ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಹತ್ತನೇ, ಹೈಯರ್ ಸೆಕೆಂಡರಿ ತರಗತಿಗಳ ತತ್ಸಮಾನ ತರಬೇತಿಗಳ ನೋಂದಣಿ ಜು.1ರಿಂದ ಆರಂಭಗೊಳ್ಳಲಿದೆ.
ಈ ತರಬೇತಿಯಲ್ಲಿ ತೇರ್ಗಡೆಹೊಂದುವವರಿಗೆ ಮುಂದಿನ ಶಿಕ್ಷಣಕ್ಕೆ ಪ್ರಮೋಷನ್, ಎಮಿಗ್ರೇಷನ್ ಗೆ ಬಳಸುವ ಅರ್ಹತಾಪತ್ರ ಲಭಿಸಲಿದೆ. 7 ನೇ ತರಗತಿ ತೇರ್ಗಡೆಹೊಂದಿರುವವರಿಗೆ, 8,9ನೇ ತರಗತಿಗಳಲ್ಲಿ ಅನುತ್ತೀರ್ಣರಾದವರು ನೋಂದಣಿ ನಡೆಸಬಹುದು. ವಯೋಮಿತಿ ಜು.1ರಂದು 17 ವರ್ಷ ಪೂರ್ಥಿಗೊಂಡವರಾಗಿರಬೇಕು. ಹತ್ತನೇ ತತ್ಸಮಾನ ತರಬೇತಿಗೆ ಒಟ್ಟು ಶುಲ್ಕ 1950 ರೂ. ಆಗಿದೆ.
ಹತ್ತನೇ ತರಗತಿ ತೇರ್ಗಡೆಹೊಂದಿರುವ 22 ವರ್ಷ ಪ್ರಾಯ ಪೂರ್ಣಗೊಂಡವರಿಗೆ ಹೈಯರ್ ಸೆಕೆಂಡರಿ ತತ್ಸಮಾನ ತರಬೇತಿಗೆ ಹೆಸರು ನೋಂದಣಿ ನಡೆಸಬಹುದು. ಈ ತರಬೇತಿಗೆ ಒಟ್ಟು ಶುಲ್ಕ 2350 ರೂ. ಆಗಿದೆ.
ಕನ್ನಡ ಮಾಧ್ಯಮದಲ್ಲೂ ಹತ್ತನೇ ತರಗತಿ, ಹೈಯರ್ ಸೆಕೆಂಡರಿ ತತ್ಸಮಾನ ತರಗತಿಗಳು ಇವೆ. ಭಾನುವಾರಗಳಲ್ಲಿ, ಸಾರ್ವಜನಿಕ ರಜಾ ದಿನಗಳಲ್ಲಿ ತರಗತಿ ನಡೆಯಲಿವೆ. ಮಾಹಿತಿಗೆ ಜಿಲ್ಲಾಪಂಚಾಯತ್ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಸಾಕ್ಷರತಾ ಕಚೇರಿ, ಬ್ಲೋಕ್/ನಗರಸಭೆ/ಪಂಚಾಯತ್ ಗಳಲ್ಲಿ ಚಟುವಟಿಕೆ ನಡೆಸುವ ಅಭಿವೃದ್ಧಿ ಕೇಂದ್ರಗಳನ್ನು, ನಿರಂತರ ಕಲಿಕಾ ಕೇಂದ್ರಗಳನ್ನು ಸಂಪರ್ಕಿಸಬಹುದು. ದೂರವಾಣಿ: 04994-25507.