HEALTH TIPS

ಸಮರಸ ಈ ಹೊತ್ತಿಗೆ-ಹೊಸ ಹೊತ್ತಗೆ-ಪುಸ್ತಕ ಹೊಸ ಚಿಗುರು-ಸಂಚಿಕೆ 21

 
             ಪುಸ್ತಕ: ಹೊಸ ಚಿಗುರು
             ಲೇಖಕರು : ಟಿ.ಕೆ.ವಿ ಭಟ್
              ಬರಹ:ಚೇತನಾ ಕುಂಬಳೆ 
*ಹಳೇ ಬೇರಲ್ಲಿ ಹೊಸ ಚಿಗುರು*
         "ಸಾಹಿತ್ಯ ಸರಸ್ವತಿಯೇ ಹಾಗೆ. ತನಗೆ ಪ್ರೀತಿ ಪಾತ್ರರನ್ನು ಯಾವಾಗ ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಾಳೋ ಅರ್ಥವಾಗುವುದಿಲ್ಲ. ಕಾಲ, ದೇಶ, ಭಾಷೆ ಜಾತಿ ಹೆಚ್ಚೇಕೆ ಪ್ರಾಯವನ್ನೂ ಗುಣಿಸದೆ ತನ್ನ.ಪ್ರೀತಿಯ ಕುವರರನ್ನು ಕರೆದು ಆಲಂಗಿಸುತ್ತಾಳೆ. ತನ್ನ ಮೃದು ಕೈಗಳಿಂದ ಸಾಹಿತ್ಯ ಪಥದಲ್ಲಿ ಅಂಬೆಗಾಲಿಡುವ ಮಕ್ಕಳನ್ನು ಕೈಹಿಡಿದು ನಡೆಸುತ್ತಾಳೆ. ಮಕ್ಕಳ ಚಟುವಟಿಕೆ ಕಂಡು ತಾನೂ ಸಂಭ್ರಮಿಸುತ್ತಾಳೆ". ಎಂಬ ಯೋಗೀಶ್ ರಾವ್ ಚಿಗುರುಪಾದೆಯವರ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಇದಕ್ಕೆ ಉತ್ತಮ ನಿದರ್ಶನವೇ ಟಿ.ಕೆ.ವಿ ಭಟ್.
         ಸಾಹಿತ್ಯ ಲೋಕದಲ್ಲಿ ಟಿ.ಕೆ.ವಿ ಭಟ್ ಎಂದೇ ಗುರುತಿಸಿಕಚಂಡಿರುವ ಟಿ.ಕೆ ವೆಂಕಟರಮಣ ಭಟ್ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಬಳಿಕ ಬರವಣಿಗೆಯನ್ನು ಪ್ರಾರಂಭಿಸಿದವರು. ಟಿ.ಕೆ.ವಿ ಭಟ್ ಅವರ ಮೊದಲ ಕವನ ಸಂಕಲನ 'ಹೊಸ ಚಿಗುರು'. ಇದರಲ್ಲಿ ಕವನ ಚುಟುಕು ಹಾಗೂ ಗಜಲ್ ಎಂಬ 3 ಪ್ರಕಾರಗಳಿರುವುದು ವಿಶೇಷ.  ಇದರಲ್ಲಿ 60ಕ್ಕೂ ಹೆಚ್ಚು ಕವನಗಳಿವೆ 10ಕ್ಕೂ ಹೆಚ್ಚು ಗಜಲ್ ಗಳಿವೆ. ಈ ಸಂಕಲನಕ್ಕೆ ಪತ್ರಕರ್ತರಾದ ಗಣೇಶ ಪ್ರಸಾದ ಪಾಂಡೇಲು ಅವರು ಮುನ್ನುಡಿ ಬರೆದಿದ್ದಾರೆ. ಯೋಗೇಶರಾವ್ ಚಿಗುರುಪಾದೆಯವರು ಬೆನ್ನುಡಿ ಬರೆದಿದ್ದಾರೆ.
    ಆರಂಭದಲ್ಲಿಯೇ 'ಮುಂಜಾವದ ಸ್ವಾಗತ' ಕವಿತೆಯಲ್ಲಿ ಹೊಸತನಕ್ಕೆ ಜೀವ ತುಂಬುವ, ಮನಸ್ಸಿಗೆ ಆನಂದ ನೀಡುವ ಮುಜಾನೆಯ  ಸೌಂದರ್ಯವನ್ನು ಆಸ್ವಾದಿಸಲು, ಕೋಗಿಲೆಗಳ ಇಂಪಾದ ಗಾನ ಕೇಳಲು, ನವಿಲ ನರ್ತನವನ್ನು  ನೋಡಲು ಹೊರಗೆ ಬನ್ನಿರೆಂದು ಎಲ್ಲರನ್ನು  ಕರೆಯುತ್ತಾರೆ. ಅವರು ತಮ್ಮ 'ಕಿವಿಮಾತು' ಕವಿತೆಯ ಮೂಲಕ ಶಬರಿಮಲೆಯ ಬಗೆಗಿನ ನಂಬಿಕೆ, ಸಂಪ್ರದಾಯ, ಆಚರಣೆಗಳನ್ನು ಉಲ್ಲಂಘಿಸಬೇಡಿ ಎಂದು ಮಹಿಳೆಯರಿಗೆ ಕಿವಿಮಾತು ಹೇಳುತ್ತಾರೆ. 'ಅನ್ನದಾತ' ಕವಿತೆಯಲ್ಲಿ ಅನ್ನದಾತನಾದ ರೈತ ಸೂರ್ಯನಿಗೂ ಮೊದಲೇ ಏಳುವಾತ, ಹಸಿವನ್ನೂ ಮರೆತು ಹಗಲಿರುಳೂ ದುಡಿವಾತ ಕೊನೆಗೂ ಅನಾಥನಾಗಿಬಿಡುತ್ತಾನೆ ಎಂದು ಮರುಗುವುದರೊಡನೆ ಆತನೂ ಸುಖವಾಗಿರಲೆಂದು ಬಯಸುತ್ತಾರೆ. 'ಸಾಲು ದೀಪ' ಪ್ರೀತಿಯ ಭಾವ ಉಕ್ಕಲು, ಅಪನಂಬಿಕೆ ಹೋಗಿ ನಂಬಿಕೆ ಉಳಿಯಲು ದೀಪ ಹಚ್ಚೋಣ, ಅ ಜ್ಞಾ ನ ತೊಲಗಿ ಸು ಜ್ಞಾ ನ ದೊರೆಯಲು, ಜ್ಞಾ ನದ ಜ್ಯೋತಿ ಬೆಳಗಲು, ಪ್ರೀತಿ ಪ್ರೇಮ ಉಳಿಯಲು ಒಲುಮೆಯ ದೀಪ ಹಚ್ಚೋಣ ಎಂದು ಬಂಧುಗಳಿಗೆಲ್ಲ ಕರೆಕೊಡುತ್ತಾರೆ.  'ಕೋಟೆ' ಕವನದಲ್ಲಿ  ಬದುಕಿನಲ್ಲಿ ಮುಖ್ಯವಾಗಿ ನಂಬಿಕೆ ಬೇಕು. ಜಾತಿ ಮತಗಳ ಕೋಟೆ ಮುರಿದು ನಾನೆಂಬುದನ್ನು ಮರೆತು ನಾವು ನಮ್ಮವರೆಂಬ ಭಾವ ಮೂಡಬೇಕು ಎನ್ನುತ್ತಾರೆ.  ಬದುಕೆಂದರೆ, ನೋಡಿ ಅರ್ಥೈಸಿಕೊಂಡು, ಕೇಳಿ ತಿಳಿದುಕೊಳ್ಳಬೇಕು, ಮಾಡಿ ಕಲಿಯಬೇಕಾಗುತ್ತದೆ. ಹಿರಿಯರ ಮಾತುಗಳನ್ನು ಕೇಳಬೇಕು ಅವರು ಹೇಳಿದ್ದನ್ನು ಅನುಸರಿಸಬೇಕು. ಅವರೆಲ್ಲ ನಮ್ಮ ಅಭ್ಯುದಯಶನ್ನೇ ಬಯಸುವವರು. ಅಪ್ಪ ಅಮ್ಮ, ಸಹೋದರರು ಹೇಳುವ ಮಾತುಗಳನ್ನು 'ಜಾಗ್ರತೆ' ಕವನದಲ್ಲಿ ತಿಳಿಸಿದ್ದಾರೆ. 'ಬದುಕು-ಬಂಡಿ' ಕವನದಲ್ಲಿ ಬದುಕನ್ನು  ಬಂಡಿಗೆ ಹೋಲಿಸುತ್ತಾರೆ. ಅದರ ಸೂತ್ರವನ್ನು ಮೇಲಿರುವ ದೇವರು ಹಿಡಿದುಕೊಂಡು ನಿಯಂತ್ರಿಸುವನು. ಈ ಬದುಕಿನ ಬಂಡಿ ನಾವಂದುಕೊಂಡಂತೆ ಸಾಗುವುದಿಲ್ಲ.  ಅದನ್ನು ಅರಿತು ನಡೆಸಬೇಕು ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸುತ್ತಾರೆ.  ವೇದಿಕೆಯೇರಿದಾಗ ನಕ್ಕು ನಗಿಸುವ, ಪರದೆಯ ಹಿಂದೆ ಕಣ್ಣೀರಿಡುವ, ನೋವು ನುಂಗಿಕೊಂಡು ಬದುಕಿನ ನಾಟಕದಲ್ಲಿ ಮುಳುಗೇಳುವ ವಿದೂಷಕನನ್ನು 'ಕಲಾವಿದ' ಕವಿತೆಯಲ್ಲಿ ಪರಿಚಯಿಸುತ್ತಾರೆ. ಕೆಲವೊಂದು ಆಸೆಗಳು ಈಡೇರುತ್ತವೆ. ಮತ್ತೊಂದಿಷ್ಟು ನಿರಾಸೆಯನ್ನುಂಟು ಮಾಡುವ ವಿಚಾರವನ್ನು 'ಆಸೆ ನಿರಾಸೆ' ಕವಿತೆಯಲ್ಲಿ ಹೇಳುತ್ತಾರೆ. ತಮ್ಮ  ಅಪ್ಪ ಅಮ್ಮನನ್ನೇ ದೇವರೆಂದು ಪೂಜಿಸುವ ಕವಿ ಮನೆಯನ್ನೇ ದೇಗುಲವೆನ್ನುತ್ತಾರೆ. ಹೀಗೆ ಇಲ್ಲಿನ ಕವಿತೆಗಳಲ್ಲಿ ಸಾಮಾಜಿಕ ಧಾರ್ಮಿಕ ವಿಚಾರಗಳು ಪ್ರಕೃತಿ ವರ್ಣನೆ, ನಗುವ ಹೂಗಳು, ಕನಸು ಜೇಡರ ಬಲೆ, ಗೌರಿ ಶಂಕರ ಶಿಖರ,ಮೊದಲಾದ ವೈವಿಧ್ಯಮಯ ವಿಷಯಗಳು  ಕಂಡುಬರುತ್ತವೆ. ಇಲ್ಲಿನ ಕೆಲವೊಂದು ಕವನಗಳು ಪ್ರಾಸಬದ್ಧವಾಗಿರುವುದನ್ನೂ ಗಮನಿಸಬಹುದು.  ಹಾಗೆಯೇ ಇತ್ತೀಚೆಗೆ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಗಜಲ್ ನ ಬಗೆಗಿನ ಅಧ್ಯನವನ್ನೂ ನಡೆಸಿರುವುದಕ್ಕೆ ಇಲ್ಲಿನ ಗಜಲ್ ಗಳೇ ಸಾಕ್ಷಿ. 
                                                            ಬರಹ: ಚೇತನಾ ಕುಂಬ್ಳೆ
                               FEEDBACK:samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries