ಬದಿಯಡ್ಕ: ಜೂ.21ರಂದು ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಕರಪತ್ರವನ್ನು ಯೋಗಶಿಕ್ಷಕಿ ಶಾರದಾ ಕಾಡಮನೆ ಅವರು ನಿವೃತ್ತ ಪ್ರಾಂಶುಪಾಲ ಮೈರ್ಕಳ ನಾರಾಯಣ ಭಟ್ ಅವರಿಗೆ ಶನಿವಾರ ನೀಡಿ ಬಿಡುಗಡೆಗೊಳಿಸಿದರು.
ಯೋಗ ದಿನಾಚರಣೆಯ ಅಂಗವಾಗಿ ಬದಿಯಡ್ಕ ಗಣೇಶಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು. ಸಂಚಾಲಕರಾದ ಕರಿಂಬಿಲ ಲಕ್ಷ್ಮಣ ಪ್ರಭು, ಯೋಗಶಿಕ್ಷಕ ಸೂರ್ಯನಾರಾಯಣ ವಳಮಲೆ, ನಂದಿತಾ ಕರಿಂಬಿಲ ಜೊತೆಗಿದ್ದರು. ಜೂ.21ರಂದು ಸಾಯಂಕಾಲ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಸ್ನೇಹ ಪ್ರಕಾಶ್, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಡಾ. ಸಪ್ನ ಜೆ.ಉಕ್ಕಿನಡ್ಕ, ಜನಪ್ರತಿನಿಧಿಗಳಾದ ರಾಜೇಶ್ವರಿ ಎಂ., ಬಾಲಕೃಷ್ಣ ಶೆಟ್ಟಿ ಕಡಾರು, ಲಕ್ಷ್ಮೀನಾರಾಯಣ ಪೈ ಬಳ್ಳಂಬೆಟ್ಟು, ಡಾ. ಕೇಶವಪ್ರಸಾದ ಚಾಲತ್ತಡ್ಕ, ಯೋಗ ಶಿಕ್ಷಕ ಸೂರ್ಯನಾರಾಯಣ ವಳಮಲೆ, ರಮ್ಯ ಬನಾರಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಬದಿಯಡ್ಕ ಪೇಟೆಯಲ್ಲಿ ನಡೆಯಲಿರುವ ಆರೋಗ್ಯದೆಡೆಗೆ ಯೋಗ ನಡಿಗೆಗೆ ವಿಶ್ವನಾಥ ಪ್ರಭು ಕರಿಂಬಿಲ ದೀಪಶಿಖೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.