HEALTH TIPS

ಜೂ.19ರಿಂದ ವಾಚನಾ ಸಪ್ತಾಹ


      ಕಾಸರಗೋಡು:  ವಾಚನ ಸಪ್ತಾಹ ಜೂ.19ರಿಂದ ಜು.7 ವರೆಗೆ ಜಿಲ್ಲೆಯಲ್ಲಿ ನಡೆಯಲಿದೆ.
           ರಾಜ್ಯ ಸರಕಾರದ ವತಿಯಿಂದ ಕೇರಳ ರಾಜ್ಯ ಗ್ರಂಥಾಲಯ ಮಂಡಳಿ ಮತ್ತು ಪಿ.ಎನ್.ಪಣಿಕ್ಕರ್ ಫೌಂಡೇಸನ್ ಜಂಟಿ ವತಿಯಿಂದ ಓದುವಿಕೆಯ ವಲಯದಲ್ಲಿ ಕ್ರಾಂತಿ ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ ವ್ಯಾಪಕ ರೂಪದಲ್ಲಿ ಈ ಸರಣಿ ನಡೆಯಲಿದೆ.
       ಗೃಹಿಣಿಯರಿಂದ ತೊಡಗಿ ಉನ್ನತ ಶಿಕ್ಷಣ ವಲಯದ ಕಾರ್ಯಕರ್ತರು, ವಿದ್ಯಾರ್ಥಿಗಳು,ಕಾರ್ಮಿಕರು ಸಹಿತ ಸಮಾಜದ ಎಲ್ಲ ಜನತೆಯ ಸಕ್ರಿಯ ಸಹಭಗಿತ್ವದೊಂದಿಗೆ ಸಮಾರಂಭ ನಡೆಯಲಿದೆ ಎಂದು ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ವಿ.ಕೆ.ಪನೆಯಾಲ್ ತಿಳಿಸಿರುವರು.
    ಜೂ.19ರಂದು ಜಿಲ್ಲಾ-ತಾಲೂಕು-ಶಾಲೆ-ಗ್ರಂಥಾಲಯ ಮಟ್ಟಗಳಲ್ಲಿ  ಉದ್ಘಾಟನೆಗಳು ಜರುಗಲಿವೆ. 21ರಂದು ಮಹಿಳಾ ವೇದಿಕೆಗಳ ವತಿಯಿಂದ ಗ್ರಾಂಥಾಲಯಗಳಲ್ಲಿ ವಾಚನಾ ಒಕ್ಕೂಟಗಳು ನಡೆಯಲಿವೆ. 26ರಂದು ಗ್ರಂಥಾಲಯಗಳಲ್ಲಿ ಮಾದಕ ಪದಾರ್ಥ ವಿರುದ್ಧ ಸಭೆಗಳು ಜರುಗಲಿವೆ. 30ರಂದು ಕಿರಿಯ, ಹಿರಿಯ ಪ್ರಾಥಮಿಕ ಮಟ್ಟದ ಶಾಲೆಗಳಲ್ಲಿ
    ವಾಚನಾ ಸ್ಪರ್ಧೆಗಳು ಜರುಗಲಿವೆ. ಹೈಯರ್ ಸೆಕೆಂಡರಿ, ಪ್ರೌಢಶಲೆ, ಹಿರಿಯ ಪ್ರಾಥಮಿಕ ಶಾಲೆ ಮಟ್ಟದಲ್ಲಿ ವಾಚನೋತ್ಸವಗಳು, ಮಹಿಳೆಯರು, ಹಿರಿಯ ಪ್ರಜೆಗಳು, ವಿಶೇಷ ಚೇತನರು ಮೊದಲಾದವರಿಗಾಗಿ ಓದುವ ಸ್ಪರ್ಧೆ, ಸಂಸ್ಮರಣೆ ಸಮಾರಂಭಗಳು, ಪುಸ್ತಕ ಪ್ರದರ್ಶನ-ಕೃತಿ ಪರಿಚಯಗಳು ಇತ್ಯಾದಿ ನಡೆಯಲಿವೆ.
    ಕಾರ್ಯಕ್ರಮಗಳ ಅಂಗವಾಗಿ ಸಾಕ್ಷರತಾ ಮಿಷನ್ ವತಿಯಿಂದ ನಿರಂತರ ಕಲಿಕಾ ಕೇಂದ್ರಗಳಲ್ಲಿ ವಾಚನ ಸಪ್ತಾಹ ಜರುಗಲಿವೆ. ಸ್ಥಳೀಯಾಡಳಿತ ಸಂಸ್ಥೆಗಳ, ಶಾಲೆಗಳ ಗ್ರಂಥಾಲಯಗಳು, ಕುಟುಂಬಶ್ರೀ ಮಿಷನ್ ಇತ್ಯಾದಿಗಳ ಸಹಭಾಗಿತ್ವದಲ್ಲಿ ಸಾರ್ವಜನಿಕಕಾರ್ಯಕ್ರಮಗಳು, ಶಿಕ್ಷಣ ಸಂರಕ್ಷಣೆ ಯಜ್ಞ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries