ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಜೂ.20 ರಂದು ಸಂಜೆ 4.30 ರಿಂದ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ 68 ನೇ ಪುಣ್ಯ ಸ್ಮರಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಗಣಪತಿ ಕೋಟೆಕಣಿ ಅಧ್ಯಕ್ಷತೆ ವಹಿಸುವರು. ಸ್ವಾಮೀಜಿಯವರ ಕುರಿತು ವಾಮನ ರಾವ್ ಬೇಕಲ್ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ದಿನೇಶ್ ಚಂದ್ರಗಿರಿ, ಸತೀಶ್ ಕೂಡ್ಲು, ಲೋಕೇಶ್ ಕುಮಾರ್ ಅಣಂಗೂರು, ಜಗದೀಶ ಕೂಡ್ಲು, ಬಿ.ರಾಮಮೂರ್ತಿ ಬೀರಂತಬೈಲ್, ಹರೀಶ್ ಕುಮಾರ್ ಅಣಂಗೂರು, ಜೋಗೇಂದ್ರನಾಥ್ ವಿದ್ಯಾನಗರ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸಪ್ತಗಿರಿ ಮಹಿಳಾ ಭಜನಾ ಸಂಘ ಪಾರೆಕಟ್ಟೆ ಮತ್ತು ಶ್ರೀ ಹರಿ ಮಹಿಳಾ ಭಜನಾ ಸಂಘ ಕೂಡ್ಲು ಅವರಿಂದ ಭಿಕ್ಷು ಲಕ್ಷ್ಮಣಾನಂದ ಕೀರ್ತನೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಕ್ಷಯ ಕುಮಾರ್ ಎಚ್. ಹಾಗೂ ರಾಜೇಶ್ವರಿ ಎಚ್. ಅವರನ್ನು ಅಭಿನಂದಿಸಿ ಗೌರವಿಸಲಾಗುವುದು.