ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2 ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯೋಗ ಗುರು ಬಾಬಾ ರಾಮ್ ದೇವ್ ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.
ವಿರೋಧಪಕ್ಷಗಳಿಗೆ ವ್ಯಂಗ್ಯ ಭರಿತ ಸಲಹೆ ನೀಡಿರುವ ರಾಮ್ ದೇವ್, ಮುಂದಿನ 10-15 ವರ್ಷ ಒತ್ತಡ ನಿರ್ವಹಣೆಗಾಗಿ ಕಪಾಲಭಾತಿ ಯೋಗ ಅಭ್ಯಾಸ ಮಾಡಿ ಎಂದು ಹೇಳಿದ್ದಾರೆ. ಮೋದಿ ನಾಯಕತ್ವದ ಅಡಿಯಲ್ಲಿ ದೇಶ ಆರ್ಥಿಕ ಮತ್ತು ಸಾಂಸ್ಕೃತಿಕ ದೌರ್ಜನ್ಯದಿಂದ ಸ್ವಾತಂತ್ರ್ಯ ಪಡೆಯಲಿದೆ.
ಅಮಿತ್ ಶಾ, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಸೇರಿದಂತೆ ಮೋದಿ ಸರ್ಕಾರದ ಎಲ್ಲಾ ಸಚಿವರು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿದ್ದಾರೆ ಎಂದು ಬಾಬಾ ರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ 10-15 ವರ್ಷಗಳಲ್ಲಿ ವಿಪಕ್ಷಗಳ ನಾಯಕರು ಕಪಾಲಭಾತಿ ಹಾಗೂ ಅನುಲೋಮ-ವಿಲೋಮಗಳನ್ನು ಬಹಳವೇ ಮಾಡಬೇಕಾಗುತ್ತದೆ, ಹೀಗೆ ಮಾಡಿದಲ್ಲಿ ಮಾತ್ರ ಅವರ ಒತ್ತಡ ನಿರ್ವಹಣೆ ಸಾಧ್ಯ ಎಂದು ರಾಮ್ ದೇವ್ ಹೇಳಿದ್ದಾರೆ.