ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಫಲಿತಾಂಶ ಇಂತಿದೆ. ಕ್ಷೇತ್ರದಲ್ಲಿ 1360827 ಮಂದಿ ಒಟ್ಟು ಮತದಾರರು ಇಲ್ಲಿದ್ದಾರೆ. 1096118 ಮಂದಿ (ಶೇ 80.55)ಈ ಬಾರಿ ಮತದಾನಗೈದಿರುವುದು ದಾಖಲಾಗಿದೆ.
9 ಮಂದಿ ಅಭ್ಯರ್ಥಿಗಳು ಈ ಸಲ ಕಣದಲ್ಲಿದ್ದರು. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 4,74,961 ಮತಗಳು(ಅಂಚೆ ಮತಗಳು 978) ಲಭಿಸಿವೆ. 40438 ಮತಗಳಿಗೆ ಉಣ್ಣಿತ್ತಾನ್ ಅವರು ಚುನಾವಣೆಯಲ್ಲಿ ವಿಜೇತರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಕೆ.ಪಿ.ಸತೀಶ್ಚಂದ್ರನ್ ಅವರಿಗೆ 4,34,523 ಮತಗಳು(ಅಂಚೆ ಮತಗಳು 2176) ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 1,76,049 ಮತಗಳು(ಅಂಚೆ ಮತಗಳು 709) ಲಭಿಸಿವೆ. ನೋಟ ವಿಭಾಗದಲ್ಲಿ 4417 ಮತಗಳು (ಅಂಚೆ ಮತಗಳು 26) ದಾಖಲಾಗಿವೆ. ಗೋವಿಂದನ್ ಬಿ.ಅಲಿನ್ ಕೋಳೆ ಅವರಿಗೆ 2670 ಮತಗಳು(ಅಂಚೆ ಮತಗಳು 2) ಸಿಕ್ಕಿವೆ. ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 1910 ಮತಗಳು(ಅಂಚೆ ಮತಗಳು 7) ಲಭಿಸಿವೆ. ರಮೇಶನ್ ಬಂದಡ್ಕ ಅವರಿಗೆ 1711 ಮತಗಳು(ಅಂಚೆ ಮತಗಳು 5) ಲಭಿಸಿದುವು. ರಣದೀವನ್ ಆರ್.ಕೆ. ಅವರಿಗೆ 1478 ಮತಗಳು(ಅಂಚೆ ಮತಗಳು 3) ದೊರೆತಿವೆ. ನರೇಂದ್ರ ಕುಮಾರ್ ಕೆ. ಅವರಿಗೆ 1054(ಅಂಚೆ ಮತಗಳು 1). ಸಜಿ ಅವರಿಗೆ 1278(ಅಂಚೆ ಮತಗಳು 1) ಲಭ್ಯವಾಗಿವೆ.
ಕಾಸರಗೋಡು ಲೋಕಸಭಾ ಕ್ಷೇತ್ರದ 5 ವಿಧಾನಸಭಾ ಕ್ಷೇತ್ರಗಳ ಮಟ್ಟದ ಮತಗಣನೆ ವಿವರ:
ಮಂಜೇಶ್ವರ ವಿಧಾನಸಭಾ ಕ್ಷೇತ್ರ:
ಮತದಾನ ನಡೆಸಿರುವ ಮಂದಿ 160934 (ಶೇ. 75.87). ಬಹುಮತ 11113. ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 390 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 57104 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 68217 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 32796. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 548 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 229 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 222 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 422 ಮತಗಳು, ಸಜಿ ಅವರಿಗೆ 350 ಮತಗಳು, ನೋಟ ವಿಭಾಗದಲ್ಲಿ 656 ಮತಗಳು ದೊರೆತಿವೆ.
ಕಾಸರಗೋಡು ವಿಧಾನಸಭಾ ಕ್ಷೇತ್ರ :
ಮತದಾನ ನಡೆಸಿರುವ ಮತದಾರರು: 147269 (ಶೇ. 76.32). ಚಬಹುಮತ: 23160. ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 329 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 46630 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 69790ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 28567. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 380 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 188 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 196 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 322 ಮತಗಳು, ಸಜಿ ಅವರಿಗೆ 263 ಮತಗಳು, ನೋಟ ವಿಭಾಗದಲ್ಲಿ 604 ಮತಗಳು ದೊರೆತಿವೆ.
ಉದುಮಾ ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾನ ನಡೆಸಿದವರು 161580(ಶೇ. 79.33). ಬಹುಮತ 8937.
ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 273 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 23786 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 72324 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 63387. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 417ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 138 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 211 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 324 ಮತಗಳು, ಸಜಿ ಅವರಿಗೆ 163 ಮತಗಳು, ನೋಟ ವಿಭಾಗದಲ್ಲಿ 557 ಮತಗಳು ದೊರೆತಿವೆ.
ಕಾಂಞಂಗಾಡ್ ವಿಧಾನಸಭಾ ಕ್ಷೇತ್ರ:
ಒಟ್ಟು ಮತದಾನ ನಡೆಸಿದವರು 169939(ಶೇ. 81.25).ಬಹುಮತ:2221.
ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 277 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 20046 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 72570 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 74791. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 474 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 171 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 409 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 305 ಮತಗಳು, ಸಜಿ ಅವರಿಗೆ 218 ಮತಗಳು, ನೋಟ ವಿಭಾಗದಲ್ಲಿ 678ಮತಗಳು ದೊರೆತಿವೆ.
ತ್ರಿಕರಿಪುರ ವಿಧಾನಸಭಾ ಕ್ಷೇತ್ರ:
ಒಟ್ಟು ಮತದಾನ ನಡೆಸಿದವರು 161198 (ಶೇ. 83.43). ಬಹುಮತ: 1899.
ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 212 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 8652 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 74504 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 76403. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 337 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 116 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 186 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 147 ಮತಗಳು, ಸಜಿ ಅವರಿಗೆ 100 ಮತಗಳು, ನೋಟ ವಿಭಾಗದಲ್ಲಿ 541 ಮತಗಳು ದೊರೆತಿವೆ.
ಪಯ್ಯನ್ನೂರು ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾನ ನಡೆಸಿದವರು 150363(ಶೇ. 85.86). ಬಹುಮತ: 26131.
ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 195 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 9268 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 56730 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 82861. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 256 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 99 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 132 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 88 ಮತಗಳು, ಸಜಿ ಅವರಿಗೆ 91 ಮತಗಳು, ನೋಟ ವಿಭಾಗದಲ್ಲಿ 643 ಮತಗಳು ದೊರೆತಿವೆ.
ಕಲ್ಯಾಶೇರಿ ವಿಧಾನಸಭಾ ಕ್ಷೇತ್ರ :
ಒಟ್ಟು ಮತದಾನ ನಡೆಸಿದವರು 144860 (ಶೇ. 82.96). ಬಹುಮತ: 13694.
ನ್ಯಾಯವಾದಿ ಬಶೀರ್ ಆಲಡಿ ಅವರಿಗೆ 227 ಮತಗಳು ಲಭಿಸಿವೆ. ಕುಂಟಾರು ರವೀಶ ತಂತ್ರಿ ಅವರಿಗೆ 9854 ಮತಗಳು ಬಂದಿವೆ. ರಾಜ್ ಮೋಹನ್ ಉಣ್ಣಿತ್ತಾನ್ ಅವರಿಗೆ 59848 ಮತಗಳು ಸಿಕ್ಕಿವೆ. ಕೆ.ಪಿ.ಸತೀಶ್ಚಂದ್ರನ್ ಅವರಿಗೆ 73542. ಗೋವಿಂದನ್ ಬಿ.ಆಲಿಲ್ ತಾಳೆ ಅವರಿಗೆ 256 ಮತಗಳು ಲಭಿಸಿದುವು. ನರೇಂದ್ರ ಕುಮಾರ್ ಕೆ. ಅವರಿಗೆ 112 ಮತಗಳು ದೊರೆತಿವೆ. ರಣದೀವನ್ ಆರ್.ಕೆ. ಅವರಿಗೆ 119 ಮತಗಳು ಲಭ್ಯವಾಗಿವೆ. ರಮೇಶನ್ ಬಂದಡ್ಕ ಅವರಿಗೆ 98 ಮತಗಳು, ಸಜಿ ಅವರಿಗೆ 92 ಮತಗಳು, ನೋಟ ವಿಭಾಗದಲ್ಲಿ 712 ಮತಗಳು ದೊರೆತಿವೆ.