ಕುಂಬಳೆ: ಕಾಸರಗೋಡು ಸಹಿತ ದಕ್ಷಿಣಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ನೇತೃತ್ವದಲ್ಲಿ ಮಕ್ಕಳ ಧ್ವನಿ 2019 ಸಮಾರಂಭವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ. ಇದರ ಅಂಗವಾಗಿ ಶಾಲಾ ಸಂಚಿಕೆಗಳ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯು ಪ್ರಾಥಮಿಕ, ಫ್ರೌಢ ಹಾಗೂ ಪದವಿಪೂರ್ವ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಮುದ್ರಿತ ಅಥವಾ ಹಸ್ತಪ್ರತಿ ಬರಹಗಳನ್ನು ತಮ್ಮ ಶಾಲಾ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಬಿ.ಶ್ರೀನಿವಾಸ ರಾವ್. ನಿಕಟಪೂರ್ವ ಅಧ್ಯಕ್ಷರು ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ, ಕಲ್ಲಾಪು ಬಿ.ಮನೆ. ಉರ್ವ ಮಂಗಳೂರು 575006 ಎಂಬ ವಿಳಾಸಕ್ಕೆ ಜೂ.30ರ ಮೊದಲು ತಲಪುವಂತೆ ಕಳಿಸಬಹುದಾಗಿದೆ ಎಂದು ಸಂಘಟಕರಲ್ಲಿ ಓರ್ವರಾದ ಸಾಹಿತಿ ವಿ.ಬಿ.ಕುಳಮರ್ವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ವಿ.ಬಿ.ಕುಳಮರ್ವ 9446484585 ಸಂಖ್ಯೆ ಸಂಪರ್ಕಿಸಬಹುದಾಗಿದೆ.
ಮಕ್ಕಳ ಧ್ವನಿ 2019-ಶಾಲಾ ಸಂಚಿಕೆ ಸ್ಪರ್ಧೆಗೆ ಆಹ್ವಾನ
0
ಜೂನ್ 27, 2019