ಬದಿಯಡ್ಕ: ಮುಳಿಯಾರು ಪ್ರದೇಶದ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ವಿಶೇಷ ವೈದ್ಯಕೀಯ ಶಿಬಿರ ಜು.10ರಂದು ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್. ಶಾಲೆಯಲ್ಲಿ ನಡೆಯಲಿದೆ.
2017 ಏ.8ರಂದು ಇಲ್ಲಿನ ಸಂತ್ರಸ್ತರಿಗಾಗಿ ನಡೆಸಿದ್ದ ವೈದ್ಯಕೀಯ ಶಿಬಿರಕ್ಕೆ ಹರತಾಳದ ಹಿನ್ನೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದವರಿಗಾಗಿ ಈ ಶಿಬಿರ ಆಯೋಜಿಸಲಾಲಿದೆ.
ವೈದ್ಯಕೀಯ ಕಾಲೇಜ್ ಮತ್ತು ಆರೋಗ್ಯ ಇಲಾಖೆಯಿಂದ ಆಗಮಿಸುವ ಪರಿಣತ ವೈದ್ಯರು ರೋಗಿಗಳ ತಪಾಸಣೆ ನಡೆಸಿ, ವರದಿ ಸಲ್ಲಿಸುವರು. ಈ ಶಿಬಿರದಲ್ಲಿ ಭಾಗವಹಿಸುವ ಸಂತ್ರಸ್ತರಿಗಾಗಿ ಸ್ಲಿಪ್ ಗಳು ಮುಳಿಯಾರು ಶಿಬಿರದ ವ್ಯಾಪ್ತಿಯಲ್ಲಿ ಬರುವ ಪಂಚಾಯತಿ ಗಳಾದ ಮುಳಿಯಾರು, ಚೆಂಗಳ, ಬೇಡಡ್ಕ, ದೇಲಂಪಾಡಿ, ಕಾರಡ್ಕ, ಮೊಗ್ರಾಲ್ ಪುತ್ತೂರು, ಕುತ್ತಿಕೋಲ್, ಮಧೂರು ಮತ್ತು ಕಾಸರಗೋಡು ನಗರಸಭೆ ಗಳ ಆರೋಗ್ಯ ಸಂಸ್ಥೆಗಳಲ್ಲಿ ಲಭಿಸಲಿವೆ. ಸ್ಲಿಪ್ ಲಭಿಸಿದ ರೋಗಿಗಳು ಸ್ಲಿಪ್ಪನ್ನು ಜು.10ರಂದು ನಡೆಯುವ ವೈದ್ಯಕೀಯ ಶಿಬಿರದಲ್ಲಿ ಬೆಳಿಗ್ಗೆ 10 ಕ್ಕೆ ನಡೆಯುವ ನೋಂದಣಿಯ ಸಂದರ್ಭ ಹಾಜರುಪಡಿಸಬೇಕು ಎಂದು ಅಧಿಕೃತರು ತಿಳಿಸಿದ್ದಾರೆ.