HEALTH TIPS

ಇಂದಿನಿಂದ ಹೊಸ ಅಂಕಣ-ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-1-ಬರಹ: ಶ್ರೀವತ್ಸ ಜೋಶಿ.ವಾಶಿಗ್ಟಂನ್ ಡಿಸಿ


           ಡೆಸ್ಕ್‍ನಿಂದ:
    ಪ್ರಸ್ತುತ ಕಾಲಘಟ್ಟದ ವೇಗದ ಮಧ್ಯೆ ಜಗತ್ತು ಹತ್ತಿರವಾಗುತ್ತಿದೆ ಎಂಬ ವಾದಗಳು ಕಳೆದ ಎರಡು ದಶಕಗಳಿಂದ ವ್ಯಾಪಕವಾಗಿದೆ. ಆದರೆ ಭಾರತದಂತಹ ಗ್ರಾಮೀಣ ರಾಷ್ಟ್ರದಲ್ಲಿ ಇದು ಎಷ್ಟರ ಪರಿಣಾಮ ಬೀರಿದೆ ಎಂಬುದು ಬೇರೆಯದೇ ಒಂದು ಮಾತಾದರೂ ಸ್ಥಳೀಯ ಭಾಷೆ, ಸಂಸ್ಕøತಿಯ ಪಲ್ಲಟಕ್ಕೆ ಕಾರಣವಾಗಿರುವುದೂ ಸತ್ಯ. ಈ ಮಧ್ಯೆ ನಮ್ಮ ಕನ್ನಡ ಭಾಷೆ, ಸಂಸ್ಕøತಿಯೂ ತೀವ್ರ ಬದಲಾವಣೆಗಳಿಗೆ ಒಳಗಾಗಿರುವುದನ್ನು ಗಮನಿಸುತ್ತಲೇ ಇದ್ದೇವೆ.
    ಪ್ರಸ್ತುತ ಇಂಗ್ಲೀಷ್ ಭಾಷೆಯ ಪ್ರಭಾವದಿಂದ ವ್ಯಾಪಕ ಸ್ವರೂಪ ಬದಲಾವಣೆಯತ್ತ ಸಾಗುತ್ತಿರುವ ಕನ್ನಡ ಭಾಷೆಯ ಮೂಲ ಸೊಗಡನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಹಲವು ದೃಷ್ಟಿಕೋನದಲ್ಲಿ ನಡೆಯುತ್ತಲೂ ಇವೆ. ಈ ಪೈಕಿ ಹಲವು ಭಾಷಾ ತಜ್ಞರು ವಿಸ್ಕøತ ಪ್ರಮಾಣದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಇವರಲ್ಲಿ ಪ್ರಸ್ತುತ ಅತ್ಯಂತ ಸುಪರಿಚಿತರಾದವರು ಶ್ರೀವತ್ಸ ಜೋಶಿ ಅವರು. ಅವರ ವಿವಿಧ ಆಯಾಮಗಳ ಬರಹಗಳು ಕನ್ನಡ ವಿವಿಧ ಮಾಧ್ಯಮಗಳಲ್ಲಿ ಈಗಾಗಲೇ ಪ್ರಕಟಗೊಳ್ಳುತ್ತಿದ್ದು, ಸಮರಸ ಸುದ್ದಿಯೂ ಇಂದಿನಿಂದ "ಸಮರಸ ಶಬ್ದಾಂತರಂಗ ಸೌರಭ" ಎಂಬ ಶೀರ್ಷಿಕೆಯಲ್ಲಿ ಅಂಕಣವನ್ನು ಪ್ರಕಟಿಸಲಿದೆ.
     ಗಡಿನಾಡು ಕಾಸರಗೋಡಿನ ಬಹುಭಾಷಾ ನೆಲೆಗಳ ಮಧ್ಯೆ ಶುದ್ದ ಕನ್ನಡ ಭಾಷೆಯನ್ನು ಹೊಸ ತಲೆಮಾರಿಗೆ ಕ್ರಿಯಾತ್ಮಕವಾಗಿ ಪರಿಚಯಿಸುವ ಯತ್ನ ಸಮರಸಸುದ್ದಿಯ ಕನಸು.
      ಶ್ರೀವತ್ಸ ಜೋಶಿಯವರ ಬಗ್ಗೆ ಒಂದಷ್ಟು:
   ಶ್ರೀವತ್ಸ ಜೋಶಿ, ವಿಚಿತ್ರಾನ್ನ, ಪರಾಗಸ್ಪರ್ಷ, ತಿಳಿರು ತೋರಣ, ಮೊದಲಾದ ಇ-ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಕಟವಾಗುವ ವಿಶ್ವವಾಣಿ ಎಂಬ ಪತ್ರಿಕೆಯಲ್ಲಿ ಜನಪ್ರಿಯ ಅಂಕಣ,'ತಿಳುರು ತೋರಣ', ಪ್ರತಿ ಭಾನುವಾರ ಪ್ರಕಟವಾಗುತ್ತಿದೆ. ಪದವಿನೋದ, ಪದಬಂಧ ಆವರ ಬಲುಪ್ರಿಯವಾದ ಹವ್ಯಾಸಗಳು. ಶ್ರೀವತ್ಸ ಜೋಶಿಯವರು. ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹಸಾಮಾಜಿಕ ಮೀಡಿಯಾದಲ್ಲೂ 'ಬತ್ತದ ಉತ್ಸಾಹ'ವೆಂಬ ಹೆಸರಿನಲ್ಲಿ ಅತ್ಯಂತ ಸಕ್ರಿಯರಾಗಿ ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ.ಕವಿ, ವ್ಯಕ್ತಿಚಿತ್ರಗಳು, ಕಾವ್ಯ,ಸಂಗೀತ,ನೃತ್ಯ, ಆಧುನಿಕ ಗ್ಯಾಡ್ಜೆಟ್ ಗಳ ಬಗ್ಗೆ ಮಾಹಿತಿ, ಹೀಗೆ, ಅತ್ಯಂತ ವೈವಿಧ್ಯಮಯ ವಿಷಯಗಳನ್ನು ಆರಿಸಿಕೊಂಡು, ಪ್ರತಿದಿನವೂ ಹೊಸಹೊಸ ಜ್ಞಾ ನ ಸಂಚಯಗಳನ್ನು ವಿಶ್ವದ ಕನ್ನಡ ಓದುಗರಿಗೆ ಒದಗಿಸುತ್ತಾ ಬಂದಿದ್ದಾರೆ.
   ಶ್ರೀವತ್ಸ ಜೋಶಿಯವರು, ವಾಷಿಂಗ್ಟನ್ ಡಿ.ಸಿ.ಯಲ್ಲಿ ಸಾಫ್ಟ್ವೇರ್ ಉದ್ಯೋಗಿ. ಕನ್ನಡದಲ್ಲಿ 'ದಟ್ಸ್ ಕನ್ನಡ ಅಂತರ್ಜಾಲ ಪತ್ರಿಕೆ'ಯಲ್ಲಿ 5 ವರ್ಷಗಳ ಕಾಲ 'ವಿಚಿತ್ರಾನ್ನ'ವೆಂಬ ಸಾಪ್ತಾuಟಿಜeಜಿiಟಿeಜಹಿಕ ಅಂಕಣ ಮತ್ತು ವಿಜಯ ಕರ್ನಾಟಕದಲ್ಲಿ 3 ವರ್ಷ ಪರಾಗಸ್ಪರ್ಶ' ಅಂಕಣ ಬರೆದಿರುವ ಜೋಷಿಯವರ ಬರಹಗಳೆಲ್ಲ 8 ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ. ಈ ಪೈಕಿ 3 ಪುಸ್ತಕಗಳು ಅಮೆರಿಕದ ಪ್ರತಿಷ್ಠಿತ ಲೈಬ್ರರಿ ಆಫ್ ಕಾಂಗ್ರೆಸ್ನ ಪುಸ್ತಕ ಖಜಾನೆಗೆ ಸೇರ್ಪಡೆಗೊಂಡಿವೆ. ಈಗ ವಿಶ್ವವಾಣಿ ಕುಟುಂಬದ ಅಂಕಣಕಾರ. ಪ್ರಚಲಿತ ವಿದ್ಯಮಾನಗಳನ್ನಿಟ್ಟುಕೊಂಡು ಪ್ರತಿ ರವಿವಾರ ತಮ್ಮ ತಿಳಿರುತೋರಣ' ಅಂಕಣವನ್ನು ಪ್ರಥಮಬಾರಿಗೆ ಇ-ಮಾಧ್ಯಮದಿಂದ ಹೊರಬಂದು ಮುದ್ರಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶ್ರೀವತ್ಸ ಜೋಶಿ, ವಿಚಿತ್ರಾನ್ನ, ಪರಾಗಸ್ಪರ್ಷ, ತಿಳಿರು ತೋರಣ, ಮೊದಲಾದ ಅಂಕಣಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಹೊರನಾಡು ಕನ್ನಡಿಗರಾಗಿ, 'ಫೇಸ್ಬುಕ್' ನಂತಹ ಸಾಮಾಜಿಕ ಮೀಡಿಯಾದಲ್ಲೂ ಅತ್ಯಂತ ಸಕ್ರಿಯರಾಗಿ ಕನ್ನಡಭಾಷೆಯ ಪರಿಚಾರಿಕೆಯನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಕಟವಾಗುವ ವಿಶ್ವವಾಣಿ ಎಂಬ ಪತ್ರಿಕೆಯಲ್ಲಿ ಜನಪ್ರಿಯ ಅಂಕಣ, 'ತಿಳುರು ತೋರಣ', ಪ್ರತಿ ರವಿವಾರ ಪ್ರಕಟವಾಗುತ್ತಿದೆ. ಪದವಿನೋದ, ಪದಬಂಧ ಆವರ ಬಲುಪ್ರಿಯವಾದ ಹವ್ಯಾಸಗಳು.
     ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈಗಿನ ಉಡುಪಿಜಿಲ್ಲೆಯ ಬಳಿ ಕಾರ್ಕಳದ ತಾಲ್ಲೂಕಿನ ಮಾಳ  ಎಂಬಹಳ್ಳಿಯಲ್ಲಿ ಜನಿಸಿದರು. ಈ ಪ್ರದೇಶ ಕುದುರೆಮುಖಕ್ಕೆ ಹೋಗುವ ದಾರಿಯಲ್ಲಿದೆ. 7ನೆಯ ಇಯತ್ತೆಯವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾಭ್ಯಾಸಗಳನ್ನು ತಮ್ಮ'ಮಾಳ' ಹಳ್ಳಿಯಲ್ಲೇ ಮಾಡಿದರು. ಎರಡು ವರ್ಷದ ಕಾಲೇಜಿನ ಅಭ್ಯಾಸವನ್ನು 'ಉಜಿರೆ'ಯಲ್ಲಿ ಧರ್ಮಸ್ಥಳ ಮಂಜುನಾಥ ಕಾಲೇಜಿನಲ್ಲಿ ಮಾಡಿದರು. ದಾವಣಗೆರೆಯಲ್ಲಿ ಬಿ.ಇ ಪದವಿ ಬಿ.ಡಿ.ಟಿ ಕಾಲೇಜಿನಲ್ಲಿ 90 ರ ದಶಕದಲ್ಲಿ 91 ರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನಲ್ಲಿ 'ಮೋಟರೋಲ್ಲಾ ಕಂಪೆನಿ'ಯ ಇಂಡಿಯನ್ ಸಬ್ಸಿಡಿಯರಿ ಕಂಪೆನಿಯಲ್ಲಿ ಇ.ಡಿ.ಪಿ ಡಿವಿಷನ್ ನಲ್ಲಿ ಪಬ್ಲಿಕ್ ಸೆಕ್ಟರ್ ಕಂಪೆನಿಯಲ್ಲಿ ಕೆಲಸ. ಉದ್ಯೋಗಾರ್ಥಿಯೆಯಾಗಿ ಸೇರಿಕೊಂಡರು. ಬಳಿಕ ಅಮೆರಿಕದ ಚಿಕಾಗೋ ನಗರಕ್ಕೆ ತೆರಳಿದರು. ವಾಷಿಂಗ್ ಟನ್ ಡಿಸಿಯಲ್ಲಿ , ಬಯೋ ಟೆಕ್ನೋಲೊಜಿಯಲ್ಲಿ ಐ ಟಿ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಬಳಿಕ 2006 ರಲ್ಲಿ ಆ ನಗರದಲ್ಲಿಯೇ ಐ ಬಿ ಎಂ ಕಂಪೆನಿಯಲ್ಲಿ ಫೇಡರಲ್ ಗವರ್ನ ಮೆಂಟ್ ಮತ್ತು ಪ್ರೈವೇಟ್ ಕಂಪೆನಿಗಳಲ್ಲಿ, ಇಂಟರ್ ಫೇಸ್ ಫೆಡರಲ್ ಗವರ್ನಮಿನೆಂಟ್ ಮತ್ತು ಸ್ಟೇಟ್ ಗವರ್ನಮಿನೆಂಟ್ ಪ್ರಾಜೆಕ್ಟ್ಸ್ಜಶಾಖೆಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು.
        ವೃತ್ತಿ ಜೀವನ:
    ಅಮೆರಿಕದಲ್ಲಿ ನೋಡಿದ ಪ್ರದೇಶಗಳ ವಿವರಣೆಗಳನ್ನು 'ಲೆಟ್ ಆಸ್ ನೋ ಯುಎಸ್'ಎನ್ನುವ ರೀತಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆಯಲು ಆರಂಭಿಸಿದರು. ಆಗ ಟ್ರೈಪಾಡ್, ಜಿಯೋಸೈಟೇಷನ್ ಮೊದಲಾದ ಇಂಟರ್ನೆಟ್ ತಾಣಗಳು, ಪರ್ಸನಲ್ ವೆಬ್ ಸೈಟ್ಸ್ ತರಹದವು ಬಳಕೆಯಲ್ಲಿದ್ದವು. ವಾರಕ್ಕೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ ಅಂಕಣಬರೆಯಲು ಆರಂಭಿಸಿದರು ಕೌಟುಂಬಿಕ ಸಾಪ್ತಾಹಿಕ ಸುದ್ದಿ ಪತ್ರ, 'ಖಬ್ರಿ' ಆರಂಭಿಸಿದರು ವರ್ಚುಯಲ್ ಚಿತ್ರಾನ್ನ,ಲಘು ಪ್ರಹಸನಗಳು, ಮಾತುಕತೆ ಕನ್ನಡದಲ್ಲಿ ಶ್ಯಾಮಸುಂದರ್ ಅಮೆರಿಕದಿಂದ ಭಾರತಕೆ ಸೆಪ್ಟೆಂಬರ್ ತಿಂಗಳಲ್ಲಿ ಹೋದರು. ಅಲ್ಲಿಂದ ಒಂದು ಇಮೇಲ್ ಕಳಿಸಿ, ಅದರಲ್ಲಿ ಒಂದು ವಾರಾಂತ್ಯದ ಅಂಕಣವನ್ನು ಕನ್ನಡದಲ್ಲಿ ಪ್ರಾಂಭಿಸುವ ಬಗ್ಗೆ ಜೋಶಿಯವರು ಸಹಕರಿಸಬೇಕೆಂದು ವಿನಂತಿಸಿದರು. ಅಕ್ಟೊಬರ್, 15, 2002 ರಲ್ಲಿ ಶುಭಾರಂಭಗೊಂಡ ವಿಚಿತ್ರಾನ್ನ ಅಂಕಣ, ಸತತವಾಗಿ 5 ವರ್ಷ ನಡೆದುಕೊಂಡು ಬಂತು.ಅನಿವಾಸಿ ಕನ್ನಡಿಗರು ಪ್ರತಿ ಮಂಗಳವಾರವೂ ಪ್ರಕಟವಾಗುತ್ತಿದ್ದ ಅಂಕಣವನ್ನು ಸ್ವಾಗತಿಸಿದರು. ಇಂಟರ್ನೆಟ್ ಪಾರಿಚಯವಿದ್ದ ಅವರು ಕನ್ನಡದಲ್ಲಿ ಲಘು ಧಾಟಿಯಲ್ಲಿ ಮೂಡಿಬರುತ್ತಿದ್ದ ವಿಶ್ಲೇಷಣೆ, ಮನರಂಜನೆಯ ಲೇಖನಗಳನ್ನು ಬಹಳ ಆಸಕ್ತಿಯಿಂದ ಓದುತ್ತಿದ್ದರು.
    2004-05 ರಲ್ಲಿ ವಿಜಯಕರ್ನಾಟಕ ಪತ್ರಿಕೆ ಒಂದು ಹೊಸ ಪ್ರಯೋಗವನ್ನು ಬಳಕೆಗೆ ತಂದಿತು. ವಿಚಿತ್ರಾನ್ನ, ಮತ್ತು ಅನೇಕ ಅನಿವಾಸಿ ಕನ್ನಡಿಗರು ಬರೆದ ಲೇಖನಗಳನ್ನು ಹಾಗೆ ಹಾಗೆಯೇ ಮರು-ಪ್ರಕಟಿಸುವ ಪ್ರಕ್ರಿಯೆಯನ್ನು ಹುಟ್ಟು ಹಾಕಿದರು. ಶ್ರೀವತ್ಸ ಜೋಶಿ, 2007 ರಲ್ಲಿ ವಿಚಿತ್ರಾನ್ನ ಅಂಕಣಕ್ಕೆವಿದಾಯ ಹೇಳಿ, ಪ್ರತ್ಯೇಕ ಅಂಕಣ ಬರೆಯಲು ಅರಂಭಿಸಿದರು. ಕೇವಲ ಇಂಟರ್ನೆಟ್ ನ. ವೆಬ್ ಆಡಿಯನ್ಸ್ ಗೆ ಮುಟ್ಟುತ್ತಿದ್ದ ಲೇಖನಗಳು,ಈಗ ಪ್ರಿಂಟ್ ಮೀಡಿಯಂನಲ್ಲಿ ಹೊರಬಂದು ಪುಸ್ತಕ ಪ್ರಿಯರಿಗೆ ಸಿಗಲಾರಂಭಿಸಿದವು. ತಮ್ಮ 8 ಅಂಕಣ ಸಂಕಲನಗಳನ್ನು ಪ್ರಕಟಿಸಿದರು ಅದರಲ್ಲಿ 3 ಸಂಪುಟಗಳು ವಾಷಿಂಗ್ಟನ್ ನ, ಲೈಬ್ರರಿ ಆಫ್ ಕಾಂಗ್ರೆಸ್ ಆರ್ಕೈವ್ ಗೆ ಸೇರ್ಪಡೆಯಾದ್ದವು.
     ಭಾಷೆಗಳ ಬಗ್ಗೆ ಆಸಕ್ತಿ:
    ಹೈದರಾಬಾದ್ ನಲ್ಲಿ ಕೆಲಸದಲ್ಲಿದ್ದಾಗ, ತೆಲುಗು ಭಾಷೆ ಕಲಿತರು. 'ಈನಾಡು ದಿನಪತ್ರಿಕೆ', 'ಸ್ವಾತಿ ವಾರಪತ್ರಿಕೆ', ಪದಬಂಧವನ್ನು ತೆಲುಗಿನಲ್ಲಿ ತುಂಬುವಷ್ಟು ತೆಲುಗು ಕಲಿತಿದ್ದರು. ಭಾಷಾ ಕ್ರಿಮಿ (ಐಚಿಟಿguಚಿge buಜಿಜಿ)ಪರಿಣಿತಿಯನ್ನು ಸಾಧಿಸಲು ಮತ್ತು ಜನಪ್ರಿಯ ನುಡಿಗಟ್ಟುಗಳನ್ನು ಓದಿ ಅರ್ಥಮಾಡಿಕೊಂಡು ಮರು ಬಳಸುವಷ್ಟು ಪರಿಣತಿ ಗಳಿಸಿದರು ಇದರಿಂದಾಗಿ ಆವರ ಲೇಖನಗಳಲ್ಲಿ ಒಂದು ಹೊಸ ಆಯಾಮ ಬಂತು.
             ಅಮೆರಿಕದಲ್ಲಿ:
    ಅಮೆರಿಕಕ್ಕೆ ಹೋದ ಮೊದಲಿನಲ್ಲಿ ಅಲ್ಲಿನ ಪ್ರೇಕ್ಷಣಿಕ ಸ್ಥಳಗಳನ್ನು ನೋಡಿದ ಬಗ್ಗೆ ಒಂದು ಸರಣಿ ತಯಾರಿಸಿದ್ದರು. ಎಲ್ಲೆಲ್ಲಿ ಏನೇನು ನೋಡಿದೆ, ಇತ್ಯಾದಿ. 'ಐeಣ us ಞಟಿoತಿ US' ಎನ್ನುವ ರೀತಿಯಲ್ಲಿ ಹಲವಾರು ಲೇಖನಗಳನ್ನು ಇಂಗ್ಲೀಷಿನಲ್ಲಿ ಬರೆಯುತ್ತಿದ್ದರು. ಆಗ 'ಬ್ಲಾಗ್' ಗಳಾಗಲೀ ಸಾಮಾಜಿಕ ತಾಣಗಳಾಗಲೀ (ಫೇಸ್ಬುಕ್) ಇನ್ನೂ ಬಳಕೆಗೆ ಬಂದಿರಲಿಲ್ಲ.ಅಮೆರಿಕದಲ್ಲಿ ತಾನುಕಂಡುಕೊಂಡ ವಿಷಗಳನ್ನು ಸ್ನೇಹಿತರೊಡನೆ ಬಂಧುಗಳ ಜೊತೆ  ಹಂಚಿಕೊಳ್ಳುವ ಪತ್ರಿಕೆ ಆರಂಭಿಸಿದರು. 'ಖಬ್ರಿ ಮಾಸಿಕ'ಕುಟುಂಬ ಪತ್ರಿಕೆ. ಮನೆಯಲ್ಲಿ ಚಿತ್ಪಾವನಿ ಭಾಷೆ ಬಳಸುತ್ತಾರೆ. ಚಿತ್ಪಾವನಿ, ಮರಾಠಿಯ ಉಪಭಾಷೆ. ಡೆಟ್ರಾಯಿಟ್ ನಗರದಲ್ಲಿ ನಡೆದ 4 ನೆಯ ಅಕ್ಕ ಕನ್ನಡ ಸಮ್ಮೇಳನದಲ್ಲಿ, ದಟ್ಸ್ ಕನ್ನಡ-ಇ ಪತ್ರಿಕೆಯ ಸಂಪಾದಕ, ಶ್ರೀ.ಎಸ್.ಕೆ.ಶ್ಯಾಮಸುಂದರ್ ರವರ ಭೇಟಿಯಾಯಿತು.ಅವರು ವಾಶಿಂಗ್ಟನ್ ಡಿ.ಸಿಗೂ ಬಂದಿದ್ದರು. ಜೋಶಿಯವರ ಲಘುಬರಹ ಶೈಲಿ ಅವರಿಗೆ ಇಷ್ಟವಾಯಿತು. ಕನ್ನಡದಲ್ಲಿ ಬರೆಯುವ ಬಗ್ಗೆ ಸಲಹೆಮಾಡಿದ್ದಲ್ಲದೆ, ಭಾರತಕ್ಕೆ ಮರಳಿದ ಬಳಿಕೆ ಒಂದು ಇಮೇಲ್ ಕಳಿಸಿ ತಮ್ಮ ಪತ್ರಿಕೆಯಲ್ಲಿ ಒಂದು ಅಂಕಣ ಪ್ರಾರಂಭಿಸಲು ಕರೆಕೊಟ್ಟರು. 'ವಿಚಿತ್ರಾನ್ನ' ಹಾಗೆ ಶುರುವಾಯಿತು. ಗಣೇಶನ ಆಶೀರ್ವಾದದೊಂದಿಗೆ, ಗಣಪತಿಯ 'ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ, ನಂಬಿದವರ..... ಒಂದು ಒಪ್ಪಂದವಾಯಿತು. ಅಂತರ್ಜಾಲದಲ್ಲಿ ಕನ್ನಡದಲ್ಲಿ ಲಭ್ಯವಾದ ಬರವಣಿಗೆಯನ್ನು ಓದಿ ಅನಿವಾಸಿ ಕನ್ನಡಿಗರಿಗೆ ಆಶ್ಚರ್ಯವಾಯಿತು. ಒಳ್ಳೆಯ ಪ್ರತಿಕ್ರಿಯೆ, ಮತ್ತು ಸ್ವಾಗತ ಸಿಕ್ಕಿತು. 5 ವರ್ಷ ಹಲವಾರು ವಿಷಯಗಳನ್ನು ತೆಗೆದುಕೊಂಡು ಲೇಖನಗಳನ್ನು ಬರೆದರು. ಅಮೆರಿಕದ ಜೀವನ, ಕನ್ನಡಿಗರ ಹೊಂದಾಣಿಕೆ ಅನುಭವಗಳು, ಜನಪ್ರಿಯವಾಗಿವೆ.

       ಸಮರಸ ಶಬ್ದಾಂತರಂಗ ಸೌರಭ- ಕಲಿಕೆ-01

1. "ಅಗತ್ಯತೆ"ಯಲ್ಲಿ ತೆ ಅಗತ್ಯ ಇಲ್ಲ.

`ಅಗತ್ಯತೆ ತಪ್ಪು ಪದಪ್ರಯೋಗ. ಕೊನೆಯ "ತೆ" ಬೇಡ. "ಅಗತ್ಯ" ಎಂಬ ಪದವೇ ನಾಮಪದ.  ಆದ್ದರಿಂದ "ತೆ" ಅಗತ್ಯವಿಲ್ಲ. ಸಾಮಾನ್ಯವಾಗಿ "ತೆ" ಸೇರಿಸುವುದು ನಾಮವಿಶೇಷಣ ಪದಗಳನ್ನು ವಾಕ್ಯದಲ್ಲಿ ನಾಮಪದ ರೂಪದಲ್ಲಿ ಬಳಸಲಿಕ್ಕೆ.
 ಉದಾ: ಸಮಾನ -> ಸಮಾನತೆ; ನಿಖರ -> ನಿಖರತೆ; ದುರ್ಬಲ -> ದುರ್ಬಲತೆ (ದೌರ್ಬಲ್ಯ ಸಹ ಆಗುತ್ತದೆ)

   ಆದರೆ "ಅಗತ್ಯ" ಎಂಬ ಪದ ಆಗಲೇ ನಾಮಪದವಾಗಿ ಇರುವುದರಿಂದ ಅದಕ್ಕೆ ಮತ್ತೆ ತೆ ಸೇರಿಸುವುದು ಸಲ್ಲದು.

2. ಪ್ರಕಾರ ಮತ್ತು ಪ್ರಾಕಾರ.

    ಪ್ರಕಾರ ಎಂದರೆ ವಿಧ, ನಮೂನೆ, ಮಾದರಿ, ರೀತಿ, ಬಗೆ ಎಂದು ಅರ್ಥ. ಉದಾ: ಭರತನಾಟ್ಯ, ಕೂಚಿಪ್ಪುಡಿ, ಕಥಕ್, ಒಡಿಸ್ಸಿ... ಇವೆಲ್ಲ ಶಾಸ್ತ್ರೀಯ ನೃತ್ಯದ ಪ್ರಕಾರಗಳು. ಮೃದಂಗ, ಘಟ, ಖಂಜಿರ, ತಬಲಾ ಇವೆಲ್ಲ ತಾಳವಾದ್ಯ ಪ್ರಕಾರಗಳು.
  ಪ್ರಾಕಾರ ಎಂದರೆ ಗೋಡೆ, ಆವರಣ ಉದಾ: ಶಾಲೆಯ ಪ್ರಾಕಾರದೊಳಗೆ ಚಿಕ್ಕದೊಂದು ಕೈತೋಟ ಮಾಡಿದ್ದಾರೆ.

3. 'ಕುರಿತು ಮತ್ತು ಹೊರತುಗಳ ಮುನ್ನ ಷಷ್ಠೀ ವಿಭಕ್ತಿ ಅಲ್ಲ, ದ್ವಿತೀಯಾ ವಿಭಕ್ತಿ ಇರಬೇಕು

ಹಾಗಾಗಿ, "ಅವರ ಕುರಿತು" ಅಲ್ಲ, "ಅವರನ್ನು ಕುರಿತು" ಎಂದು ಬರೆಯಬೇಕು. "ಭಾಷೆಯ ಕುರಿತು" ಅಲ್ಲ, "ಭಾಷೆಯನ್ನು ಕುರಿತು" ಎಂದು ಬರೆಯಬೇಕು. ಅದೇರೀತಿ "ಅವರ ಹೊರತು" ಅಲ್ಲ, "ಅವರನ್ನು ಹೊರತು" ಎಂದು ಬರೆಯಬೇಕು. "ನಿಮ್ಮ ಹೊರತು" ಅಲ್ಲ, "ನಿಮ್ಮನ್ನು ಹೊರತು" ಎಂದು ಬರೆಯಬೇಕು.

ಇದಕ್ಕೆ ಕಾರಣವೇನೆಂದರೆ ಷಷ್ಠೀ ವಿಭಕ್ತಿಯ ಅನಂತರದ ಪದ ಹೆಚ್ಚಾಗಿ ನಾಮಪದವೇ ಆಗಿರುತ್ತದೆ. ಉದಾ: ಅವನ ಮನೆ; ದನದ ಹಾಲು; ನೀರಿನ ಕಾಲುವೆ.

ಕುರಿತು/ಹೊರತು - ಇವು ನಾಮಪದಗಳಲ್ಲ. ಯಾವುದೋ ವಸ್ತುವಿನ ಅಥವಾ ವ್ಯಕ್ತಿಯ ವಿಚಾರವಾಗಿ ಹೇಳುವಾಗ ಪ್ರತ್ಯಯವಾಗಿ ಬಳಕೆಯಾಗುವ, ಸ್ವತಂತ್ರ ಅಸ್ತಿತ್ವ ಇಲ್ಲದ ಪದಗಳು. ಇಂಗ್ಲಿಷ್‍ನಲ್ಲಿ "about" ಇದ್ದ ಹಾಗೆ.
                   ಮುಂದುವರಿಯುವುದು...........
                                                                        ಶ್ರೀವತ್ಸ ಜೋಶಿ.ವಾಶಿಗ್ಟಂನ್ ಡಿಸಿ
          FEEDBACK: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries