HEALTH TIPS

ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ 104 ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ

 
       ಉಪ್ಪಳ: ನೇಗಿಲ ಕ್ರಾಂತಿ, ಕನ್ನಡದ ಜಾಗೃತಿ, ಸಾಹಿತ್ಯದ ಆಸಕ್ತಿ ಕಯ್ಯಾರರನ್ನು ಧೀಮಂತ ಶಕ್ತಿಯನ್ನಾಗಿ ಮಾಡಿದೆ. ಸಂಸ್ಕøತ ಪಂಡಿತರಾಗಿ, ಕನ್ನಡ ಹೋರಾಟಗಾರರಾಗಿ, ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಶ್ರೇಷ್ಠ ಅಧ್ಯಾಪಕರಾಗಿ, ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲೂ ಕೈಯಾಡಿಸಿ ಮಹಾನ್ ಬಹುಮುಖ ಶ್ರೀಮಂತಿಕೆಯ ಅನುಭವದ ಖಜಾನೆ ಕಯ್ಯಾರ ಕಿಞï್ಞಣ್ಣ ರೈಗಳು ಎಂದು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟರು.
     ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಜೋಡುಕಲ್ಲಿನ ಜೆಕೆವಿ ಸಭಾಂಗಣದಲ್ಲಿ ಶನಿವಾರ ಜರುಗಿದ ಕನ್ನಡದ ಹಿರಿಯ ಚೇತನ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ 104 ನೇ ಜನ್ಮದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು   ದೀಪ ಬೆಳಗಿಸಿ ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು  ಉದ್ಘಾಟಿಸಿ ಅವರು ಮಾತನಾಡಿದರು.
    ಗಟ್ಟಿ ಕನ್ನಡಿಗರಾಗಿ ಕನ್ನಡವನ್ನೇ ಜೀವನವಾಗಿಸಿದವರು ಕಯ್ಯಾರರು.ಅನುಭವ ಸಾಮ್ರಾಜ್ಯದಲ್ಲಿ ಸರಳ ವ್ಯಕ್ತಿತ್ವ ಮತ್ತು ದಿಟ್ಟ ಬರಹಗಳ, ಹೋರಾಟಗಳ ಮೂಲಕ ಬೆಂಕಿ ಬಿದ್ದಿದೆ ಮನೆಗೆ ಎಚ್ಚೆತ್ತು ಹೋರಾಡಿ ಎಂದು ಕನ್ನಡಿಗರನ್ನು ಒಗ್ಗೂಡಿಸಿ ಹೋರಾಡಿದವರು. ಬಹುಭಾಷಾ ಸಾಧಕರು. ವಿಭಿನ್ನ ಭಾಷಾ ಪ್ರಾವೀಣ್ಯತೆ ಹೊಂದಿರುವ ಕಾಸರಗೋಡಲ್ಲಿ ಕನ್ನಡಿಗರ ಭಾಷಾ ಪ್ರೇಮ ಗಟ್ಟಿಯಾಗಿ ಉಳಿಯಲು ಇಂತಹ ಚೇತನಗಳೇ ಕಾರಣ ಎಂದು ಅವರು ಹೇಳಿದರು.
    ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡ ಕನ್ನಡಿಗರ ಧಮನಕಾರಿ ನೀತಿಗೆದುರಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿ ನಮ್ಮನ್ನು ಅಗಲಿರುವ ದಿ.ಕಯ್ಯಾರರು ಕಾಸರಗೋಡಿಗೆ ಎಂದಿಗೂ ಪೂಜನೀಯರು. ಅವರ ಸ್ಪೂರ್ತಿ ಯುವ ಕನ್ನಡ ಮನಸ್ಸುಗಳ ಶಕ್ತಿ ಎಂದು ತಿಳಿಸಿದರು.
      ಕಾರ್ಯಕ್ರಮದಲ್ಲಿ ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಚ್.ಎಮ್. ಬಸವರಾಜ ಬಳ್ಳಾರಿಯವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಅಕಾಡೆಮಿಯು ಕಯ್ಯಾರರ ಜನ್ಮಭೂಮಿಯಲ್ಲಿ ವರ್ಷಂಪ್ರತಿ ಸಂಸ್ಮರಣೆ, ಜನ್ಮದಿನಾಚರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಿರಿಯ ಚೇತನಕ್ಕೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
      ಕೇರಳ ಗ್ರಾಮೀಣ ಬ್ಯಾಂಕ್‍ನ ನಿವೃತ್ತ ಪ್ರಾದೇಶಿಕ ಪ್ರಬಂಧಕ ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಸಂಸ್ಮರಣಾ ಭಾಷಣ ಮಾಡಿ ಕಯ್ಯಾರರ ವ್ಯಕ್ತಿತ್ವ, ಸಾಧನೆ, ರಾಜಕೀಯ, ಸಾಮಾಜಿಕ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
    ರವಿ ನಾಯ್ಕಾಪು ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ ರೈ ಕಯ್ಯಾರು, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಶ್ರೀಧರ ಹೊಳ್ಳ ಕಯ್ಯಾರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ , ಪೆÇ್ರ. ಶ್ರೀನಾಥ್, ಮೀಡಿಯ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನಾರಾಯಣ ನೆಟ್ಟಣಿಗೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಮಡಂದೂರು, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಯು.ಎ.ಇ ಘಟಕದ ಉಪಾಧ್ಯಕ್ಷ ಮುನೀರ್ ಕುಬಣೂರು, ಸಿದ್ಧಿಕ್ ಕಯ್ಯಾರ್, ಕಾರ್ಯದರ್ಶಿ ಇಬ್ರಾಹಿಂ ಬಾಜೂರಿ, ತಾಜುದ್ದೀನ್ ಕುಬಣೂರು ಹಾಗೂ ಸದಸ್ಯರಾದ ಸಾಕೀರ್ ಬಾಯಾರು ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ನವೀನ್ ನೆಟ್ಟಣಿಗೆ, ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜು ಉಪನ್ಯಾಸಕ ಶಿವಶಂಕರ್ ಉಪಸ್ಥಿತರಿದ್ದರು.
     ಗಾಯಕ ಋತಿಕ್ ಯಾದವ್ ಪ್ರಾರ್ಥನೆ ಹಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ಜೊತೆ ಕಾರ್ಯದರ್ಶಿ ವಿದ್ಯಾ ಗಣೇಶ್ ಅಣಂಗೂರು ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries