ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಜೂ.12ರಂದು ಬೆಳಿಗ್ಗೆ 10.30ಕ್ಕೆ ಖಾಸಗಿ ವಲಯಗಳಲ್ಲಿ ಬರಿದಾಗಿರುವ 37 ಹುದ್ದೆಗಳಿಗೆ ನೇಮಕ ಸಂಬಂಧ ಸಂದರ್ಶನ ನಡೆಯಲಿದೆ.
25 ವರ್ಷಕ್ಕಿಂತ ಅಧಿಕ ವಯೋಮಾನದ, ಪದವೀಧರರಾದ, ಸೇಲ್ಸ್ ಕ್ಷೇತ್ರದಲ್ಲಿ ಮೂರು ವರ್ಷದ ವೃತ್ತಿ ಪರಿಚಯ ಹೊಂದಿದ ಪುರುಷರಿಗೆ ಸೀನಿಯರ್ ರಿಲೇಷನ್ ಶಿಪ್ ಮೆನೆಜರ್ ಹುದ್ದೆಗೆ, ಪ್ಲಸ್ ಟು ಅರ್ಹತೆಯಿರುವ, 18 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ವಯೋಮಾನದ, ಪುರುಷರಿಗೆ ರಿಲೇಷನ್ ಶಿಪ್ ಮೆನೆಜರ್ ಹುದ್ದೆಗೆ, 10ನೇ ತರಗತಿ ಅರ್ಹತೆ ಹೊಂದಿರುವ, 25 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ, ಪುರುಷರಿಗೆ ವಾಹನಚಾಲಕ ಹುದ್ದೆಗೆ, 20 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ, ಪ್ಲಸ್ ಟು ಅರ್ಹತೆಯಿರುವ, ಮಹಿಳೆ-ಪುರುಷರಿಗೆ ಫುಡ್ ಆಂಡ್ ಬಿವರೇಜ್ ಹುದ್ದೆಗೆ, 30 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟ ವಯೋಮಾನದ , ಪದವೀಧರರಾದವರಿಗೆ ಮೈಕ್ರೋ ಫಿನಾನ್ಸ್ ಆಪಿಸರ್ ಹುದ್ದೆಗೆ ಸಂದರ್ಶನ ನಡೆಯಲಿದೆ. ದೂರವಾಣಿ ಸಂಖ್ಯೆ: 9207155700/04994297470 ಸಂಪರ್ಕಿಸಬಹುದು.