HEALTH TIPS

ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ

         ಕೊಲಂಬೋ: ಇಬ್ಬರು ಸ್ಥಳೀಯ ಇಂಜಿನಿಯರ್‍ಗಳು ವಿನ್ಯಾಸಗೊಳಿಸಿಅಭಿವೃದ್ಧಿಪಡಿಸಿದ ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ -1' ಅನ್ನು ಈ ವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಜಪಾನ್ ಮತ್ತು ನೇಪಾಳದ ಇತರ ಎರಡು  ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಲಾಯಿತು.
    ರಾವಣ 1, ಘನ ಉಪಗ್ರಹ 11.3 ಸೆಂಮೀx 10 ಸೆಂಮೀx 10 ಸೆಂಮೀ ಅಳತೆ ಹೊಂದಿದ್ದು ಮಾರು 1.05 ಕೆಜಿ ತೂಕ ಹೊಂದಿದೆ. ಸೋಮವಾರ ಮಧ್ಯಾಹ್ನ 3: 45 ಕ್ಕೆ (ಶ್ರೀಲಂಕಾ ಸಮಯ) ಉಪಗ್ರಹ ಕಕ್ಷೆಗೆ ಉಡಾವಣೆಯಾಗಿದೆ ಎಂದು ಕೊಲಂಬೊ ಪೇಜ್ ವರದಿ ಮಾಡಿದೆ.
   ಜಪಾನ್‍ನ ಕ್ಯುಶು ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ತರಿಂದು ದಯರತ್ನ ಮತ್ತು ದುಲಾನಿ ಚಮಿಕಾ ಎಂಬ ಇಬ್ಬರು ಶ್ರೀಲಂಕಾದ ಇಂಜಿನಿಯರ್‍ಗಳು ಈ ಉಪಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ ರಾವಣ 1, ಅನ್ನು ಜಾಕ್ಸಾ (ಜಪಾನೀಸ್ ಏರೋಸ್ಪೇಸ್ ಮತ್ತು ಎಕ್ಸ್‍ಪ್ಲೋರೇಶನ್ ಏಜೆನ್ಸಿ) ಒಡೆತನದ ಕಿಬೊ ಪ್ರಯೋಗ ಘಟಕವನ್ನು ಬಳಸಿಕೊಂಡು 51.6 ಡಿಗ್ರಿಗಳಷ್ಟು ಇಳಿಜಾರಿನಲ್ಲಿ 400 ಕಿ.ಮೀ ಕಕ್ಷೆಗೆ ನಿಯೋಜಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
ಈ ಉಪಗ್ರಹವನ್ನು ಅಧಿಕೃತವಾಗಿ ಫೆಬ್ರವರಿ 18 ರಂದು ಜಪಾನ್ ಏರೋಸ್ಪೇಸ್ ಎಕ್ಸ್‍ಪ್ಲೋರೇಶನ್ ಏಜೆನ್ಸಿಗೆ ಹಸ್ತಾಂತರಿಸಲಾಗಿತ್ತು.ಯುಎಸ್‍ನಿಂದ ಸಿಗ್ನಸ್ -1 ಬಾಹ್ಯಾಕಾಶ ನೌಕೆಯ ಸಹಾಯದ ಮೂಲಕ ಏಪ್ರಿಲ್ 17 ರಂದು ಐಎಸ್‍ಎಸ್‍ಗೆ ಕಳುಹಿಸಲಾಯಿತು.
      ರಾವಣ -1 ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದರ ಜತೆಗೆ ವಿವಿಧ ಬಗೆ ಐದು ಕೆಲಸಗಳನ್ನು ನಿರ್ವಹಿಸುವ ನಿರೀಕ್ಷೆ ಇದೆ.ಕನಿಷ್ಠ ಒಂದೂವರೆ ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹ ಐದು ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries