ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ 104 ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ ಜೂನ್ 8 ರಂದು ಜೋಡುಕಲ್ಲು ಜೆ.ಕೆ.ವಿ. ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಜರಗಲಿದೆ.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಕಾರ್ಯಕ್ರಮ ಉದ್ಘಾಟಿಸುವರು. ಕೇರಳ ಗ್ರಾಮೀಣ ಬ್ಯಾಂಕ್‍ನ ನಿವೃತ್ತ ಪ್ರಾದೇಶಿಕ ಪ್ರಬಂಧಕ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಸಂಸ್ಮರಣಾ ಭಾಷಣ ಮಾಡುವರು. ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಚ್.ಎಮ್. ಬಸವರಾಜ ಬಳ್ಳಾರಿಯವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ರವಿ ನಾಯ್ಕಾಪು ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸುವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ ರೈ ಕಯ್ಯಾರು, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಉಮೇಶ್ ಶೆಟ್ಟಿ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‍ನ ಶ್ರೀಧರ ಹೊಳ್ಳ ಕಯ್ಯಾರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಪೆÇ್ರ.ಎ. ಶ್ರೀನಾಥ್, ಮೀಡಿಯ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ಜೆಕೆವಿ ಜೋಡುಕಲ್ಲು ಅಧ್ಯಕ್ಷ ಲಕ್ಷ್ಮಣ ಮಡಂದೂರು ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸುವರು.