ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಹಳ್ಳಿಗಳಲ್ಲಿ ನೇತ್ರ ತಪಾಸಣೆ ಹಾಗು ಚಿಕಿತ್ಸಾ ಶಿಬಿರದ 4 ನೇ ಶಿಬಿರವು ಬಂದಡ್ಕದಲ್ಲಿ ಇತ್ತೀಚೆಗೆ ಜರಗಿತು.
ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ ಹಾಗು ಬಂದಡ್ಕ ಶ್ರೀ ರಾಮನಾಥ ದೇವಳ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ಜರಗಿದ ನೇತ್ರ ತಪಾಸಣೆ ಹಾಗು ಚಿಕಿತ್ಸಾ ಶಿಬಿರದ 115 ಮಂದಿ ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ಬಂದಡ್ಕ ಶ್ರೀ ರಾಮನಾಥ ದೇವಳ ಸಭಾ ಭವನದಲ್ಲಿ ವಿತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಭಯನಿಕೇತನದ ಅಧ್ಯಕ್ಷ ಎಸ್.ಬಿ.ಖಂಡಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಾಲಯದ ಮೊಕ್ತೇಸರ ಬಿ.ಸದಾನಂದ ರೈ, ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯವರ ಸೇವಾ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟ್ರಮಣ ಭಾಗವಹಿಸಿದ್ದರು. ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಕೆ. ಉಪಸ್ಥಿತರಿದ್ದರು.
ಬಂದಡ್ಕ ಶ್ರೀ ರಾಮನಾಥ ದೇವಳ ಟ್ರಸ್ಟ್ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಸ್ವಾಗತಿಸಿ, ಬಿಎಸ್‍ಎಸ್ ಅಭಯನಿಕೇತನ್ ಜೊತೆ ಕಾರ್ಯದರ್ಶಿ ರಾಮಕೃಷ್ಣ ಸಿ.ಎನ್. ವಂದಿಸಿದರು.