ಕುಂಬಳೆ: ವಿದ್ಯಾನಗರದ ಸರಕಾರಿ ಕಾಲೇಜಿನಲ್ಲಿ `ಕ್ಯಾಂಪಸ್ ಆಯ್ಕೆ' ಕಾರ್ಯಕ್ರಮ ಜೂನ್ 19 ರಂದು ಬುಧವಾರ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಆರಂಭಗೊಳ್ಳಲಿರುವ ಆಯ್ಕೆ ಪ್ರಕ್ರಿಯೆ ಅತ್ಯಧಿಕ ಉದ್ಯೋಗ ಆಕಾಂಕ್ಷಿಗಳ ನೌಕರಿಯ ಕನಸನ್ನು ನನಸು ಮಾಡಲಿದೆ.
ಕನ್ನಡ ಅಥವಾ ಮಲಯಾಳಂನಲ್ಲಿ ಸಂವಹನ ಕೌಶಲ್ಯ, ಇಂಗ್ಲಿಷ್ ಸಂವಹನ ಸಾಮಥ್ರ್ಯ, ಕಂಪ್ಯೂಟರ್ ಜ್ಞಾನ ಇರುವವರಿಗೆ ಪ್ರಾಶಸ್ತ್ಯ. ಸಮೂಹ ಚರ್ಚೆ ಬುದ್ಧಿಮತ್ತೆ ಪರೀಕ್ಷೆ, ನೇರ ಮುಖಾಮುಖಿ-ವ್ಯಕ್ತಿತ್ವ ಸಂದರ್ಶನಗಳು ನಡೆಯಲಿವೆ.
ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮತ್ತು ಇತರ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಆಕಾಂಕ್ಷಿಗಳು ಬಯೋಡೇಟಾ, ತಮ್ಮದೇ ಭಾವಚಿತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ತರುವುದು ಅಗತ್ಯ. ಮಂಗಳೂರು, ಬೆಂಗಳೂರು ಮತ್ತು ಎರ್ನಾಕುಲಂಗಳ ವಿವಿಧ ಕಾಪೆರ್Çೀರೇಟ್ ಕಂಪೆನಿಗಳು `ಕ್ಯಾಂಪಸ್ ಆಯ್ಕೆ' ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಸರಕಾರಿ ಕಾಲೇಜಿನ ಉದ್ಯೋಗ ಕೇಂದ್ರದ ಪ್ರಕಟಣೆ ತಿಳಿಸಿದೆ.