ಕಾಸರಗೋಡು: ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಚುನಾವಣೆಯ ವೆಚ್ಚ ಸಂಬಂಧ ಗಣನೆ ಜೂ.22ರ ಮೊದಲು ಚುನಾವಣೆ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ನಿಗದಿತ ದಿನಾಂಕದ ಮುಂಚಿತವಾಗಿ ನಿಗದಿತ ಮಾದರಿಯಲ್ಲಿ ಚುನಾವಣೆ ವೆಚ್ಚ ಸಲ್ಲಿಸಬೇಕಿದ್ದು, ಸೂಕ್ತ ಕಾರಣಗಳಿಲ್ಲದೆ ಈ ಆದೇಶ ಉಲ್ಲಂಘಿಸಿದರೆ ಜನಾಧಿಪತ್ಯ ನಿಯಮ 10 ಎ ಕಾಯಿದೆ ಪ್ರಕಾರ ಚುನಾವಣೆ ಆಯೋಗ ಆರೋಪಿಗೆ ಮೂರು ವರ್ಷದ ಅನರ್ಹತೆ ಹೇರಲಿದೆ ಎಂದವರು ಹೇಳಿದರು.
ಚುನಾವಣೆ ಗಣನೆ ಸಿದ್ಧ ಪಡಿಸುವ ನಿಟ್ಟಿನಲ್ಲಿ ಜೂ.15ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. ಅಭ್ಯರ್ಥಿಗಳು ಮತ್ತು ಅವರ ಏಜೆಂಟರು ಭಾಗವಹಿಸಬಹುದು ಎಂದವರು ನುಡಿದರು.
ಅಭ್ಯರ್ಥಿಗಳು ಸಿದ್ಧಪಡಿಸುವ ಗಣನೆ ಮತ್ತು ಚುನಾವಣೆ ಆಯೋಗ ಸಿದ್ಧಪಡಿಸುವ ಷೋಡೋ ಒಬ್ಸರ್ ವೇಷನ್ ರೆಜಿಸ್ಟರ್ಡ್ ಪರಸ್ಪರ ಹೋಲಿಕೆ ನಡೆಸುವ ಸಂಬಂಧ ಜೂ.18ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆಯಲ್ಲೂ ಅಭ್ಯರ್ಥಿ ಯಾ ಏಜೆಂಟರು ಭಾಗವಹಿಸಬಹುದು ಎಂದವರು ತಿಳಿಸಿದರು.