ಮುಳ್ಳೇರಿಯ : ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ವಲಯ ಸಮಿತಿಯ ವಾರ್ಷಿಕ ಮಹಾಸಭೆಯು ಜೂ.16ರಂದು ಬೆಳಿಗ್ಗೆ 10ರಿಂದ ಅಡೂರಿನ ಕಾಯರ್ತಿಮಾರು ಕೃಷ್ಣ ಸರಳಾಯರ ಮನೆಯಲ್ಲಿ ನಡೆಯಲಿದೆ. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ ಅಡಿಗ ಕೋಟೆಗದ್ದೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಮಿತಿ ವೀಕ್ಷಕರಾಗಿ ವೇಣುಗೋಪಾಲ ಕಲ್ಲೂರಾಯ ಹಾಗೂ ಶೋಭಿತಾ ಮಂಜುನಾಥ್ ಕಾಂಞಂಗಾಡ್ ಭಾಗವಹಿಸುವರು. ಈ ಸಂದರ್ಭದಲ್ಲಿ ಉತ್ತಮ ಸೇವಕ ಪ್ರಶಸ್ತಿಯನ್ನು ನೂಜಿಬೆಟ್ಟು ವೆಂಕಟಕೃಷ್ಣ ಭಾರಿತ್ತಾಯ ಹಾಗೂ ಉತ್ತಮ ಸೇವಕಿ ಪ್ರಶಸ್ತಿಯನ್ನು ಅಂಬಿತ್ತಿಮಾರು ಚಂಚಲಾ ಸರಳಾಯರಿಗೆ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರತಿಭೆಗಳಾದ ಶಂಕರನಾರಾಯಣ ಓಲಸರಿ, ಶ್ರೇಯ ಕೊಯಂಗೋಡು, ಅನನ್ಯಾ ಹೊಸವಳಿಕೆ, ಅನನ್ಯಾ ಭಾರಿತ್ತಾಯ, ರಾಜಿತ ಕೆ ಆರ್ ಅವರನ್ನು ಅಭಿನಂದಿಸಲಾಗುವುದು. ವಿಶೇಷ ಶೈಕ್ಷಣಿಕ ಪ್ರತಿಭೆ ಪ್ರಮಿತಾ ಎ ಹಾಗೂ ವಿಶೇಷ ಬಹುಮುಖಿ ಪ್ರತಿಭೆ ಆದ್ಯಂತ್ ಅಡೂರು ಅವರನ್ನು ಸನ್ಮಾನಿಸಲಾಗುವುದು. ಬಳಿಕ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣೆ, ನೂತನ ಪದಾಧಿಕಾರಿಗಳ ಆಯ್ಕೆ, ಮುಂದಿನ ಯೋಜನೆಗಳ ಬಗ್ಗೆ ಸಮಾಲೋಚನೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಶಿವಳ್ಳಿ ಬ್ರಾಹ್ಮಣ ಮಹಾಸಭೆ ಜೂ.16ರಂದು
0
ಜೂನ್ 14, 2019