ನವದೆಹಲಿ: ಫೆ.27 ರಂದು ಮಿ-17 ವಿ5 ವಿಮಾನ ಪತನಗೊಂಡಿದ್ದ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು, ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ.
ಪತನಗೊಂಡ ಮಿ-17 ವಿಮಾನದಲ್ಲಿದ್ದ 6 ಜನರು ಮೃತಪಟ್ಟಿದ್ದರು. ರಕ್ಷಣಾ ವ್ಯವಸ್ಥೆ ಸ್ಪೈಡರ್ ಮಿ-17 ನ್ನು ಹೊಡೆದುರುಳಿಸಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ತನಿಖೆ ಅಂತಿಮ ಹಂತಕ್ಕೆ ತಲುಪಿದ್ದು ಅಂತಿಮ ವರದಿ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ. ತನಿಖೆಯ ನಂತರಲ್ಲಿ ಕರ್ತವ್ಯ ಲೋಪದೋಷ ಉಂಟುಮಾಡಿದ್ದ ಇಬ್ಬರು ಅಧಿಕಾರಿಗಳು ಕೋರ್ಟ್ ಮಾರ್ಷಲ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.