸಂಶೋಧನೆ ಕೇಂದ್ರ, ಸೀತಾಂಗೋಳಿಯ ಕಿನ್ ಫ್ರಾ ಸಂಸ್ಥೇಗಳ ಸಮೀಪವಿರುವ ಸರಕಾರಿ ಜಾಗದಲ್ಲಿ ಇರಿಸಿ,ನಂತರ ಪರಿಷ್ಕರಣೆ ನಡೆಸಲಾಗುವುದು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಈ ಸಂಬಂಧ ವಿಶೇಷ ಆದೇಶ ಹೊರಡಿಸಲಾಗಿದೆ. ಶುಚಿತ್ವ ಮಿಷನ್ ನ ಮೇಲ್ನೋಟದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶುಚಿತ್ವ ಯ??? ನಡೆಯಲಿದೆ. ಎನ್.ಎಸ್.ಎಸ್., ಯೂತ್ ಕ್ಲಬ್, ನೆಹರೂ ಯುವಕೇಂದ್ರ ಇತ್ಯಾದಿಗಳ ಕಾರ್ಯಕರ್ತರೂ ಈ ಚಟುವಟಿಕೆಗಳಲ್ಲಿ ಭಾಗಿಗಳಾಗುವರು. ಶುಚೀಕರಣ ನಡೆಸುವವರಿಗೆ ಮಾಸ್ಕ್, ಗ್ಲೌಸ್, ಗೋಣಿಚೀಲ ಇತ್ಯಾದಿ ಶುಚಿತ್ವ ಮಿಷನ್ ಒದಗಿಸಲಿದೆ. ಆರೋಗ್ಯ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಖೆಯ ಸಿಬ್ಬಂದಿಯೂ ಜೊತೆಗಿರುವರು. ರಾಷ್ಟ್ರೀಯ ಹೆದ್ದಾರಿಗಳ ಶುಚೀಕರಣ ಚಟುವಟಿಕೆಗಳ ನಿರೀಕ್ಷಣೆಯ ಹೊಣೆ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ (ರಸ್ತೆ ವಿಭಾಗ), ಕೆ.ಎಸ್.ಟಿ.ಪಿ.ಹೆದ್ದಾರಿ ಶುಚೀಕರಣದ ಹೊಣೆ ಹರಿತ ಕೇರಳಂ ಜಿಲ್ಲಾ ಸಂಚಾಲಕರಿಗೆ, ಇತರ ಪ್ರಧಾನ ರಸ್ತೆಗಳ ಶುಚೀಕರಣದ ಹೊಣೆ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್, ಶುಚಿತ್ವಮಿಷನ್ ಜಿಲ್ಲಾ ಸಂಚಾಲಕರಿಗೆ ನೀಡಲಾಗಿದೆ.
ಈ ಸಂಬಂಧ ಸಿದ್ಧತೆ ಸಭೆ ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಸೋಮವಾರ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಶುಚಿತ್ವ ಮಿಷನ್ ಸಂಚಾಲಕ ಸಿ.ರಾಧಾಕೃಷ್ಣನ್, ಹರಿತ ಕೇರಳಂ ಮಿಷನ್ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಲೋಕೋಪಯೋಗಿ ಕಾರ್ಯಕಾರಿ ಇಂಜಿನಿಯರ್ ವಿನೋದ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರೇಟ್ ನ ಹಿರಿಯ ವರಿಷ್ಟಾಧಿಕಾರಿ ಕೆ.ವಿನೋದ್ ಕುಮಾರ್,ಮೋಟಾರು ವಾಹನ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್, ವಿದ್ಯಾರ್ಥಿ ಪೊಲೀಸ್ ಅಡೀಷನಲ್ ನೋಡೆಲ್ ಅಧಿಕಾರಿ ಥಾಮಸ್ ಮೊದಲಾದವರು ಉಪಸ್ಥಿತರಿದ್ದರು.