ನವದೆಹಲಿ: ಜುಲೈ 1ರಿಂದ ಜಾರಿಗೆ ಬರುವಂತೆ ಕೇಏಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣಿಕರ ತಲಾ ವಿಮಾನ ಯಾನ ಭದ್ರತಾ ಶುಲ್ಕ(ಎಎಸ್‍ಎಫ್) ಹೆಚ್ಚಳಕ್ಕೆ ನಿರ್ಧರಿಸಿದ್ದು ಇದರಿಂದಾಗಿ ಒಟ್ತಾರೆ ವಿಮಾನ ಯಾನ ತುಟ್ಟಿಯಾಗಲಿದೆ.
ಭಾರತೀಯ ಪ್ರಯಾಣಿಕರಿಗೆ ಎಎಸ್‍ಎಫ್ ಪ್ರಸ್ತುತ 130 ರು. ಆಗಿದ್ದು ಪರಿಷೃತ ದರದನ್ವಯ 150 ರೂ. ಗೆ ಏರಿಕೆಯಾಗಲಿದೆ. ಇದೇ ವೇಳೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಇದುವರೆಗಿನ 3.25 ಡಾಲರ್ ನಷ್ಟಿದ್ದ ಎಎಸ್‍ಎಫ್ ಶುಲ್ಕವನ್ನು 4.85 ಡಾಲರ್ ಗೆ ಹೆಚ್ಚಳ ಮಾಡಲಾಗಿದೆ.
ವಿಮಾನಯಾನ ಸಚಿವಾಲಯ ಹೊರಡಿಸಿದ ಪ್ರಕಟಣೆಯನ್ವಯ ಎಎ ಐಫ್ ಪ್ರಯಾಣಿಕ ಸೇವಾ ಶುಲ್ಕ (ಭದ್ರತಾ ಅಂಶವೂ ಸೇರಿದಂತೆ)ಪಿಎ ಐಫ್ (ಎಸ್ಸಿ) ಬದಲಾಗಲಿದೆ.