ನವದೆಹಲಿ: ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು (ಐಐಎಸ್ಸಿ) ಮೂರು ಭಾರತೀಯ ವಿಶ್ವವಿದ್ಯಾಲಯಗಳು 2020 ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಅಗ್ರ 200 ರಲ್ಲಿ ಸ್ಥಾನ ಪಡೆದಿವೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಸತತವಾಗಿ ಎರಡನೇ ಬಾರಿಗೆ ಭಾರತದ ಅಗ್ರ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿದೆ. ಐಐಟಿ ಬಾಂಬೆ ಈ ಮುನ್ನ 162 ನೇ ಸ್ಥಾನದಲ್ಲಿದ್ದದ್ದು ಹತ್ತು ಸ್ಥಾನ ಮೇಲೇರಿ 152ಕ್ಕೆ ತಲುಪಿದೆ. ಆದಾಗ್ಯೂ, ಕಳೆದ ವರ್ಷ ಭಾರತದ ಎರಡನೇ ಅತ್ಯುತ್ತಮ ವಿಶ್ವವಿದ್ಯಾನಿಲಯ ಸ್ಥಾನ ಪಡೆದಿದ್ದ ಐಐಎಸ್ಸಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಐಐಟಿ ದೆಹಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಜಾಗತಿಕವಾಗಿ 1,000 ವಿಶ್ವವಿದ್ಯಾನಿಲಯಗಳಲ್ಲಿ ಭಾರಾದ 23 ವಿಶ್ವವಿದ್ಯಾನಿಲಯಗಳ ಹೆಸರಿದ್ದು ಈ ಬಾರಿ ಒಪಿ ಜಿಂದಲ್ ಗ್ಲೋಬಲ್ ಯೂನಿವರ್ಸಿಟಿ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.
ಉನ್ನತ ಶಿಕ್ಷಣ ಸಲಹಾ ಸಂಸ್ಥೆ ಕ್ಯೂಎಸ್ ಪ್ರಕಾರ, ಐಐಟಿ ಬಾಂಬೆ ಶ್ರೇಯಾಂಕವು ತನ್ನ ಸಂಶೋಧನಾ ಕಾರ್ಯಕ್ಷಮತೆಯ ಸುಧಾರಣೆಯ ಕಾರಣದಿಂದಾಗಿ ಉನ್ನತ್ತ ಮಟ್ಟಕ್ಕೇರಿದೆ.