ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆ ಯಾಗುವ ಸಾಧ್ಯತೆಯಿದೆ.
ಸೊಮವಾರದಿಂದ ಲೋಕಸಭಾ ಅಧಿವೇಶನ ಆರಂಭವಾಗಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. 56 ವರ್ಷದ ಬಿರ್ಲಾ, ಅವರು ಎರಡನೇ ಬಾರಿ ರಾಜಸ್ಥಾನದ ಸಂಸದರಾಗಿ ಆಯ್ಕೆಯಾಗಿದ್ದು, 17ನೇ ಲೋಕಸಭೆಗೆ ಸ್ಪೀಕರ್ ಆಗಿ ನಾಮಿನೇಟ್ ಮಾಡಲಾಗಿದೆ.
ಈ ಹಿಂದೆ ಸುಮಿತ್ರಾ ಮಹಾಜನ್ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಬಿರ್ಲಾ ಪತ್ನಿ ಅಮಿತ್ ಬಿರ್ಲಾ, ನಮ್ಮ ಕುಟಂಬಕ್ಕೆ ಹೆಮ್ಮೆ ತರುವಂತಹ ವಿಚಾರವಿದು. ಬಹಳ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Amita Birla, wife of BJP MP Om Birla, who reportedly is the NDA candidate for the post of Lok Sabha Speaker: It is a very proud and a happy moment for us. We are very thankful to the cabinet for choosing him. (In pic 2&3 : BJP MP Om Birla)
87 people are talking about this